ಅನುಕಂಪದ ಆಧಾರದ ಸರ್ಕಾರಿ ನೌಕರಿ ಹಕ್ಕಲ್ಲ| ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಅನುಕಂಪದ ಸರ್ಕಾರಿ ನೌಕರಿ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅನುಕಂಪದ ಆಧಾರದಲ್ಲಿ ನೀಡುವ ಸರ್ಕಾರಿ ನೌಕರಿಯು ಹಕ್ಕಲ್ಲ ಎಂದು ಅಭಿಪ್ರಾಯಪಟ್ಟಿದೆ.

Ad Widget ... ..

ಅನುಕಂಪದ ನೌಕರಿ ಒಂದು ರೀತಿಯ ವಿನಾಯಿತಿಯೇ ಹೊರತು ಅದು ಹಕ್ಕು ಅಲ್ಲ. ಕುಟುಂಬದ ಸದಸ್ಯ ಹಠಾತ್ ನಿಧನರಾದಾಗ ಆದ ಹಾನಿಯಿಂದ ಚೇತರಿಸಿಕೊಳ್ಳಲು ಕುಟುಂಬಕ್ಕೆ ಅವಕಾಶ ನೀಡುವ ಉದ್ದೇಶದಿಂದ ಮಾತ್ರ ಅನುಕಂಪದ ಉದ್ಯೋಗ ನೀಡಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

Ad Widget

ಮಹಿಳೆಯೊಬ್ಬರು ಅನುಕಂಪದ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಿ ಸ್ವಾಮ್ಯದ ರಸಗೊಬ್ಬರ ಹಾಗೂ ರಾಸಾಯನಿಕ ಕಂಪನಿ ಟ್ರಾವಂಕೋರ್ ಲಿ.ಗೆ ಕೇರಳ ಹೈಕೋರ್ಟ್ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲಾಗಿತ್ತು.

Leave a Comment

Your email address will not be published. Required fields are marked *