October 2022

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ| ನಾಳೆಯಿಂದ ಹೊಸ ದರ ಜಾರಿ

ಸಮಗ್ರ ನ್ಯೂಸ್: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿತಗೊಳಿಸಲಾಗಿದೆ. ತೈಲ ಕಂಪನಿಗಳು ದರಪರಿಷ್ಕರಣೆ ಮಾಡಿದ್ದು, ಪ್ರತಿ ಲೀಟರ್ ಗೆ ಪೆಟ್ರೋಲ್ ಹಾಗೂ ಡೀಸೆಲ್ ಗೆ 40 ಪೈಸೆ ಕಡಿಮೆ ಮಾಡಲಾಗಿದೆ. ಹೊಸ ಬೆಲೆಗಳು ಮಂಗಳವಾರ(ನ.1)ದಿಂದ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರಲಿವೆ. ನವದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 96.72 ರೂ., ಮುಂಬೈನಲ್ಲಿ 106.31 ರೂ.ಕೊಲ್ಕತ್ತಾ ದಲ್ಲಿ ಪೆಟ್ರೋಲ್ ಗೆ 106.03 ರೂ., ಚೆನ್ನೈನಲ್ಲಿ 102.63 ರೂ ಆಗಿದೆ. ಸರ್ಕಾರಿ ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ […]

ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಇಳಿಕೆ| ನಾಳೆಯಿಂದ ಹೊಸ ದರ ಜಾರಿ Read More »

ದ. ಕ‌ ಜಿಲ್ಲಾಧಿಕಾರಿಯಾಗಿ ರವಿಕುಮಾರ್ ಎಂ.ಆರ್ ನೇಮಕ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ರವಿಕುಮಾರ್ ಎಂ ಆರ್ ನೇಮಕಗೊಂಡಿದ್ದಾರೆ. ರವಿಕುಮಾರ್ ಅವರು 2012 ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಆಗಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಡಾ. ರಾಜೇಂದ್ರ ಕೆ.ವಿ ವರ್ಗಾಣೆಯ ಬಳಿಕ ಡಾ. ಕುಮಾರ್ ಅವರಿಗೆ ಪ್ರಭಾರ ಜಿಲ್ಲಾಧಿಕಾರಿಯಾಗಿ ಜವಾಬ್ದಾರಿ ನೀಡಲಾಗಿತ್ತು. ಇದೀಗ ಆ ಜವಾಬ್ದಾರಿಯನ್ನು ರವಿಕುಮಾರ್ ಎಂ ಆರ್ ಅವರಿಗೆ ಹಸ್ತಾಂತರಿಸಿ ಸರಕಾರ ಆದೇಶ ಹೊರಡಿಸಿದೆ.

ದ. ಕ‌ ಜಿಲ್ಲಾಧಿಕಾರಿಯಾಗಿ ರವಿಕುಮಾರ್ ಎಂ.ಆರ್ ನೇಮಕ Read More »

ಜಾಲತಾಣಗಳಲ್ಲಿ ತುಳುಭಾಷೆ, ದೈವಾರಾಧನೆಯ ಅಶ್ಲೀಲ ಪೋಸ್ಟ್| ವಿಕೃತರ ವಿರುದ್ದ ಕಾನೂನು ಹೋರಾಟಕ್ಕೆ ದೈವಾರಾಧನಾ ವೇದಿಕೆ ನಿರ್ಧಾರ

ಸಮಗ್ರ ನ್ಯೂಸ್: ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷೆ, ದೈವಾರಾಧನೆಯ ಕುರಿತು ಅಶ್ಲೀಲವಾಗಿ ಪೋಸ್ಟ್ ಮಾಡುವ ವ್ಯಕ್ತಿಗಳ ವಿರುದ್ಧ ತುಳುನಾಡು ದೈವಾರಾಧನೆ ಸಂರಕ್ಷಣಾ ಯುವ ವೇದಿಕೆ ಕಾನೂನು ಸಮರಕ್ಕೆ ಮುಂದಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತುಳು ಭಾಷಿಗರನ್ನು, ದೈವಾರಾಧನೆ, ತುಳು ಕಲಾವಿದರ ಕುರಿತು ಅಶ್ಲೀಲ ಪದ ಬಳಕೆ ಮಾಡಿರುವ ಕನ್ನಡಿಗ ಶಿವರಾಜ್ ಎಂಬವರ ಮೇಲೆ ಕಾನೂನು ಕ್ರಮ ಜರಗಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಪ್ರಮುಖರಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಶಾಸಕ ಕಾಮತ್ ತಕ್ಷಣವೇ ಪ್ರಕರಣ ದಾಖಲಿಸುವಂತೆ

ಜಾಲತಾಣಗಳಲ್ಲಿ ತುಳುಭಾಷೆ, ದೈವಾರಾಧನೆಯ ಅಶ್ಲೀಲ ಪೋಸ್ಟ್| ವಿಕೃತರ ವಿರುದ್ದ ಕಾನೂನು ಹೋರಾಟಕ್ಕೆ ದೈವಾರಾಧನಾ ವೇದಿಕೆ ನಿರ್ಧಾರ Read More »

ಪ್ರಿಯಕರನೊಂದಿಗೆ ಹಸೆಮಣೆ ಏರಿದ ಪತ್ನಿ| ನೇಣಿಗೆ ಕೊರಳೊಡ್ಡಿದ ಪತಿ

ಸಮಗ್ರ ನ್ಯೂಸ್: ಪ್ರಿಯಕರನೊಂದಿಗೆ ಪತ್ನಿ ವಿವಾಹವಾದ ಹಿನ್ನಲೆ ಮನನೊಂದ ಪತಿ ನೇಣಿಗೆ ಶರಣಾದ ಘಟನೆ ಹುಣಸೂರಿನ ಕೊಯಮತ್ತೂರು ಕಾಲೋನಿಯಲ್ಲಿ ನಡೆದಿದೆ. ಸುರೇಶ್ ಕುಮಾರ್(37) ಮೃತ ದುರ್ದೈವಿ. 7 ವರ್ಷದ ಹಿಂದೆ ನೇತ್ರಾ ಜೊತೆ ವಿವಾಹವಾಗಿದ್ದ ಸುರೇಶ್ ಕುಮಾರ್ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅನ್ಯೋನ್ಯ ಸಂಸಾರ ತೂಗಿಸುತ್ತಿದ್ದ. ಮಾರಿಷಸ್ ಸ್ಪಿನ್ನಿಂಗ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದ ನೇತ್ರಾ ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ಹುಣಸೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಲಾಗಿತ್ತು. ತನಿಖೆ ನಡೆಸಿದ ಹುಣಸೂರು ಪೊಲೀಸರಿಗೆ ನೇತ್ರಾ ಶಿವಮೊಗ್ಗದಲ್ಲಿ

ಪ್ರಿಯಕರನೊಂದಿಗೆ ಹಸೆಮಣೆ ಏರಿದ ಪತ್ನಿ| ನೇಣಿಗೆ ಕೊರಳೊಡ್ಡಿದ ಪತಿ Read More »

ಪ್ರೆಂಚ್ ಓಪನ್ ಡಬಲ್ಸ್ | ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಜೋಡಿ

ಸಮಗ್ರ ನ್ಯೂಸ್: ಫ್ರೆಂಚ್ ಓಪನ್ ಸೂಪರ್ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಸ್ಟಾರ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಚೈನೀಸ್ ತೈಪೆಯ ಲು ಚಿಂಗ್ ಯಾವೊ ಮತ್ತು ಯಾಂಗ್ ಪೊ ಹಾನ್ ವಿರುದ್ಧ ನೇರ ಗೇಮ್‌ಗಳ ಜಯದೊಂದಿಗೆ ಫ್ರೆಂಚ್ ಓಪನ್ ಸೂಪರ್ 750 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. 48 ನಿಮಿಷಗಳ ಕಾಲ ನಡೆದ ಫೈನಲ್‌ನಲ್ಲಿ ವಿಶ್ವದ ಎಂಟನೇ ಶ್ರೇಯಾಂಕದ ಜೋಡಿ 25ನೇ ಶ್ರೇಯಾಂಕದ ಲು ಮತ್ತು ಯಾಂಗ್‌ರನ್ನು 21-13, 21-19 ಅಂತರದಿಂದ ಮಣಿಸಿದರು.

ಪ್ರೆಂಚ್ ಓಪನ್ ಡಬಲ್ಸ್ | ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತೀಯ ಜೋಡಿ Read More »

ನಾಳೆ(ನ.1) ದೇಶದಲ್ಲಿ ಮೊದಲ ಡಿಜಿಟಲ್ ರೂಪಾಯಿ ಬಿಡುಗಡೆ| 9 ಬ್ಯಾಂಕ್ ಗಳಿಗೆ ಮಾನ್ಯತೆ

ಸಮಗ್ರ ನ್ಯೂಸ್: ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಮೊದಲ ಪೈಲಟ್ ಡಿಜಿಟಲ್ ರೂಪಾಯಿ (ಸಗಟು ವಿಭಾಗ) ಅನ್ನು ಸರ್ಕಾರಿ ಸೆಕ್ಯುರಿಟಿಗಳಲ್ಲಿನ ವಹಿವಾಟುಗಳಿಗಾಗಿ ಮಂಗಳವಾರ ಬಿಡುಗಡೆ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಸರ್ಕಾರಿ ಸೆಕ್ಯುರಿಟಿಗಳಲ್ಲಿ ದ್ವಿತೀಯ ಮಾರುಕಟ್ಟೆ ವಹಿವಾಟುಗಳನ್ನು ಇತ್ಯರ್ಥಪಡಿಸುವುದು ಪೈಲಟ್ಗೆ ಬಳಕೆಯಾಗಿದೆ ಎಂದು ಆರ್ಬಿಐ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್,

ನಾಳೆ(ನ.1) ದೇಶದಲ್ಲಿ ಮೊದಲ ಡಿಜಿಟಲ್ ರೂಪಾಯಿ ಬಿಡುಗಡೆ| 9 ಬ್ಯಾಂಕ್ ಗಳಿಗೆ ಮಾನ್ಯತೆ Read More »

ಡಾ. ಡಿ ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಪ್ರಕರಣ| ಜೈಲು ಸೇರಿದ ಕೆ.ಸೋಮನಾಥ ನಾಯಕ್

ಸಮಗ್ರ ನ್ಯೂಸ್: ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ದ ಅಪಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯದ ತೀರ್ಪಿನಂತೆ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಜೈಲು ಸೇರಿದ್ದಾರೆ. ಸುಧೀರ್ಘ ಕಾನೂನು ಹೋರಾಟದ ಬಳಿಕ ಸೋಮನಾಥ ನಾಯಕ್‌ಗೆ ಜೈಲು ಶಿಕ್ಷೆ ಖಾಯಂ ಆಗಿದೆ.‌ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್, ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಮಿತಿಗಿಂತ ಜಾಸ್ತಿ ಸ್ಥಿರಾಸ್ತಿ ಹೊಂದಿದ ಆರೋಪ ಮಾಡಿದ್ದರು. ಅಲ್ಲದೇ ಧರ್ಮಸ್ಥಳ ಮತ್ತು

ಡಾ. ಡಿ ವೀರೇಂದ್ರ ಹೆಗ್ಗಡೆ ಬಗ್ಗೆ ಅಪಪ್ರಚಾರ ಪ್ರಕರಣ| ಜೈಲು ಸೇರಿದ ಕೆ.ಸೋಮನಾಥ ನಾಯಕ್ Read More »

‘ವರಾಹ ರೂಪಂ’ ಹಾಡನ್ನು ಬಳಸಿಕೊಳ್ಳಬಹುದು, ಆದರೆ…

ಸಮಗ್ರ ನ್ಯೂಸ್: ಕಾಂತಾರ ಸಿನಿಮಾದ ಅಬ್ಬರ ಎಲ್ಲೆಡೆ ಮುಂದುವರೆದಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಬಾಕ್ಸ್‌ ಆಫೀಸ್‌ನಲ್ಲಿ ಕಾಂತಾರ ಸದ್ದು ಮುಂದುವರೆದಿದೆ. ಈ ನಡುವೆ ಕಾಂತಾರ ಸಿನಿಮಾದ ಜನಪ್ರಿಯ ‘ವರಾಹ ರೂಪಂ’ ಹಾಡಿಗೆ ವಿವಾದ ಸುತ್ತಿಕೊಂಡಿತ್ತು. ಈ ಕುರಿತು ಕೇರಳದ ಕೋರ್ಟ್ ಹಾಡನ್ನು ಬಳಸದಂತೆ ತಡೆಯಾಜ್ಞೆ ನೀಡಿತ್ತು. ಆದರೆ ಇದೀಗ ಕೋರ್ಟ್ ಕದ ತಟ್ಟಿರುವ ‘ತೈಕುಡಂ ಬ್ರಿಡ್ಜ್’ ಬ್ಯಾಂಡ್ ತಂದ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಇದು ಕಾಂತಾರ ತಂಡಕ್ಕೆ ಸ್ವಲ್ಪಮಟ್ಟಿಗೆ ನೆಮ್ಮದಿ

‘ವರಾಹ ರೂಪಂ’ ಹಾಡನ್ನು ಬಳಸಿಕೊಳ್ಳಬಹುದು, ಆದರೆ… Read More »

ಕಾಸರಗೋಡು: ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ|ಅವಾಂತರಕ್ಕೆ ಸುಸ್ತಾದ ಲೈನ್ ಮ್ಯಾನ್ ಗಳು…..!!

ಸಮಗ್ರ ನ್ಯೂಸ್: ಮಾನಸಿಕ ಅಸ್ವಸ್ಥನೊಬ್ಬ ವಿದ್ಯುತ್ ಕಂಬದ ಮೇಲೆ ಹತ್ತಿ ಕೇಬಲ್ ಮೇಲೆ ನಡೆದಾಡಿದ ಘಟನೆ ಕಾಞಂಗಾಡು ಸಮೀಪದ ಮಾವುಂಗಲ್‌ನಲ್ಲಿ ಎಂಬಲ್ಲಿ ನಡೆದಿದೆ. ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡ ವ್ಯಕ್ತಿ ಶನಿವಾರ ಮಧ್ಯಾಹ್ನ ವಿದ್ಯುತ್ ಕಂಬ ಹತ್ತಲು ಪ್ರಾರಂಭಿಸಿದ್ದಾನೆ. ಈ ವೇಳೆ ನೋಡಿ ಸ್ಥಳೀಯರು ಕೂಡಲೇ ವಿದ್ಯುತ್ ಮಂಡಳಿಗೆ ತಿಳಿಸಿದ್ದಾರೆ, ಈ ಹಿನ್ನಲೆ ಆ ಲೈನ್ ನಿಂದ ಪವರ್ ತೆಗೆದಿದ್ದಾರೆ. ಮಾನಸಿಕ ಅಸ್ವಸ್ಥ ವಿದ್ಯುತ್ ಕಂಬ ಹತ್ತಿ ಬಳಿಕ ವಿದ್ಯುತ್‌ ಕೇಬಲ್‌ ಮೇಲೆ ನಡೆದುಕೊಂಡು ಸರ್ಕಸ್ ಮಾಡಿದ್ದಾನೆ. ಸ್ಥಳಕ್ಕ

ಕಾಸರಗೋಡು: ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ|ಅವಾಂತರಕ್ಕೆ ಸುಸ್ತಾದ ಲೈನ್ ಮ್ಯಾನ್ ಗಳು…..!! Read More »

ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ನಾಪತ್ತೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಐನೆಕಿದು ಗ್ರಾಮದ ಮೂಕಮಲೆ ಮನೆಯ ಶಶಿಕಾಂತ್ ಎಂಬವರ ಪತ್ನಿ ಭಾರತಿ ಮೂಕಮಲೆ (33) ಎಂಬವರು ಅ.29 ರಂದು ಕಾಣೆಯಾಗಿರುವುದಾಗಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾರತಿ ಅವರ ಪತಿ ದೂರು ನೀಡಿದ್ದು ಅ.29 ಮದ್ಯಾಹ್ನ ತನಕ ಕೆಲಸಕ್ಕೆ ಹೋಗಿ ಬಳಿಕ ಮರಳಿ ಮನೆಗೆ ಹೋಗಿ ಅವರ ತಾಯಿ ಸರಸ್ವತಿ ಹಾಗೂ ಅತ್ತೆ ಭವಾನಿ ಎಂಬವರ ಚಿಕಿತ್ಸೆಯ ಬಗ್ಗೆ ಕಾಣಿಯೂರು ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಪತಿಯ ತಾಯಿ

ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ನಾಪತ್ತೆ Read More »