ದ.ಕ ಜಿಲ್ಲೆಯಲ್ಲಿ ಪಿಎಫ್ಐನಿಂದ ಉಗ್ರ ತರಬೇತಿ| ಮಾಹಿತಿ ಬಿಚ್ಚಿಟ್ಟ ಎನ್ಐಎ ಅಧಿಕಾರಿಗಳು

ಸಮಗ್ರ ನ್ಯೂಸ್: ಪಿಎಫ್‌ಐ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಇದೀಗ ಸ್ಪೋಟಕ ಮಾಹಿತಿಯೊಂದನ್ನು ಕಲೆ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಮುಸ್ಲಿಂ ಯುವಕರಿಗೆ ಪಿಎಫ್‌ಐನಿಂದ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

Ad Widget ... ..

ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಇದ್ದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ‌ವಿವಿಧ ಕಡೆಗಳಲ್ಲಿ ಪಿಎಫ್‌ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

Ad Widget

ಪುತ್ತೂರು ಸಮೀಪದ ಮಿತ್ತೂರಿನಲ್ಲಿರುವ ಪ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ಯುವಕರಿಗೆ ಪಿಎಫ್‌ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಕಲೆ ಹಾಕಿದ್ದಾರೆ. 2007 ರಿಂದ ಸಾವಿರಾರು ಯುವಕರಿಗೆ ಟ್ರೈನಿಂಗ್ ನೀಡಲಾಗುತ್ತಿತ್ತು, ಈ ಸಂಬಂಧ ಆಯೂಬ್ ಅಗ್ನಾಡಿ ಎಂಬ ಟ್ರಸ್ಟಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಕೇಂದ್ರ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಎಂಟು ಅಂಗಸಂಸ್ಥೆಗಳ ಮೇಲೆ ಐದು ವರ್ಷಗಳ ಕಾಲ ನಿಷೇಧ ಹೇರಿದೆ. ಈ ಮೂಲಕ ಪಿಎಫ್‌ಐ ನ ಎಲ್ಲಾ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ.

Leave a Comment

Your email address will not be published. Required fields are marked *