September 2022

ವಿಭಿನ್ನ ರೀತಿಯಲ್ಲಿ ಮದುವೆಯಾದ ಜೋಡಿ ಹಕ್ಕಿಗಳು

ಸಮಗ್ರ ನ್ಯೂಸ್: ಸಂವಿಧಾನ ಶಿಲ್ಪಿ ಡಾ. ಬಿ.ಆರ್​.ಅಂಬೇಡ್ಕರ್ ಅವರ ಭಾವಚಿತ್ರದ ಮುಂದೆ ಪ್ರೇಮಿಗಳಿಬ್ಬರು ವಿವಾಹವಾಗಿದ್ದಾರೆ. ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದ ಯುವಕ ವಿರೇಶ್ ಮತ್ತು ಬಾಗಲಕೋಟೆ ಮೂಲದ ಅನುಪಮಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಹತ್ತು ವರ್ಷದಿಂದ ಅನುಪಮಾ ಕುಟುಂಬಸ್ಥರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದರು. ಆಗ ಪಿಯುಸಿ ಯಲ್ಲಿದ್ದಾಗ ಇವರಿಬ್ಬರ ನಡುವೆ ಪ್ರೀತಿ ಆರಂಭವಾಯಿತು. ಪಿಯು ಮುಗಿದ ಬಳಿಕ ವಿರೇಶ್ ಆಟೋ ಚಾಲಕನಾಗಿ ಕೆಲಸ ಮಾಡಲಾರಂಭಿಸಿದ, ಅನುಪಮಾ ಕಾಲೇಜು ಮುಗಿಸಿ ಮನೆಯಲ್ಲಿಯೇ ಇದ್ದಳು. ಆದರೆ ಇವರಿಬ್ಬರ ಪ್ರೀತಿಗೆ ಎರಡೂ ಕುಟುಂಬಸ್ಥರಿಂದಲೂ […]

ವಿಭಿನ್ನ ರೀತಿಯಲ್ಲಿ ಮದುವೆಯಾದ ಜೋಡಿ ಹಕ್ಕಿಗಳು Read More »

ಸುಳ್ಯ: ಪ್ರವೀಣ್ ನೆಟ್ಟಾರುರವರ ಚಿಕನ್ ಅಂಗಡಿ ಪುನರಾರಂಭ| ಇವರೇ ಅಂಗಡಿಯ ಹೊಸ ಮಾಲೀಕ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಮುಚ್ಚಿದ್ದ ಪ್ರವೀಣ್ ಮಾಲೀಕತ್ವದ ಕೋಳಿ ಅಂಗಡಿ ಮತ್ತೆ ಪುನಾರಂಭಗೊಂಡಿದೆ. ಪ್ರವೀಣ್ ನೆಟ್ಟಾರು ‌ಕುಟುಂಬಸ್ಥರು ಅಂಗಡಿ ಮುನ್ನಡೆಸಲು ಉತ್ಸಾಹ ತೋರದ ಕಾರಣ ಬೆಳ್ಳಾರೆ ಭಾಗದ ಮತ್ತೊಬ್ಬ ಬಿಜೆಪಿ ಮತ್ತು‌ ಹಿಂದೂ ಕಾರ್ಯಕರ್ತರೊಬ್ಬರು ಈ ಅಂಗಡಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜು.26ರಂದು ಹಂತಕರಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಮಾಲೀಕತ್ವದ ಅಕ್ಷಯ ಚಿಕನ್ ಸೆಂಟರ್ ಮತ್ತೆ ಪುನರಾರಂಭಗೊಂಡಿದೆ. ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿರುವ ಈ ಅಂಗಡಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಸಕ್ರೀಯ ಸದಸ್ಯ

ಸುಳ್ಯ: ಪ್ರವೀಣ್ ನೆಟ್ಟಾರುರವರ ಚಿಕನ್ ಅಂಗಡಿ ಪುನರಾರಂಭ| ಇವರೇ ಅಂಗಡಿಯ ಹೊಸ ಮಾಲೀಕ Read More »

ರಾಜ್ಯದಲ್ಲಿ ನೂತನವಾಗಿ 4,244 ಅಂಗನವಾಡಿ ಕೇಂದ್ರ ಆರಂಭಕ್ಕೆ ಆದೇಶ

ಬೆಂಗಳೂರು : ರಾಜ್ಯದಲ್ಲಿ ನೂತನವಾಗಿ 4,244 ಅಂಗನವಾಡಿ ಕೇಂದ್ರಗಳ ಆರಂಭಿಸುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ನೂತನವಾಗಿ 4,244 ಅಂಗನವಾಡಿ ಕೇಂದ್ರಗಳ ಆರಂಭಿಸಲಾಗುವುದು. ಹಾಗೆ ನಗರ ಪ್ರದೇಶದಲ್ಲಿ 2,589 ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ಇನ್ನು ಕಡಿಮೆ ಆದಾಯದ ಜನಸಂಖ್ಯೆ ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶದಲ್ಲಿ, ವಲಸೆ ಮತ್ತು ಭೂರಹಿತ ಕಾರ್ಮಿಕರಿರುವ ಸ್ಥಳದಲ್ಲಿ 1,655 ಕೇಂದ್ರಗಳನ್ನು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 1,655 ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು. ರಾಜ್ಯ ಸರ್ಕಾರ ಅಂಗನವಾಡಿಗಳಿಗೆ

ರಾಜ್ಯದಲ್ಲಿ ನೂತನವಾಗಿ 4,244 ಅಂಗನವಾಡಿ ಕೇಂದ್ರ ಆರಂಭಕ್ಕೆ ಆದೇಶ Read More »

ಬೆಳ್ತಂಗಡಿ: ಅಪ್ರಾಪ್ತೆಯ ಮನೆಯಲ್ಲಿ ನೈಟ್ ಡ್ಯೂಟಿ ಮಾಡ್ತಿದ್ದ ಯುವಕ| ಕಾದು ಕುಳಿತು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು!!

ಸಮಗ್ರ ನ್ಯೂಸ್: ಮನೆಗೆ ರಾತ್ರಿ ಬಂದ ಯುವಕ ಅಪ್ರಾಪ್ತ ಸ್ನೇಹಿತೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದು, ಆತನ ವಿರುದ್ದ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾದ ಘಟನೆ ಬೆಳ್ತಂಗಡಿ ತಾಲೂಕಿನ ನಿಡ್ಲೆಯಲ್ಲಿ‌ ನಡೆದಿದೆ. ನಿಡ್ಲೆ ಕುದ್ರಾಯ ಸಮೀಪ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಬೈಕ್ ನಿಲ್ಲಿಸಲಾಗುತ್ತಿದ್ದ ವ್ಯಕ್ತಿ ಯಾರು ಎಂಬುದು ಇಲ್ಲಿನ ಸ್ಥಳೀಯರ ಬಹುದೊಡ್ಡ ಪ್ರಶ್ನೆಯಾಗಿತ್ತು. ಅಲ್ಲದೇ ಅಕ್ರಮ ಸಂಬಂಧ ಎಂಬ ಸುದ್ದಿ ಹಬ್ಬಿದ್ದು ಸ್ಥಳೀಯ ಕೆಲ ಕೆಂಪು ಬೈಕು ಹೊಂದಿದವರ ಮೇಲೆ ಅನುಮಾನದ ಮಾತುಗಳು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ

ಬೆಳ್ತಂಗಡಿ: ಅಪ್ರಾಪ್ತೆಯ ಮನೆಯಲ್ಲಿ ನೈಟ್ ಡ್ಯೂಟಿ ಮಾಡ್ತಿದ್ದ ಯುವಕ| ಕಾದು ಕುಳಿತು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು!! Read More »

ಮೂಡಿಗೆರೆ: ಅಪರಿಚಿತ ವಾಹನ ಡಿಕ್ಕಿಯಿಂದ ರಸ್ತೆಯಲ್ಲಿ ಮಲಗಿದ್ದ ದನಗಳ ಭೀಕರ ಸಾವು

ಸಮಗ್ರ ನ್ಯೂಸ್: ಅಪರಿಚಿತ ವಾಹನಗಳು ಡಿಕ್ಕಿಯಿಂದ ರಸ್ತೆ ಮಧ್ಯದಲ್ಲಿ ಮಲಗಿದ್ದ ದನಗಳ ಭೀಕರ ಸಾವನಪ್ಪಿದ ಘಟನೆ ಶನಿವಾರ ಬೆಳೆಗ್ಗೆ ಮೂಡಿಗೆರೆ ತಾಲೂಕಿನ ಬಗ್ಗಸಗೊಡು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ದೇಹ ಛಿದ್ರಗೊಂಡು ಸ್ಥಳದಲ್ಲೇ ಮೂರು ದನಗಳು ಮೃತಪಟ್ಟಿವೆ. ಇನ್ನೂ ದಿನಾ ಹಗಲು ರಾತ್ರಿ ವಾಹನ ಸಂಚಾರ ಮಾಡುವವರಿಗೆ ಭಾರೀ ತೊಂದರೆ ಯಾಗುತ್ತಿದೆ. ಇದು ಧರ್ಮಸ್ಥಳ ಹಾಗೂ ಮಂಗಳೂರು ಮತ್ತು ಹೊರನಾಡು , ಶೃಂಗೇರಿ ಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಯಾಗಿದ್ದು ಸಾವಿರಾರು

ಮೂಡಿಗೆರೆ: ಅಪರಿಚಿತ ವಾಹನ ಡಿಕ್ಕಿಯಿಂದ ರಸ್ತೆಯಲ್ಲಿ ಮಲಗಿದ್ದ ದನಗಳ ಭೀಕರ ಸಾವು Read More »

ಅವಳಿ ಮಕ್ಕಳ ವಿಭಿನ್ನ ಸ್ಟೈಲ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ನಟಿ ಅಮೂಲ್ಯ

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ತನ್ನ ಮಕ್ಕಳ ಫೋಟೋ ಶೂಟ್ ಮಾಡಿ ಅಭಿಮಾನಿಗಳಿಗೆ ತನ್ನ ಮಕ್ಕಳನ್ನು ಪರಿಚಯಿಸಿದ್ದರು. ಇದೀಗ ಮತ್ತೆ ಅಮೂಲ್ಯ ತನ್ನ ಮಕ್ಕಳ ವಿಭಿನ್ನ ರೀತಿಯ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಮುದ್ದಾದ ಅವಳಿ ಮಕ್ಕಳ ಸುತ್ತ ಅಕ್ಷರ ಬಳಪ ಸ್ಲೇಟ್ ಪುಸ್ತಕಗಳಿಟ್ಟು ಮಕ್ಕಳ ಫೋಟೋ ಶೂಟ್ ಮಾಡಿಸಿದ್ದಾರೆ.

ಅವಳಿ ಮಕ್ಕಳ ವಿಭಿನ್ನ ಸ್ಟೈಲ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ನಟಿ ಅಮೂಲ್ಯ Read More »

65 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್

ಸಮಗ್ರ ನ್ಯೂಸ್ : ಹುಟ್ಟುಹಬ್ಬದ ಸಂಭ್ರಮದಲ್ಲಿರುವ, ಸದ್ಗುರು ಎಂದೇ ಚಿರಪರಿಚಿತರಾಗಿರುವ ಜಗ್ಗಿ ವಾಸುದೇವ್ ಅವರು ಇಂದು 65ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಜಗ್ಗಿ ವಾಸುದೇವ್ ಅವರು ಸೆಪ್ಟೆಂಬರ್ 3, 1957ರಂದು ಕರ್ನಾಟಕದ ಮೈಸೂರಿನಲ್ಲಿ ಜನಿಸಿದರು. ಸದ್ಗುರುಗಳು 1982ರಿಂದ ದಕ್ಷಿಣ ಭಾರತದಲ್ಲಿ ಯೋಗವನ್ನು ಕಲಿಸುತ್ತಿದ್ದರು. ಬಳಿಕ 1992ರಲ್ಲಿ ಕೊಯಮತ್ತೂರು ಬಳಿ ‘ಇಶಾ ಫೌಂಡೇಶನ್’ ಸ್ಥಾಪಿಸಿದರು. ಇದು ಆಶ್ರಮ & ಯೋಗ ಕೇಂದ್ರವೂ ಹೌದು. 2017ರಲ್ಲಿ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ದೊರಕಿವೆ.

65 ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್ Read More »

ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂದು ಒಂದು ವರ್ಷದ ಮಗುವನ್ನು ಬಾವಿಗೆ ಎಸೆದ ಪಾಪಿ ತಂದೆ

ಸಮಗ್ರ ನ್ಯೂಸ್: ಮದ್ಯ ಸೇವನೆ ಮಾಡಲು ಹಣ ಸಿಗಲಿಲ್ಲ ಎಂಬ ಕೋಪದಲ್ಲಿ ವ್ಯಕ್ತಿ ತನ್ನ ಒಂದು ವರ್ಷದ ಮಗಳನ್ನು ಬಾವಿಗೆ ಎಸೆದು ಕೊಲೆ ಮಾಡಿದ ಘಟನೆಯೊಂದು ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಹತಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಖೇಮಚಂದ್ ಎಂಬಾತನೇ ಈ ಕೃತ್ಯ ಎಸೆದ ಪಾಪಿ ತಂದೆ. ಆರೋಪಿ ಖೇಮಚಂದ್ ಮದ್ಯ ಕುಡಿಯಲು ಹಣಬೇಕೆಂದು ತನ್ನ ಹೆಂಡತಿಯಲ್ಲಿ ಕೇಳಿದನು. ಆದರೆ, ಆಕೆ ಹಣವನ್ನು ನೀಡಲು ನಿರಾಕರಿಸಿದ್ದರಿಂದ ಇಬ್ಬರ ನಡುವೆ ಜಗಳವಾಗಿತ್ತು. ಇದೇ ಸಿಟ್ಟಿನಲ್ಲಿ ಖೇಮಚಂದ್ ತನ್ನ ಒಂದು ವರ್ಷದ

ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂದು ಒಂದು ವರ್ಷದ ಮಗುವನ್ನು ಬಾವಿಗೆ ಎಸೆದ ಪಾಪಿ ತಂದೆ Read More »

ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿ ನಟ ಧೃವಾ ಸರ್ಜಾ ಹಾಗೂ ಪ್ರೇರಣಾ ದಂಪತಿ

ಬೆಂಗಳೂರು: ಧೃವಾ ಸರ್ಜಾ ಹಾಗೂ ಪ್ರೇರಣಾ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ. ತಾವು ಪೋಷಕರಾಗುತ್ತಿರುವ ವಿಚಾರವನ್ನು ಪತ್ನಿ ಪ್ರೇರಣಾ ಬೇಬಿ ಬಂಪ್ ಫೋಟೋ ಶೂಟ್ ಮೂಲಕ ಧೃವಾ ಸರ್ಜಾ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಸ್ಟಾರ್ ನಟ ಧೃವಾ ಸರ್ಜಾ ತಂದೆಯಾಗುತ್ತಿದ್ದಾರೆ. ಈ ಸಿಹಿ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ನಾವು ಜೀವನದ ಹಂತಕ್ಕೆ ಪ್ರವೇಶಿಸಿದ್ದೇವೆ. ಶೀಘ್ರದಲ್ಲಿ ಬರಲಿರುವ ಮಗುವನ್ನು ಆಶೀರ್ವದಿಸಿ ಎಂದು ಧೃವಾ ಸರ್ಜಾ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಬೇಬಿ

ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿ ನಟ ಧೃವಾ ಸರ್ಜಾ ಹಾಗೂ ಪ್ರೇರಣಾ ದಂಪತಿ Read More »

ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್ ನಟಿ ಜಾನ್ವಿ ಕಪೂರ್ ಟ್ರೆಡಿಷನಲ್ ಲುಕ್ ನೋಡಿ

ಸಮಗ್ರ ನ್ಯೂಸ್ : ಸದಾ ಹಾಟ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್ ನಟಿ ಜಾನ್ವಿ ಕಪೂರ್ ಇದೀಗ ಲಂಗಾ ದಾವಣಿಯಲ್ಲಿ ಕಾಣಿಸುಕೊಂಡು ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ. ಸಿನೆಮಾಗಳ ಶೂಟಿಂಗ್ ಗೆ ಬ್ರೇಕ್ ಹಾಕಿ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ ಜಾನ್ವಿ ಕಪೂರ್ ಪಕ್ಕಾ ತೆಲುಗು ಹುಡುಗಿಯಂತೆ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಭಾರತದ ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ಚಿತ್ರೀಕರಣ ಬ್ರೇಕ್ ನೀಡಿ,ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ,

ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್ ನಟಿ ಜಾನ್ವಿ ಕಪೂರ್ ಟ್ರೆಡಿಷನಲ್ ಲುಕ್ ನೋಡಿ Read More »