Ad Widget .

ಇಂಡೋನೇಷ್ಯಾದಲ್ಲಿ ಪುಟ್ಬಾಲ್ ಪಂದ್ಯಾಟದ ವೇಳೆ ಹಿಂಸಾಚಾರ| ಇಬ್ಬರು ಪೊಲೀಸರು ಸೇರಿ ಕನಿಷ್ಠ 127 ಮಂದಿ ಸಾವು

ಸಮಗ್ರ ನ್ಯೂಸ್: ಇಂಡೋನೇಷ್ಯಾದ ಜಕಾರ್ತದಲ್ಲಿ ಶನಿವಾರ ತಡರಾತ್ರಿ ಫುಟ್‌ಬಾಲ್ ಪಂದ್ಯದ ವೇಳೆ ನಡೆದ ಹಿಂಸಾಚಾರದಿಂದ ಕನಿಷ್ಠ 127 ಮಂದಿ ಸಾವಿಗೀಡಾಗಿದ್ದಾರೆ. ಪೂರ್ವ ಜಾವದ ಮಲಂಗ್‌ನಲ್ಲಿ ನಡೆದ ಪಂದ್ಯದಲ್ಲಿ ಎದುರಾಳಿ ತಂಡ ಗೆಲುವು ಸಾಧಿಸಿದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಮೈದಾನಕ್ಕೆ ಇಳಿದು ದಾಂಧಲೆ ನಡೆಸಿದ್ದಾರೆ.

Ad Widget . Ad Widget .

ಈ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿ, ಇಬ್ಬರು ಪೊಲೀಸರ ಸಹಿತ ಕನಿಷ್ಠ 127 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

Ad Widget . Ad Widget .

ಇಂಡೋನೇಷ್ಯಾದ ಪ್ರಮುಖ ಲೀಗ್ ಬಿಆರ್‌ಐ ಲಿಗಾ 1ರ ಅರೆಮಾ ಎಫ್‌ಸಿ ಮತ್ತು ಪರ್ಸಬೆಯ ಸುರಬಯ ತಂಡದ ನಡುವೆ ಪಂದ್ಯ ನಡೆಯುತ್ತಿತ್ತು.

ಈ ಸಂದರ್ಭದಲ್ಲಿ ಪಂದ್ಯ ಸೋತ ಕೋಪದಲ್ಲಿ ಅಭಿಮಾನಿಗಳು ಮೈದಾನಕ್ಕೆ ಇಳಿದು ದಾಂಧಲೆ ಎಬ್ಬಿಸಿದ್ದಾರೆ. ನಂತರ ಕಾಲ್ತುಳಿತ ಉಂಟಾಗಿದೆ. ಜತೆಗೆ ಉಸಿರುಗಟ್ಟಿ ಜನರು ಮೃತಪಟ್ಟಿದ್ದಾರೆ. ಕ್ರೀಡಾಂಗಣದಲ್ಲಿ 34 ಜನರು ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಮೃತರಲ್ಲಿ ಇಬ್ಬರು ಪೊಲೀಸರು ಕೂಡ ಇದ್ದಾರೆ ಎಂದು ಪೂರ್ವ ಜಾವಾ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ತಿಳಿಸಿದ್ದಾರೆ.

Leave a Comment

Your email address will not be published. Required fields are marked *