Ad Widget .

ಸುಳ್ಯ: ರಸ್ತೆ ದುರಸ್ತಿ ಮಾಡಿಕೊಡುವಂತೆ ಸ್ಥಳೀಯರಿಂದ ಅಂಬೇಡ್ಕರ್ ರಕ್ಷಣೆ ವೇದಿಕೆಗೆ ಮನವಿ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮಿತ್ತೂರು ಉಬರಡ್ಕ ಗ್ರಾಮದ ಕಟ್ಟಕೊಡಿ ಯಾವಟೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ಹದಕ್ಕೆಟ್ಟು ಹೋಗಿದ್ದು ಇದನ್ನು ದುರಸ್ತಿ ಮಾಡಿಕೊಡುವಂತೆ ಸ್ಥಳೀಯರಿಂದ ಅಂಬೇಡ್ಕರ್ ರಕ್ಷಣೆ ವೇದಿಕೆಗೆ ಮನವಿ ನೀಡಲಾಯಿತು.

Ad Widget . Ad Widget .

ಮಿತ್ತೂರು ಉಬರಡ್ಕ ಗ್ರಾಮದ ಕಟ್ಟಕೊಡಿ ಯಾವಟೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ಹದಕ್ಕೆಟ್ಟು ಹೋಗಿದ್ದು ರಸ್ತೆಗೆ ಕಾಂಕ್ರಿಟ್ ಮಾಡಿಕೊಡಿಯೆಂದ್ದು ಸುಳ್ಯ ಶಾಸಕರಿಗೆ ಮತ್ತು ಸಂಬಂಧ ಪಟ್ಟ ಇಲಾಖೆಗೆ ಹಲವು ವರ್ಷಗಳಿಂದ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಿಲ್ಲವೆಂದು ಪರಿಶಿಷ್ಟ ಪಂಗಡದವರು ಮತ್ತು ಅಲ್ಲಿಯ ನಿವಾಸಿಗಳು ಅಂಬೇಡ್ಕರ್ ರಕ್ಷಣೆ ವೇದಿಕೆಗೆ ನಮ್ಮ ರಸ್ತೆಗೆ ನಿಮ್ಮ ಸಂಘಟನೆಯ ಹೋರಾಟದ ಮುಖಾಂತರ ಕಾಂಕ್ರಿಟ್ ಮಾಡಿಸಿಕೊಡಿ ಎಂದು ತಿಳಿಸಿದರು.

Ad Widget . Ad Widget .

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಸ್ಥಳ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ಆದಷ್ಟು ಬೇಗ ಈ ರಸ್ತೆಯ ಕಾಂಕ್ರಿಟ್ ಮಾಡಿಕೊಡಬೇಕೆಂದು ಸಂಬಂಧ ಪಟ್ಟ ಇಲಾಖೆಗೆ ಸಂಘಟನೆ ವತಿಯಿಂದ ಮನವಿ ಮಾಡುತ್ತೇವೆ ಎಂದು ಪಿ.ಸುಂದರ ಪಾಟಾಜೆ ಹೇಳಿದರು.

ಈ ಸಂದರ್ಭದಲ್ಲಿ ಅರಂತೋಡು ಘಟಕದ ಅಧ್ಯಕ್ಷರು ತೇಜಕುಮಾರ್ ಎ. ಕಾರ್ಯದರ್ಶಿ ನವೀನ್ ಕೆ. ಮತ್ತು ಸದಸ್ಯರಾದ ರಾಮಕೃಷ್ಣ ಇವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *