Ad Widget .

ದ್ವಾದಶ ರಾಶಿಗಳ ವಾರಭವಿಷ್ಯ| ಈ ವಾರದ ನಿಮ್ಮ ರಾಶಿಗಳ ಗೋಚಾರಫಲ

ಸಮಗ್ರ ನ್ಯೂಸ್: ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ.

Ad Widget . Ad Widget .

ಮೇಷ ರಾಶಿ:
ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚು ಸಾಲ ಮಾಡುವುದು ಬೇಡ. ಪ್ರಯಾಣದಿಂದಾಗಿ ಆಯಾಸ ಮತ್ತು ಒತ್ತಡದಿಂದ ಬಳಲಿಕೆ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿ. ವೃತ್ತಿಯಲ್ಲಿ ಗೌರವ ಹೆಚ್ಚಾಗುತ್ತದೆ.

Ad Widget . Ad Widget .

ವೃಷಭ ರಾಶಿ
ರಾಶಿಯವರಿಗೆ ಹಣದ ಒಳಹರಿವು ಅಪೇಕ್ಷೆಗೆ ತಕ್ಕಂತೆ ಇರುತ್ತದೆ. ವೃತ್ತಿಯಲ್ಲಿ ಮೇಲ್ದರ್ಜೆಗೇರುವ ಸಂಭವ ಹೆಚ್ಚಾಗಿದೆ. ಮಾನಸಿಕ ಶಾಂತಿಗಾಗಿ ನೀವು ಒತ್ತಡವನ್ನು ಜಯಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕು. ದೂರದ ಸಂಬಂಧಿಯಿಂದ ಕೆಲವು ಒಳ್ಳೆಯ ಸುದ್ದಿಗಳು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷದ ಕ್ಷಣಗಳನ್ನು ತರುವ ಸಾಧ್ಯತೆಯಿದೆ.

ಮಿಥುನ ರಾಶಿ
ಈ ರಾಶಿಯವರಿಗೆ ಹಣದ ಒಳಹರಿವು ನಿಮ್ಮ ಅಗತ್ಯತೆಯನ್ನು ಪೂರೈಸುತ್ತದೆ. ಮಹಿಳೆಯರು ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಇದೆ. ಆರೋಗ್ಯದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸಬಾರದು ಎಂದುಕೊಂಡಿದ್ದರೆ, ಯೋಗವನ್ನು ಅಳವಡಿಸಿಕೊಳ್ಳಿ. ಶನಿವಾರದಂದು ಅಂಗವಿಕಲರಿಗೆ ಮೊಸರನ್ನವನ್ನು ದಾನ ಮಾಡಿ.

ಕರ್ಕಾಟಕ ರಾಶಿ
ಈ ರಾಶಿಯವರಿಗೆ ಹಣದ ಒಳ ಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಆತ್ಮೀಯರೊಡನೆ ಹಂಚಿಕೊಳ್ಳುವುದರಿಂದ ಮನಸ್ಸಿಗೆ ಸ್ವಲ್ಪ ಪರಿಹಾರವೆನಿಸುತ್ತದೆ. ಕೆಲಸವನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಮರ್ಥ್ಯವನ್ನು ಅರಿತು ಆಯ್ಕೆ ಮಾಡಿಕೊಳ್ಳುವುದು ಉತ್ತಮ. “ಓಂ ಕೇತವೇ ನಮಃ” ಎಂದು ಪ್ರತಿದಿನ 108 ಬಾರಿ ಜಪಿಸಿ.

ಸಿಂಹ ರಾಶಿ
ಈ ರಾಶಿಯವರಿಗೆ ಹಣದ ಒಳ ಹರಿವು ಹಣಕಾಸಿನ ಸ್ಥಿತಿಯು ಸರಿ ಹೋಗುವಷ್ಟು ಇರುತ್ತದೆ. ಸ್ವಂತ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸ್ಥಿರಾಸ್ತಿ ಮಾರಾಟದ ಬಗ್ಗೆ ಸಾಕಷ್ಟು ಚಿಂತನೆ ಮಾಡುವಿರಿ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಈ ವಾರವು ಅನುಕೂಲಕರವಾಗಿದೆ. ಪ್ರತಿದಿನ ಆದಿತ್ಯ ಹೃದಯ ಪಠಿಸಿ.

ಕನ್ಯಾ ರಾಶಿ
ಈ ರಾಶಿಯವರಿಗೆ ಆದಾಯ ಸ್ಥಿತಿ ಸಾಮಾನ್ಯವಾಗಿ ಇರುತ್ತದೆ. ಸಂಗಾತಿ ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಉದ್ಯೋಗ ಸ್ಥಳದಲ್ಲಿ ಮಹಿಳಾ ಹಿರಿಯ ಅಧಿಕಾರಿಗಳಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಗೃಹ ನಿರ್ಮಾಣದ ಬಗ್ಗೆ ಸಾಕಷ್ಟು ಚಿಂತನೆಯನ್ನು ಮಾಡುವಿರಿ. ವಾರದ ಕೊನೆಯ ಭಾಗದಲ್ಲಿ ಅಚಾನಕ್ಕಾಗಿ ದೂರದ ಸಂಬಂಧಿಯಿಂದ ಬರುವ ಯಾವುದೋ ಶುಭ ಸುದ್ದಿ ಇಡೀ ಕುಟುಂಬಕ್ಕೆ ಸಂತಸ ನೀಡುತ್ತದೆ. “ಓಂ ದುರ್ಗಾಯ ನಮಃ” ಎಂದು ಪ್ರತಿದಿನ 41 ಬಾರಿ ಜಪಿಸಿ.

ತುಲಾ ರಾಶಿ
ಈ ರಾಶಿಯವರಿಗೆ ಆದಾಯ ಸಾಮಾನ್ಯವಾಗಿರುತ್ತದೆ. ಹಣಕಾಸಿನ ವ್ಯವಹಾರಗಳಿಂದ ಅಷ್ಟು ಲಾಭವಿಲ್ಲ. ನೀವು ನಿಮ್ಮ ಮೇಲಾಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಮೆಚ್ಚುಗೆ ಮತ್ತು ಬೆಂಬಲವನ್ನು ಪಡೆಯುತ್ತೀರಿ. ಅನವಶ್ಯಕ ಮಾತುಗಳಲ್ಲಿ ತೊಡಗಿಕೊಳ್ಳದಿರುವುದು ನಿಮಗೆ ಉತ್ತಮ. ಪ್ರತಿದಿನ 21 ಬಾರಿ “ಓಂ ಹನುಮತೇ ನಮಃ” ಎಂದು ಜಪಿಸಿ.

ವೃಶ್ಚಿಕ ರಾಶಿ
ಈ ರಾಶಿಯವರಿಗೆ ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವೃತ್ತಿಯಲ್ಲಿ ಹಣ ಸಂಪಾದನೆ ಹೆಚ್ಚುತ್ತದೆ. ಆಸ್ತಿ ವಿಚಾರದಲ್ಲಿ ಸಂತೋಷಕರ ಸುದ್ದಿಗಳು ಕೇಳಿ ಬರುತ್ತವೆ. ಹಿರಿಯರು ನಡೆಸುತ್ತಿದ್ದ ವ್ಯಾಪಾರವನ್ನು ಮುಂದುವರಿಸುವುದು ಬಹಳ ಒಳ್ಳೆಯದು. ವ್ಯಾಪಾರ- ವ್ಯವಹಾರಗಳಲ್ಲಿ ನಿಮಗೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ. ಮಂಗಳವಾರದಂದು ಗಣೇಶನಿಗೆ ಹವನ-ಯಾಗವನ್ನು ಮಾಡಿ.

ಧನು ರಾಶಿ
ಈ ರಾಶಿಯವರಿಗೆ ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಧಾರ್ಮಿಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ತಂದೆಯಿಂದ ನಿಮಗೆ ಹೆಚ್ಚಿನ ನೆರವು ದೊರೆಯುತ್ತದೆ. ವೃತ್ತಿಯಲ್ಲಿ ಏಳಿಗೆ ಕಂಡು ಬಂದು ಆದಾಯವೂ ಹೆಚ್ಚುತ್ತದೆ. ಪ್ರತಿದಿನ 21 ಬಾರಿ “ಓಂ ಗುರವೇ ನಮಃ” ಎಂದು ಜಪಿಸಿ.

ಮಕರ ರಾಶಿ
ಈ ರಾಶಿಯವರಿಗೆ ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಹಿರಿಯರಿಂದ ನಿಮಗೆ ಸಾಕಷ್ಟು ಸಹಾಯ ದೊರೆಯುತ್ತದೆ. ಹೆಚ್ಚು ಮಸಾಲೆಯುಕ್ತ ಮತ್ತು ಕರಿದ ಆಹಾರವನ್ನು ಸೇವಿಸುವಂತಹ ಅಭ್ಯಾಸಗಳು ನಿಮಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಸ್ಥಿರಾಸ್ತಿ ಮಾಡುವ ವಿಚಾರದಲ್ಲಿ ಈಗ ಆತುರ ಬೇಡ. ಸಂಗಾತಿಯು ನಡೆಸುವ ವ್ಯವಹಾರಗಳಲ್ಲಿ ಸಾಕಷ್ಟು ಅಭಿವೃದ್ಧಿ ಇರುತ್ತದೆ.

ಕುಂಭ ರಾಶಿ
ಈ ರಾಶಿಯವರಿಗೆ ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಒಡಹುಟ್ಟಿದವರಿಂದ ಸಮಸ್ಯೆಗಳು ಎದುರಾಗಬಹುದು. ಉಸಿರಾಟದ ತೊಂದರೆ, ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಈ ವಾರ ಹೊಸ ವಾಹನ ಕೊಳ್ಳುವ ಯೋಗವಿದೆ. ವೃತ್ತಿಪರ ದೃಷ್ಟಿಕೋನದಿಂದ ಈ ವಾರ ನಿಮಗೆ ಉತ್ತಮವಾಗಿದೆ. ಪ್ರತಿದಿನ 44 ಬಾರಿ “ಓಂ ಮಂದಾಯ ನಮಃ” ಎಂದು ಜಪಿಸಿ.

ಮೀನ ರಾಶಿ
ಈ ರಾಶಿಯವರಿಗೆ ಹಣದ ಒಳಹರಿವು ಉತ್ತಮವಾಗಿದ್ದರೂ ಸಾಕಷ್ಟು ಖರ್ಚು ಇರುತ್ತದೆ. ತಾಯಿಯೊಡನೆ ಮನಃಸ್ತಾಪ ಹೆಚ್ಚಾಗಬಹುದು. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ಆರಂಭಿಕ ದಿನಗಳು ನಿಮಗೆ ಫಲಪ್ರದ ಆಗದಿರುವ ಸಾಧ್ಯತೆಯಿದೆ. ದುಡುಕಿನ ಮಾತಿನಿಂದ ಬಂಧುಗಳು ದೂರ ಆಗುವರು. ಪ್ರತಿದಿನ 108 ಬಾರಿ “ಓಂ ನಮಃ ಶಿವಾಯ” ಜಪಿಸಿ.

Leave a Comment

Your email address will not be published. Required fields are marked *