ನಾಪತ್ತೆಯಾಗಿದ್ದ ಅರಣ್ಯ ವೀಕ್ಷಕ ಶವವಾಗಿ ಪತ್ತೆ
ಸಮಗ್ರ ನ್ಯೂಸ್: ಮಡಿಕೇರಿ ತಾಲ್ಲೂಕಿನ ಮಾಕುಟ್ಟ ಅರಣ್ಯ ವ್ಯಾಪ್ತಿಯ ಕೊಕ್ಕ ಗ್ರಾಮದ ನದಿಯಲ್ಲಿ ಅರಣ್ಯ ವೀಕ್ಷಕ ವಿ.ತರುಣ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಅವರು ಗಸ್ತು ಕಾರ್ಯ ನಡೆಸುತ್ತಿರುವಾಗ ನಾಪತ್ತೆಯಾಗಿದ್ದರು. ನದಿಯಲ್ಲಿ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಎನ್ ಡಿ ಆರ್ ಎಫ್ ಸಿಬ್ಬಂದಿ ಹುಡುಕಾಟ ನಡೆಸಿ, ನದಿಯಿಂದ ಶವವನ್ನು ಹೊರತೆಗೆದರು.
ನಾಪತ್ತೆಯಾಗಿದ್ದ ಅರಣ್ಯ ವೀಕ್ಷಕ ಶವವಾಗಿ ಪತ್ತೆ Read More »