ಸಿಪಿಎಂ ನ ಹಿರಿಯ ನಾಯಕ ಕೋಡಿಯೇರಿ ಬಾಲಕೃಷ್ಣನ್ ನಿಧನ

ಸಮಗ್ರ ನ್ಯೂಸ್: ​​​​​​​ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸ್‌ವಾದ) ಪಕ್ಷದ ಹಿರಿಯ ಮುಖಂಡ, ಮಾಜಿ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್‌ (68) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್‌ ರೋಗದಿಂದ ಬಳಲುತ್ತಿದ್ದ ಬಾಲಕೃಷ್ಣನ್‌, 2019ರಿಂದಲೂ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Ad Widget ... ..

ಕೇರಳದ ಹಿರಿಯ ರಾಜಕೀಯ ನಾಯಕರಾಗಿದ್ದ ಬಾಲಕೃಷ್ಣನ್‌, ಸಿಪಿಎಂ ಪಾಲಿಟ್‌ ಬ್ಯೂರೋ ಸದಸ್ಯರಾಗಿದ್ದರು. ತಲಶ್ಯೇರಿ ವಿಧಾನಸಭೆಯಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಾಲಕೃಷ್ಣನ್‌, ವಿ. ಅಚ್ಯುತಾನಂದನ್‌ ಸರ್ಕಾರದಲ್ಲಿ (2006-11) ಗೃಹ ಮತ್ತು ಪ್ರವಾಸೋದ್ಯಮ ಸಚಿವರಾಗಿ ಸೇವೆ ಸಲ್ಲಿಸಿದ್ದರು. ವಿಧಾನಸಭೆಯಲ್ಲಿ ಎರಡು ಬಾರಿ (2001-04 ಮತ್ತು 2011-16) ವಿರೋಧ ಪಕ್ಷದ ಉಪ ನಾಯಕನಾಗಿದ್ದರು.

Ad Widget

Leave a Comment

Your email address will not be published. Required fields are marked *