Ad Widget .

ನನ್ನ ಶವ ನೋಡಲು ಬರದಿದ್ರೆ ದೆವ್ವವಾಗಿ ಬಂದು ಕಾಡ್ತೀನಿ| ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ 15ರ ಬಾಲೆ

ಸಮಗ್ರ ನ್ಯೂಸ್: ಇನ್ನೂ ಬಾಳಿ ಬದುಕಬೇಕಾದ ಆ ಬಾಲಕಿಯೋರ್ವಳು ವಿಚಿತ್ರವಾದ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ರಾಯಚೂರಿನಲ್ಲಿ ನಡೆದಿದೆ. ಗಣೇಶ ವಿಸರ್ಜನೆಗಾಗಿ ನಿರ್ಮಿಸಿದ್ದ ಹೊಂಡದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಈಕೆಯ ಡೆತ್ ನೋಟ್ ವೈರಲ್ ಅಗ್ತಿದೆ.

Ad Widget . Ad Widget .

ಜಿಲ್ಲೆಯ ಸಿಂಧನೂತಿನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸಾರಿಕಾಳ ಸಾವಿನಿಂದ ಊರಿನವರೆಲ್ಲ ದಿಗ್ಭ್ರಮೆಗೆ ಒಳಗಾಗಿದ್ದರು. ಆಕೆಯ ಮನೆಯವರು ಮಗಳನ್ನು ಕಳೆದುಕೊಂಡ ಶೋಕದಲ್ಲಿದ್ದ ಸಂದರ್ಭದಲ್ಲಿ ಆಕೆ ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್‌ ನೋಟ್ ಸಿಕ್ಕಿದೆ. ಆ ಪತ್ರ ನೋಡಿ ಎಲ್ಲರೂ ಮತ್ತೊಮ್ಮೆ ಶಾಕ್‌ಗೆ ಒಳಗಾಗಿದ್ದಾರೆ.

Ad Widget . Ad Widget .

ಬಾಲಕಿ ಸಾರಿಕಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 4 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾಳೆ. ತನ್ನ ಶಾಲೆಯ ಗೆಳೆಯ, ಗೆಳತಿಯರೊಂದಿಗೆ ಕಳೆದ ಸಂತೋಷದ ಕ್ಷಣಗಳನ್ನು ಈ ಬಾಲಕಿ ಹೇಳಿಕೊಂಡಿದ್ದಾಳೆ. 4 ಪುಟಗಳಿದ್ದರೂ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ ಎನ್ನುವುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

ಹೌದು, ಬಾಲಕಿ ಸಾರಿಕಾ ಸಾಯುವ ಮುನ್ನ ವಿಚಿತ್ರ ಡೆತ್‌ ನೋಟ್ ಬರೆದಿಟ್ಟಿದ್ದಾಳೆ. ಅದರಲ್ಲಿ ತನ್ನ ಕೊನೆಯ ಆಸೆ ಏನು ಎನ್ನುವ ಬಗ್ಗೆ ಬರೆದಿದ್ದಾಳೆ. ಆಕೆ ಅದರಲ್ಲಿ ವ್ಯಕ್ತಪಡಿಸಿರುವ ಕೊನೆಯ ಆಸೆಯಂತೂ ವಿಚಿತ್ರವಾಗಿದೆ. ‘ನನ್ನದು ಒಂದೇ ಆಸೆ, ನನ್ನ ಶವ ನೋಡೋಕೆ ಎಲ್ಲರೂ ಬನ್ನಿ, ಇಲ್ಲಾ ಅಂದ್ರೆ ನಾನು ದೆವ್ವ ಆಗಿ ಬರ್ತೀನಿ ನೋಡಿ’ ಎಂಬುದಾಗಿ ತನ್ನ ಡೆತ್​ನೋಟ್​ನ ಕೊನೆಯಲ್ಲಿ ಬರೆದುಕೊಂಡಿದ್ದಾಳೆ. ಈ ಮೂಲಕ ತನ್ನ ಸ್ನೇಹಿತ, ಸ್ನೇಹಿತೆಯರಿಗೆ ವಿಚಿತ್ರ ರೀತಿಯಲ್ಲಿ ಎಚ್ಚರಿಕೆ ನೀಡಿದ್ದಾಳೆ.

ಇನ್ನು ವಿದ್ಯಾರ್ಥಿನಿ ಬರೆದಿದ್ದ ಆ ಡೆತ್​​ನೋಟ್ ನ ಮಾಹಿತಿ ಬಹಿರಂಗಗೊಂಡಿದ್ದು, ವಿದ್ಯಾರ್ಥಿನಿ ಅದರಲ್ಲಿ ತನ್ನ ಕೊನೆಯ ಆಸೆಯನ್ನೂ ಹೇಳಿಕೊಂಡಿದ್ದಾಳೆ. ಈ ಡೆತ್ ನೋಟ್ ಈಗ ವೈರಲ್ ಆಗಿದೆ. ಇನ್ನು ಈ ಘಟನೆ ಬಗ್ಗೆ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

Leave a Comment

Your email address will not be published. Required fields are marked *