Ad Widget .

ಸಿಬ್ಬಂದಿಗೆ ಗುಡ್ ನ್ಯೂಸ್ ಕೊಟ್ಟ KSRTC| 65 ವರ್ಷದ ನೀತಿಗೆ ಗುಡ್ ಬೈ ಹೇಳಿದ ನಿಗಮ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 65 ವರ್ಷಗಳ ಇತಿಹಾಸದಲ್ಲೇ ಈ ದಿನ ಬಹಳ ವಿಶೇಷವಾದದ್ದು. ಅದರಲ್ಲೂ ಕೆಎಸ್​ಆರ್​​ಟಿಸಿ ಸಿಬ್ಬಂದಿ ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವ ದಿನ. ಯಾಕಂದ್ರೆ 65 ವರ್ಷದ ಇತಿಹಾಸದಲ್ಲೇ ತಿಂಗಳ ಮೊದಲ ದಿನವೇ ನೌಕರರಿಗೆ ಸಂಬಳವನ್ನ ನೀಡಿರಲಿಲ್ಲ. ಆದರೆ ಈ ಬಾರಿ ಹಾಗಾಗಲಿಲ್ಲ.

Ad Widget . Ad Widget .

7ನೇ ತಾರೀಕಿನಂದು ನೌಕರರ ಬ್ಯಾಂಕ್ ಖಾತೆಗೆ ಸಂಬಳ ಸೇರುತಿತ್ತು. ಆದರೆ ಇದೇ ಮೊದಲ ಬಾರಿಗೆ 1ನೇ ತಾರೀಖಿನಂದು ನೌಕರರಿಗೆ ಸಂಬಳ ಕೈ ಸೇರಿದೆ. ಇದಕ್ಕೆ ಕಾರಣ KSRTCಯ ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಬುಕುಮಾರ್.

Ad Widget . Ad Widget .

ಕೆಎಸ್​ಆರ್​​ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಬುಕುಮಾರ್ ಅವರು ಬಂದ ಮೇಲೆ ನಿಗಮದ 65 ವರ್ಷದಿಂದ ಇದ್ದ ನಿಯಮವನ್ನು ಕೈ ಬಿಟ್ಟು ವೇತನ ನೀಡುವ ವಿಚಾರದಲ್ಲಿ ಇದ್ದ ತಾರತಮ್ಯಕ್ಕೆ ಕೊನೆಯಾಡಿದ್ದಾರೆ.

ನಿಗಮ ಆರಂಭದಿಂದಲೂ 1ನೇ ತಾರೀಖು ಅಧಿಕಾರಿ ವರ್ಗಕ್ಕೆ, 4 ರಂದು ಮೆಕಾನಿಕ್​ಗಳಿಗೆ, 7ಕ್ಕೆ ಚಾಲಕ ನಿರ್ವಾಹಕರಿಗೆ ಸಂಬಳ ನೀಡಿತ್ತು. ಈ ತಾರತಮ್ಯವನ್ನು ಹೋಗಲಾಡಿಸಿ ಸೆಪ್ಟೆಂಬರ್ ತಿಂಗಳ ಸಂಬಳವನ್ನು ಅಕ್ಟೋಬರ್ 1 ರಂದೇ ನೌಕರರ ಖಾತೆಗೆ ಸೇರುವಂತೆ ಮಾಡಿದ್ದಾರೆ. ಎಂಡಿ ಅವರ ನಿರ್ಧಾರದಿಂದ ಚಾಲಕ ಹಾಗೂ ನಿರ್ವಾಹಕರು ಖುಷಿಯಾಗಿದ್ದಾರೆ.

1 thought on “ಸಿಬ್ಬಂದಿಗೆ ಗುಡ್ ನ್ಯೂಸ್ ಕೊಟ್ಟ KSRTC| 65 ವರ್ಷದ ನೀತಿಗೆ ಗುಡ್ ಬೈ ಹೇಳಿದ ನಿಗಮ”

  1. Edhu sadhaneyalla, avara karthavya, niveke edhanu estu mattige dodda vicharavannagi maduthidiri. Havadhare bere yaru 1ne thariki nandhu salary padeyuthilave?? Sarige sibandhige yenadharu nididha thakshana yeke hege doddadagi thorisuthori???, edhe tharaha avara samasye galanu doddadagi yeke thorisabaradhu?? Nanna Abhipraya aste.

Leave a Comment

Your email address will not be published. Required fields are marked *