Ad Widget .

ವಿಂಗ್ ಕಮಾಂಡರ್ ಅಭಿನಂದನ್ ನಿವೃತ್ತಿ

ಸಮಗ್ರ ನ್ಯೂಸ್: ಪಾಕ್ ಯುದ್ದ ವಿಮಾನ ಎಫ್ 16 ಹೊಡೆದುರುಳಿಸಿ ಪಾಕಿಸ್ತಾನ ಸೈನಿಕರ ವಶದಲ್ಲಿದ್ದಲ್ಲಿದ್ದರೂ ಎದೆಗಾರಿಕೆಯಿಂದ ಎದುರಿಸಿ ಬಳಿಕ ರಾಜತಾಂತ್ರಿಕ ಸಂಧಾನದ ಮೂಲಕ ಭಾರತಕ್ಕೆ ಸುರಕ್ಷಿತವಾಗಿ ಬಂದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.

Ad Widget . Ad Widget .

ಅಭಿನಂದನ್ ವರ್ಧಮಾನ್ ಅವರು ವಾಯು ಸೇನೆಯಲ್ಲಿ ಮಿಗ್ 21 ಯುದ್ದ ವಿಮಾನದ ವಿಂಗ್ ಕಮಾಂಡರ್ ಆಗಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಅವರು ಪಾಕ್‌ ಯುದ್ದ ವಿಮಾನ ಎಫ್ 16ನ್ನು ಹೊಡೆದುರುಳಿಸಿ ಪಾಕ್ ಸೈನಿಕರಿಗೆ ಸೆರೆ ಸಿಕ್ಕಿ ಪಾಕ್ ವಶದಲ್ಲಿದ್ದರು. ಆದರೆ ಈ ವೇಳೆ ಎದೆಗುಂದದೆ ದಿನಗಳೆದಿದ್ದ ಅವರು, ಬಳಿ ರಾಜತಾಂತ್ರಿಕ ಸಂಧಾನದ ಮೂಲಕ ಪಾಕ್ ವಶದಿಂದ ಬಿಡುಗಡೆಗೊಂಡು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ಸಾಗಿದ್ದರು.

Ad Widget . Ad Widget .

2004ರಲ್ಲಿ ವಾಯುಪಡೆ ಸೇರ್ಪಡೆಗೊಂಡಿದ್ದ ಅಭಿನಂದನ್ ವರ್ಧಮಾನ್ 18 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಬಳಿಕ ಇದೀಗ ನಿವೃತ್ತಿಯಾಗಿದ್ದಾರೆ. ಅವರ ನಿವೃತ್ತಿ ಜೀವನಕ್ಕೆ ಎಲ್ಲ ಭಾರತೀಯರು ಹಾರೈಸಿದ್ದಾರೆ.

Leave a Comment

Your email address will not be published. Required fields are marked *