September 2022

ಮೈಸೂರು: ಈಬಾರಿಯ ಮಹಿಳಾ ದಸರೆಯ ಸ್ಪೆಷಾಲಿಟಿ ಏನು ಗೊತ್ತೇ?

ಸಮಗ್ರ ನ್ಯೂಸ್: ಮೈಸೂರು ದಸರಾ ಮಹೋತ್ಸವ, ಮಹಿಳಾ ಮತ್ತು ಮಕ್ಕಳ ದಸರಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸೆ. 27 ರಿಂದ ಅ.1 ರವರೆಗೆ ಮಹಿಳೆಯರಿಗಾಗಿ ಮಹಿಳಾ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹಿಳಾ ದಸರಾ ಅಂಗವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಸೆ. 27 ರಂದು ಬೆಳಗ್ಗೆ 7:30 ರಿಂದ 9:30 ಗಂಟೆಯವರೆಗೆ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ಸ್ಪರ್ಧೆಯಲ್ಲಿ ಭಾಗವಹಿಸಲು […]

ಮೈಸೂರು: ಈಬಾರಿಯ ಮಹಿಳಾ ದಸರೆಯ ಸ್ಪೆಷಾಲಿಟಿ ಏನು ಗೊತ್ತೇ? Read More »

ಮೈಸೂರು: ಇಂದಿನಿಂದ 90 ದಿನಗಳ ಕಾಲ ನಡೆಯಲಿದೆ ದಸರಾ ವಸ್ತುಪ್ರದರ್ಶನ

ಸಮಗ್ರ ನ್ಯೂಸ್: ಮೈಸೂರು ದಸರಾ ಅಂಗವಾಗಿ ದೊಡ್ಡ ಕೆರೆ ಮೈದಾನದಲ್ಲಿ ಸೆ.26ರಿಂದ 90 ದಿನಗಳವರೆಗೆ ನಡೆಯಲಿರುವ ದಸರಾ ವಸ್ತುಪ್ರದರ್ಶನದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನಟ ಪುನೀತ್‌ ರಾಜ್‌ಕುಮಾರ್ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಸ್ಯಾಂಡ್ ಮ್ಯೂಸಿಯಂ ನಿರ್ಮಿಸಲಾಗಿದೆ’ ಎಂದು ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ತಿಳಿಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ‘ಸೆ.26ರಂದು ಸಂಜೆ 4ಕ್ಕೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಉದ್ಘಾಟಿಸಲಿದ್ದಾರೆ. ವಸ್ತುಪ್ರದರ್ಶನವನ್ನು ಯಶಸ್ವಿ ಗೊಳಿಸಲು ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂದರ್ಶಕರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ’ ಎಂದರು.‘ವಯಸ್ಕರಿಗೆ 30 ರೂ, ಮಕ್ಕಳಿಗೆ

ಮೈಸೂರು: ಇಂದಿನಿಂದ 90 ದಿನಗಳ ಕಾಲ ನಡೆಯಲಿದೆ ದಸರಾ ವಸ್ತುಪ್ರದರ್ಶನ Read More »

ಮಕ್ಕಳಿಗೆ‌ ಸಂಸ್ಕಾರವನ್ನು ಕಲಿಸುವ ಅವಶ್ಯಕತೆ ಇದೆ – ಕಿಶೋರ್ ಕುಮಾರ್

ಪಾಶ್ಚಾತ್ಯ ಸಂಸ್ಕ್ರತಿಗೆ ಮಾರುಹೋಗಿ‌ ಭಾರತೀಯ ಸಂಸ್ಕಾರ ಮರೆಯಾಗುತ್ತಿದೆ. ಆದ್ದರಿಂದ ಇಂದು ಸಂಸ್ಕ್ರತಿಗಳ ಉಳಿವಿಗೆ ಮಕ್ಕಳಿಗೆ ಸಂಸ್ಕಾರ ಕಲಿಸುವ ಅಗತ್ಯವಿದೆ. ಇವನ್ನು ಹಿರಿಯರನ್ನು ಗೌರವಿಸುವ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದರು. ಅವರು ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ, ವಾರ್ಷಿಕ ಮಹಾಸಭೆ, ಸ್ಪಂದನ ಗೆಳೆಯರ ಬಳಗ ಅಡ್ತಲೆ ಇದರ ಸಹಯೋಗದಲ್ಲಿ ಧಾರ್ಮಿಕ ಶಿಕ್ಷಣ ತರಗತಿ ಉದ್ಘಾಟನೆ ಹಾಗು

ಮಕ್ಕಳಿಗೆ‌ ಸಂಸ್ಕಾರವನ್ನು ಕಲಿಸುವ ಅವಶ್ಯಕತೆ ಇದೆ – ಕಿಶೋರ್ ಕುಮಾರ್ Read More »

ಉಡುಪಿ: ಹೂಡೆ ಬೀಚ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು; ಮತ್ತೋರ್ವ ನಾಪತ್ತೆ

ಸಮಗ್ರ ನ್ಯೂಸ್: ಹೂಡೆ ಸಮೀಪದ ಬೀಚ್‌ನಲ್ಲಿ ರವಿವಾರ ಸಂಜೆ ನೀರಿನಲ್ಲಿ ಮುಳುಗಿ ತೀವ್ರವಾಗಿ ಅಸ್ವಸ್ಥಗೊಂಡ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಓರ್ವ ಸಮುದ್ರಪಾಲಾಗಿರುವ ಬಗ್ಗೆ ವರದಿಯಾಗಿದೆ. ಮೃತರನ್ನು ಬೆಂಗಳೂರಿನ ನಿಶಾಂತ್ (21) ಹಾಗೂ ಷಣ್ಮುಗ (21) ಎಂದು ಗುರುತಿಸಲಾಗಿದೆ.ಇನ್ನೋರ್ವ ವಿದ್ಯಾರ್ಥಿ ಶ್ರೀಕರ್ (21) ಎಂಬವರು ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಇವರೆಲ್ಲರು ಮಣಿಪಾಲದ ಐಸಿಎಎಸ್ ವಿದ್ಯಾರ್ಥಿಗಳಾಗಿದ್ದಾರೆ. ವಾರಾಂತ್ಯ ಹಿನ್ನೆಲೆಯಲ್ಲಿ ಮಣಿಪಾಲದ ಸುಮಾರು 15 ಮಂದಿ ವಿದ್ಯಾರ್ಥಿಗಳು ಹೂಡೆ ಬೀಚ್‌ನಲ್ಲಿ ವಿಹಾರಕ್ಕೆಂದು ಬಂದಿದ್ದರು. ಅಲ್ಲಿ ಕೆಲವರು ಸಮುದ್ರದ ನೀರಿನಲ್ಲಿ ಆಡುತ್ತಿದ್ದ

ಉಡುಪಿ: ಹೂಡೆ ಬೀಚ್ ನಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು; ಮತ್ತೋರ್ವ ನಾಪತ್ತೆ Read More »

ಲಂಚ, ಭ್ರಷ್ಟಾಚಾರಕ್ಕೆ ರಾಜ್ಯ ಸರ್ಕಾರದಿಂದ ತೇಪೆ ಕಾರ್ಯ| ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮುಕ್ತ ನಾಮಫಲಕ!

ಸಮಗ್ರ ನ್ಯೂಸ್: ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ಶೀರ್ಷಿಕೆಯ ನಾಮಫಲಕವನ್ನು ಅಳವಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ಪೇ ಸಿಎಂ ಪೋಸ್ಟರ್ ಕಾಂಗ್ರೆಸ್ ಅಭಿಯಾನಕ್ಕೆ ರಾಜ್ಯ ಸರ್ಕಾರದಿಂದ ಟಕ್ಕರ್ ಕೊಡಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಳವಡಿಸಲು ಅದೇಶ ಮತ್ತು ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ರಿಂದ ಮಹತ್ವದ ಆದೇಶ ಮಾಡಲಾಗಿದೆ. ಅಕ್ಟೋಬರ್

ಲಂಚ, ಭ್ರಷ್ಟಾಚಾರಕ್ಕೆ ರಾಜ್ಯ ಸರ್ಕಾರದಿಂದ ತೇಪೆ ಕಾರ್ಯ| ಇನ್ಮುಂದೆ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮುಕ್ತ ನಾಮಫಲಕ! Read More »

ರಾಷ್ಟ್ರ ರಾಜಧಾನಿಯಲ್ಲಿ‌ ಬಾಲಕರೂ ಸೇಫಲ್ಲ| 12 ವರ್ಷದ ಬಾಲಕನ ಮೇಲೆ‌ ನಾಲ್ವರಿಂದ ಅತ್ಯಾಚಾರ ಮಾಡಿ ಹಲ್ಲೆ!!

ಸಮಗ್ರ ನ್ಯೂಸ್: 12 ವರ್ಷದ ಬಾಲಕನ ಮೇಲೆ ನಾಲ್ವರು ಅತ್ಯಾಚಾರ ಎಸಗಿ ಬಳಿಕ ಅಪ್ರಾಪ್ರನನ್ನು ದೊಣ್ಣೆಗಳಿಂದ ಹೊಡೆದು ಅರೆಬೆಂದ ಸ್ಥಿತಿಯಲ್ಲಿ ಬಿಟ್ಟು ಹೋದಂತಹ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮುಖ್ಯಸ್ಥೆ ಸ್ವಾತಿ ಮಲಿವಾಲ್ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದು, ದೆಹಲಿಯಲ್ಲಿ, ಹುಡುಗರು ಸಹ ಸುರಕ್ಷಿತವಾಗಿಲ್ಲ ಎಂದು ಹೇಳಿದ್ದಾರೆ. ಮಹಿಳಾ ಸಮಿತಿಯು ಘಟನೆ ಸಂಬಂಧ ದೆಹಲಿ ಪೊಲೀಸರಿಗೆ ಎಫ್‌ಐಆರ್ ದಾಖಲಿಸಿದೆ ಎಂದು ಸ್ವಾತಿ ಪಲಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ಹುಡುಗಿಯರು ಬಿಡಿ,

ರಾಷ್ಟ್ರ ರಾಜಧಾನಿಯಲ್ಲಿ‌ ಬಾಲಕರೂ ಸೇಫಲ್ಲ| 12 ವರ್ಷದ ಬಾಲಕನ ಮೇಲೆ‌ ನಾಲ್ವರಿಂದ ಅತ್ಯಾಚಾರ ಮಾಡಿ ಹಲ್ಲೆ!! Read More »

ಅಮವಾಸ್ಯೆಯಂದೇ ಮಾಂತ್ರಿಕೆಯ ಮನೆ ಮೇಲೆ ದಾಳಿ| ಪೊಲೀಸರ ಮುಂದೆ ಮಹಿಳಾ ಮಾಂತ್ರಿಕೆಯ ಹೈಡ್ರಾಮಾ

ಸಮಗ್ರ ನ್ಯೂಸ್: ದೇವರ ಹೆಸರಿನಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ‌ ಮಹಿಳಾ ಮಾಂತ್ರಿಕೆಯ ಮನೆ ಮೇಲೆ ಅಮವಾಸ್ಯೆಯಂದೇ ಪೊಲೀಸ್ ದಾಳಿ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ನಡೆದಿದೆ. ಜೀಲಾನಿ ಅಬ್ದುಲ್ ವುಲ್ಲಾ ಪ್ರಕರಣದ ಆರೋಪಿ. ಈಕೆ ಮಾಟ ಮಂತ್ರ ಮಾಡುತ್ತೇನೆ ಎಂದು ನೂರಾರು ಜನರಿಗೆ ನಂಬಿಸಿ ಹಣ ಪೀಕುತಿದ್ದಳು. ಅಲ್ಲದೆ ದೇವರ ಹೆಸರಿನಲ್ಲಿ ಜನರಿಗೆ ಬೆದರಿಕೆ ಹಾಕುತ್ತಿದ್ದ‌ಳು. ಹೀಗಾಗಿ ಮಹಿಳೆಯ ಮೈದುನ ಶಮೀರ್ ಅಬ್ದುಲ್ ವುಲ್ಲಾರಿಂದ ದೂರು ದಾಖಲಾಗಿತ್ತು. ದೂರು ಹಿನ್ನೆಲೆ ಮತ್ತು

ಅಮವಾಸ್ಯೆಯಂದೇ ಮಾಂತ್ರಿಕೆಯ ಮನೆ ಮೇಲೆ ದಾಳಿ| ಪೊಲೀಸರ ಮುಂದೆ ಮಹಿಳಾ ಮಾಂತ್ರಿಕೆಯ ಹೈಡ್ರಾಮಾ Read More »

ಈ ಬಾರಿ ದಸರಾ ಕಾರ್ಯಕ್ರಮಕ್ಕೆ ನಟ ಸುದೀಪ್‌ ಆಗಮಿಸುವುದಿಲ್ಲ:ಸಚಿವ ಸೋಮಶೇಖರ್‌

ಸಮಗ್ರ ನ್ಯೂಸ್: ಈ ಬಾರಿ ಯುವ ದಸರಾಗೆ ವಿಶೇಷ ಅತಿಥಿಯಾಗಿ ನಟ ಸುದೀಪ್ ಆಗಮಿ ಸುತ್ತಿಲ್ಲ. ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಸಚಿವ ಸೋಮಶೇಖರ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವ ದಸರಾ ಕಾರ್ಯಕ್ರಮದಲ್ಲಿ ಸುದೀಪ್‌ ಪಾಲ್ಗೊಳ್ಳದ ಹಿನ್ನೆಲೆ ಬೇರೊಬ್ಬರನ್ನು ಆಹ್ವಾನಿಸ ಲಾಗುತ್ತದೆ’ ಎಂದು ತಿಳಿಸಿದರು. ಇನ್ನು ದಸರಾ ಸಿದ್ಧತೆ ಕಾರ್ಯಕ್ರಮಗಳಲ್ಲಿ ಶಾಸಕ ರಾಮದಾಸ್ ಪಾಲ್ಗೊಳ್ಳುತ್ತಿಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಅವರು ಮೋದಿ ಯುಗ ಉತ್ಸವ ಮಾಡುತ್ತಿದ್ದಾರೆ. ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ’ ಎಂದರು. ದಸರೆಗೆ

ಈ ಬಾರಿ ದಸರಾ ಕಾರ್ಯಕ್ರಮಕ್ಕೆ ನಟ ಸುದೀಪ್‌ ಆಗಮಿಸುವುದಿಲ್ಲ:ಸಚಿವ ಸೋಮಶೇಖರ್‌ Read More »

ದಲಿತ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ
ಬಲವಂತವಾಗಿ ಮತಾಂತರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳಿ: ಅಂಬೇಡ್ಕರ್ ರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ದಲಿತ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದವ ವಿರುದ್ಧ ಎಫ್ಐಆರ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪೊಲೀಸ್ ಇಲಾಖೆಯವರಿಗೆ ಮನವಿ ಮಾಡಲಾಯಿತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯಾದವನಹಳ್ಳಿ ಗ್ರಾಮದ ಶ್ರೀಧರ ಗಂಗಾಧರ (26) ಎಂಬವರು ಮತಾಂತರಕ್ಕೆ ಒಳಗಾಗಿರುವವರು. ಇವರನ್ನು ಬಲವಂತವಾಗಿ ಮಸೀದಿಯಲ್ಲಿ ಬಂಧಿಸಿ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡಲಾಗಿತ್ತು. ಹಾಗಾಗಿ ಮತಾಂತರ ಮಾಡಿದ 11 ಜನರ ಮೇಲೆ ಎಫ್ ಐ ಆರ್ ದಾಖಲು ಮಾಡಿ ಕಠಿಣ ಕ್ರಮ

ದಲಿತ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ
ಬಲವಂತವಾಗಿ ಮತಾಂತರಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳಿ: ಅಂಬೇಡ್ಕರ್ ರಕ್ಷಣಾ ವೇದಿಕೆ
Read More »

ಇಂದು ಪಿತೃಪಕ್ಷದ ಮಹಾಲಯ ಅಮಾವಾಸ್ಯೆ; ಪಿಂಡ ಪ್ರದಾನ ಮಾಡಲು ಕಾವೇರಿ ನದಿ ದಡದಲ್ಲಿ ಸಾವಿರಾರು ಮಂದಿ

ಸಮಗ್ರ ನ್ಯೂಸ್: ಇಂದು ಪಿತೃಪಕ್ಷದ ಮಹಾಲಯ ಅಮಾವಾಸ್ಯೆ ಹಿನ್ನೆಲೆ ರಾಜ್ಯದ ವಿವಿಧ ಮೂಲಗಳಿಂದ ಪಿಂಡ ಪ್ರದಾನ ಮಾಡಲು ಕಾವೇರಿ ನದಿ ದಡಕ್ಕೆ ಆಗಮಿಸಿದ ಸಾವಿರಾರು ಮಂದಿ ಪೂಜಾ ಕೈಂಕರ್ಯದಲ್ಲಿ ತೊಡಗಿದ್ದಾರೆ. ಶ್ರೀರಂಗಪಟ್ಟಣದ ಕಾವೇರಿ ನದಿ ತಟದಲ್ಲಿ ಆಸ್ತಿಕರ ಜನ ಜಾತ್ರೆ ನಡೆಯುತ್ತದೆ. ಈ ಹಿನ್ನೆಲೆ ಕಾವೇರಿ ನದಿ ತಟದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ತಮ್ಮ ಕುಟುಂಬದ ಹಿರಿಯರಿಗೆ ಪಶ್ಚಿಮವಾಹಿನಿ, ಸ್ನಾನಘಟ್ಟ, ಗೋಸಾಯಿಘಾಟ್ ಹಾಗೂ ಸಂಗಮದಲ್ಲಿ ಪಿಂಡ ತರ್ಪಣ ಮಾಡಲಾಗುತ್ತಿದೆ. ಪಿಂಡ ಪ್ರದಾನ ಮಾಡಲು ಕಾವೇರಿ ನದಿ

ಇಂದು ಪಿತೃಪಕ್ಷದ ಮಹಾಲಯ ಅಮಾವಾಸ್ಯೆ; ಪಿಂಡ ಪ್ರದಾನ ಮಾಡಲು ಕಾವೇರಿ ನದಿ ದಡದಲ್ಲಿ ಸಾವಿರಾರು ಮಂದಿ Read More »