“ಹೆಸರು ಬದಲಿಸಲು ನಂಗೆ ತಲೆಕೆಟ್ಟಿಲ್ಲ” | ಶೋಭಾ ಕರಂದ್ಲಾಜೆ ಸ್ಪಷ್ಟನೆ

ಸಮಗ್ರ ನ್ಯೂಸ್: ಹೆಸರು ಬದಲಾಯಿಸಿಕೊಳ್ಳಲು ನನಗೇನು ತಲೆಕೆಟ್ಟಿದೆಯಾ ಎಂದು ಕೇಂದ್ರ ಸಚಿವೆ ಶೋಭಾ ಕೆರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಇದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ ಎಂದು ಹೇಳಿದರು.

Ad Widget ... ..

ಶೋಭಾ ಕರಂದ್ಲಾಜೆ ತಮ್ಮ ಹೆಸರನ್ನು ಶೋಭಾ ಗೌಡ ಎಂದು ಬದಲಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ. ಯಾಕೆ ಈ ಚರ್ಚೆ ಶುರುವಾಯಿತು ಗೊತ್ತಿಲ್ಲ. ‘ರಾಜಕಾರಣಿಗಳನ್ನು ಕೆಲವರು ಜೋಕರ್ ಅಂದುಕೊಂಡಿದ್ದಾರೆ. ಮಾಧ್ಯಮ, ಸಾಮಾಜಿಕ ಜಾಲತಾಣ, ರಾಜಕೀಯ ವಲಯ ಅಥವಾ ವಿರೋಧ ಪಕ್ಷದವರು ಅಪಪ್ರಚಾರವನ್ನು ನಿಲ್ಲಿಸಿ’ ಹೀಗೆ ಅಪಪ್ರಚಾರ ಮಾಡ್ತಿರುವವರಿಗೆ ಇದು ನನ್ನ ಮನವಿ ಎಂದು ಅವರು ಹೇಳಿದರು.

Ad Widget

Leave a Comment

Your email address will not be published. Required fields are marked *