September 2022

ಚಿಕ್ಕಮಗಳೂರು: ಮಾಂಸಕ್ಕಾಗಿ ಗರ್ಭಿಣಿ ಹಸುವಿನ ಹತ್ಯೆ| ಕರುವನ್ನು ಕಾಡಲ್ಲಿ ಬಿಸಾಡಿ ದುಷ್ಕೃತ್ಯ

ಸಮಗ್ರ ನ್ಯೂಸ್: ಮಾಂಸಕ್ಕಾಗಿ ಹಸುವನ್ನ ಕೊಂದ ದುರುಳರು ಅದರ ಹೊಟ್ಟೆಯಲ್ಲಿದ್ದ ಕರುವನ್ನು ಕಾಡಿಗೆ ಬಿಸಾಡಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಹಳೆಕಡುಬಗೆರೆ ಗ್ರಾಮದಲ್ಲಿ ನಡೆದಿದೆ. ಮೇವಿಗೆ ಹೋಗಿದ್ದ ಹಳೆಕಡುಬಗೆರೆ ಗ್ರಾಮದ ರವೀಂದ್ರ ಎಂಬುವರಿಗೆ ಸೇರಿದ ಹಸು ಮನೆಗೆ ಬಂದಿರಲಿಲ್ಲ. ಹಸು ಗಬ್ಬದ ಹಸುವಾಗಿದ್ದು, ಮನೆಗೆ ಬಾರದ ಕಾರಣ ರವೀಂದ್ರ ಹಸುವನ್ನ ಹುಡುಕೊಂಡು ಹೋಗಿದ್ದರು. ಈ ವೇಳೆ, ಕಾಡಿನಲ್ಲಿ ಹಸುವಿನ ತಲೆ ಪತ್ತೆಯಾಗಿದೆ. ಮಗುವಂತೆ ಸಾಕಿದ್ದ ಗಬ್ಬದ ಹಸುವಿನ ಸ್ಥಿತಿ ಕಂಡು ಕಣ್ಣೀರಿಟ್ಟಿದ್ದಾರೆ. ಮಾಂಸಕ್ಕಾಗಿ ಹಸುವನ್ನ […]

ಚಿಕ್ಕಮಗಳೂರು: ಮಾಂಸಕ್ಕಾಗಿ ಗರ್ಭಿಣಿ ಹಸುವಿನ ಹತ್ಯೆ| ಕರುವನ್ನು ಕಾಡಲ್ಲಿ ಬಿಸಾಡಿ ದುಷ್ಕೃತ್ಯ Read More »

ಮಂಗಳೂರು: ಪ್ರಧಾನಿ ಮೋದಿ ಭೇಟಿ ಹಿನ್ನಲೆ| ಸಂಚಾರ ಮಾರ್ಗದಲ್ಲಿ ಬದಲಾವಣೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಸೆ.2ರಂದು ಮಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶ‌ ಹೊರಡಿಸಿದ್ದಾರೆ. ಸುಗಮ ಸಂಚಾರ, ಭದ್ರತೆ ಹಾಗೂ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಮತ್ತು ಸಂಚಾರ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರ ಬೆಳಿಗ್ಗೆ 6ರಿಂದ ಪ್ರಧಾನಿ ಕಾರ್ಯಕ್ರಮ ಮುಗಿಸಿ ನಿರ್ಗಮಿಸುವವರೆಗೂ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಪ್ರಧಾನಿ ಕಾರ್ಯಕ್ರಮಕ್ಕೆ ಬರುವ ವಾಹನಗಳಿಗೆ ನಿರ್ದಿಷ್ಟ ಸ್ಥಳಗಳಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ

ಮಂಗಳೂರು: ಪ್ರಧಾನಿ ಮೋದಿ ಭೇಟಿ ಹಿನ್ನಲೆ| ಸಂಚಾರ ಮಾರ್ಗದಲ್ಲಿ ಬದಲಾವಣೆ Read More »

ಸೋನಿಯಾ ಗಾಂಧಿಗೆ ಮಾತೃ‌ವಿಯೋಗ

ಸಮಗ್ರ ನ್ಯೂಸ್: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೋ ನಿಧನರಾಗಿದ್ದಾರೆ. ಆಗಸ್ಟ್​ 27 ಶನಿವಾರದಂದು ಇಟಲಿಯ ಮನೆಯಲ್ಲಿ ಪಾವೊಲಾ ಮೈನೋ ನಿಧನರಾಗಿದ್ದು, ಮಂಗಳವಾರ ಅಂತ್ಯಕ್ರಿಯೆ ನಡೆದಿದೆ. ಇದು ವೈದ್ಯಕೀಯ ತಪಾಸಣೆಗಾಗಿ ತೆರಳಿದ್ದ ಅವರ ವಿದೇಶ ಪ್ರವಾಸದ ಭಾಗವಾಗಿತ್ತು, ಅಲ್ಲಿ ಅವರ ಮಗ ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ತೆರಳಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತಾಯಿ ಪಾವೊಲಾ ಮೈನೋ ಅವರು ಆಗಸ್ಟ್ 27 ರಂದು ನಿಧನರಾದರು ಮತ್ತು

ಸೋನಿಯಾ ಗಾಂಧಿಗೆ ಮಾತೃ‌ವಿಯೋಗ Read More »