ಬಾಲಕನ ಚಿಕಿತ್ಸೆಗೆ ಹರಿದು ಬಂದ ನೆರವಿನ ಮಹಾಪೂರ/ಅಪರೂಪದ ಥಲೆಸ್ಸೀಮಿಯ ರೋಗದಿಂದ ಬಳಲುತ್ತಿರುವ ಕೂವೆ ಗ್ರಾಮದ ರಿತ್ವಿಕ್
ಕೊಟ್ಟಿಗೆಹಾರ:ಅಪರೂಪದ ಥಲೆಸ್ಸೀಮಿಯ ರೋಗದಿಂದ ಬಳಲುತ್ತಿರುವ ಕೂವೆ ಗ್ರಾಮದ ರಿತ್ವಿಕ್ ಚಿಕಿತ್ಸೆಗೆ ಧಾನಿಗಳಿಂದ ನೆರವಿನ ಮಹಾಪೂರವೇ ಹರಿದು ಬಂದಿದೆ. ದಾನಿಗಳಿಂದ, ಸಂಘ ಸಂಸ್ಥೆಗಳಿಂದ, ಪಕ್ಷದ ಮುಖಂಡರಿಂದ ಸುಮಾರು ೪೧ ಲಕ್ಷ ನೆರವು ಹರಿದು ಬಂದಿದೆ. ಕೂವೆ ಗ್ರಾಮದ ದಿವಾಕರ ಮತ್ತು ಶಾಲಿನಿ ದಂಪತಿಗಳ ಪುತ್ರ ಏಳು ವರ್ಷದ ರಿತ್ವಿಕ್ ಬಿಳಿರಕ್ತ ಕಣಗಳು ಉತ್ಪತ್ತಿಯಾಗದ ಅಪರೂಪದ ಥಲೇಸ್ಸಿಮಿಯ ಎಂಬ ರೋಗದಿಂದ ಬಳಲುತ್ತಿದ್ದು ತಿಂಗಳಿಗೆ ಎರಡು ಬಾರಿ ರಕ್ತ ಕೊಡಿಸಲು ಮಂಗಳೂರಿನ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಬಾಲಕ ರಿತ್ವಿಕ್‌ನ ರೋಗ ಗುಣವಾಗಬೇಕಾದರೆ […]