ಸಮಗ್ರ ನ್ಯೂಸ್: ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂಬೇಡ್ಕರ್ ಧ್ವಜವನ್ನು ಪಿಡಿಒ ತೆರವುಗೊಳಿಸಿದ್ದು ಹಾಗಾಗಿ ಇದನ್ನು ತಕ್ಷಣ ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ ನೀಡಲಾಗಿದೆ.
ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಲಾದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇತ್ತೀಚಿಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯವರು ಕಾರ್ಯಕ್ರಮಯೊಂದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧ್ವಜವನ್ನು ಆ ಸಮುದಾಯ ಕಟ್ಟಡದಲ್ಲಿ ಅಳವಡಿಸಿದ್ದರು. ಹೀಗೆ ಅಳವಡಿಸಿದಂತ ಧ್ವಜವನ್ನು ಏಕಾಏಕಿ ಅಜ್ಜಾವಾರ ಗ್ರಾಮ ಪಂಚಾಯತ್ ನ ಪಿಡಿಒ ತೆರವುಗೊಳಿಸಿದರೆ ಎಂದು ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಸೆ.30 ರಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಪಿ.ಸುಂದರ ಪಾಟಾಜೆ ಮತ್ತು ಜಿಲ್ಲಾ ಸಂಚಾಲಕರಾದ ಪರಮೇಶ್ವರ ಕೆಮ್ಮಿಂಜೆ ಅಜ್ಜಾವರ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಪಿಡಿಒ ಅವರೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಪಿ.ಸುಂದರ ಪಾಟಾಜೆ ಅಂಬೇಡ್ಕರ್ ಭವನದಲ್ಲಿ ಹಾಕಿರುವಂತ ಧ್ವಜ ಯಾಕೆ ತೆಗೆದಿದ್ದೀರ?
ಇದಕ್ಕೆ ಕಾರಣವೇನು?
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಸಂವಿಧಾನ ಬರೆದಂತ ಸಂವಿಧಾನ ಶಿಲ್ಪಿ ಮತ್ತು ವಿಧಾನಸೌಧದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧ್ವಜ ನಿರಂತರ ಹಾರಾಡುತ್ತಿದೆ. ಕಾನೂನಲಿ ಆ ಧ್ವಜವನ್ನು ಹಾರಿಸಬಾರದು ಎಂದು ಎಲ್ಲಿ ಕೂಡ ಇಲ್ಲ ನೀವು ಅಂಬೇಡ್ಕರ್ ಅವರ ಧ್ವಜವನ್ನು ತೆಗೆದು ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದೀರಿ.
ಆದಕಾರಣ ಇನ್ನೂ ನಾಲ್ಕು ದಿವಸದಲ್ಲಿ ಅಂಬೇಡ್ಕರ್ ಭವನದಲ್ಲಿ ಹಾಕಿರುವಂತಹ ಧ್ವಜವನ್ನು ಪುನಃ ನೀವೇ ಹಾಕಬೇಕು. ಒಂದು ವೇಳೆ ಹಾಕದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯ ವತಿಯಿಂದ ಅಜ್ಜಾವರ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಅಜ್ಜಾವರ ಗ್ರಾಮ ಪಂಚಾಯತ್ ನ ಪಿಡಿಒ ಅವರಿಗೆ ಪಿ.ಸುಂದರ ಪಾಟಾಜೆ ಎಚ್ಚರಿಕೆ ನೀಡಿದ್ದಾರೆ.