41 ವರ್ಷದ ಫೋಕ್ಸೋ ಆರೋಪಿಗೆ 142 ವರ್ಷ ಜೈಲು| ಇಲ್ಲಿದೆ ಕಂಪ್ಲೀಟ್ ಸ್ಟೋರಿ

ಸಮಗ್ರ ನ್ಯೂಸ್: ಎರಡು ವರ್ಷಗಳ ಕಾಲ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ 41 ವರ್ಷದ ವ್ಯಕ್ತಿಗೆ ಕೇರಳ ಪೋಕ್ಸೊ ನ್ಯಾಯಾಲಯ 142 ವರ್ಷ ಜೈಲು ಹಾಗೂ 5 ಲಕ್ಷ ರೂ. ದಂಡ ವಿಧಿಸಿದೆ.

Ad Widget ... ..

ಅಪರಾಧಿಯು ಒಂದು ವೇಳೆ ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಮೂರು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.ಅಂದರೆ ಸುಮಾರು 150 ವರ್ಷ ಜೈಲುವಾಸ ಅನುಭವಿಸಬೇಕಾಗುತ್ತದೆ. ಪೋಕ್ಸೊ ಕಾಯ್ದೆಯಡಿ ನೀಡಲಾದ ಗರಿಷ್ಠ ಶಿಕ್ಷೆ ಇದಾಗಿದೆ.

Ad Widget

ಅಪರಾಧಿ ಆನಂದನ್‌ ಪಿಆರ್‌ ಅಲಿಯಾಸ್‌ ಬಾಬು ವಿರುದ್ಧ ಪೊಲೀಸರು 2019-2022ರಲ್ಲಿ ಅಪ್ರಾಪ್ತೆ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡಿದ್ದರು. ಅಪ್ರಾಪ್ತೆಯ ಸಂಬಂಧಿಕನಾಗಿದ್ದ ಬಾಬು ಬಾಲಕಿಯ ಪೋಷಕರ ಮನೆಯಲ್ಲೇ ವಾಸವಾಗಿದ್ದೂ ಅಲ್ಲದೇ ಆಕೆಯ ಮೇಲೆ 2 ವರ್ಷಗಳ ಕಾಲ ದೌರ್ಜನ್ಯ ಎಸಗಿದ್ದ.

Leave a Comment

Your email address will not be published. Required fields are marked *