September 2022

ಕ್ರೀಡಾಧಿಕಾರಿಯಾಗುವ ಅವಕಾಶ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು: ಅಕ್ಟೋಬರ್ 11 ರಂದು ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ನಡೆಯಲಿದ್ದು, ಯುವತಿಯರಿಗೆ ಒಂದು ದಿನ ಯುವ ಕ್ರೀಡಾಧಿಕಾರಿಯಾಗಲು ಅವಕಾಶ ಕಲ್ಪಿಸಲಾಗಿದೆ. 18 ರಿಂದ 23 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಒಂದು ದಿನ ಯುವ ಕ್ರೀಡಾಧಿಕಾರಿಯಾಗಿ ಅನುಭವ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡಾ ಇಲಾಖೆಯ ಎಡಿ, ಡಿಡಿ ಕಾರ್ಯವೈಖರಿ ಪರಿಚಯಿಸಲು ಅವಕಾಶ ನೀಡಲಾಗಿದೆ ಎಂದು ಕ್ರೀಡಾ ಸಚಿವ ಡಾ.ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಭಾರತದ ಬ್ರಿಟಿಷ್ ಹೈಕಮಿಷನ್ ದೇಶದ 18 […]

ಕ್ರೀಡಾಧಿಕಾರಿಯಾಗುವ ಅವಕಾಶ ಪಡೆಯಲು ಅರ್ಜಿ ಆಹ್ವಾನ Read More »

ಇಬ್ಬರು ಮಕ್ಕಳಿಗೆ ವಿಷ ಕುಡಿಸಿ, ತಾನು ಸೇವಿಸಿ ತಾಯಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ಇಬ್ಬರು ಮಕ್ಕಳಿಗೆ ವಿಷ ಕುಡಿಸಿ, ತಾನು ವಿಷ ಸೇವಿಸಿ ತಾಯಿ ಆತ್ಮಹತ್ಯೆ ಮಾಡಿದ ಘಟನೆಯೊಂದು ಹೊಸಪಾಳ್ಯ ಗ್ರಾಮದಲ್ಲಿ ನಡೆದಿದೆ. ರೈತ ಮುಖಂಡ ಲೋಕೇಶ್ ಅವರ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ತಮ್ಮ ಜಮೀನಿನಲ್ಲಿ ಮಕ್ಕಳಿಗೆ ವಿಷ ಉಣಿಸಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ರೂಪ(38) ಮಕ್ಕಳಾದ ಹರ್ಷಿತಾ(6), ಸ್ಪೂರ್ತಿ (4) ಸಾವನ್ನಪ್ಪಿದ್ದಾರೆ.

ಇಬ್ಬರು ಮಕ್ಕಳಿಗೆ ವಿಷ ಕುಡಿಸಿ, ತಾನು ಸೇವಿಸಿ ತಾಯಿ ಆತ್ಮಹತ್ಯೆ Read More »

ಸಾರ್ವಜನಿಕ ಗಣೇಶ ಮಂಟಪ ಕುಸಿದು ಬಿದ್ದು,ಹಲವರಿಗೆ ಗಾಯ

ಸಮಗ್ರ ನ್ಯೂಸ್ : ದರ್ಶನಕ್ಕೆ ಭಕ್ತರ ಭಾರ ತಾಳದೇ ಜಿಲ್ಲೆಯ ಸಾರ್ವಜನಿಕ ಗಣೇಶ ಮಂಟಪ ಕುಸಿದು ಬಿದ್ದು, ಹಲವರಿಗೆ ಗಾಯಗಳಾದ ಘಟನೆಯೊಂದು ಸಿಂದಗಿ ಪಟ್ಟಣದಲ್ಲಿ ಶನಿವಾರ ಸಂಭವಿಸಿದೆ. ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ವಿವೇಕಾನಂದ ವೃತ್ತದಲ್ಲಿ ಗೋಪುರ ಸಹಿತ ಸ್ವರ್ಣ ವರ್ಣದ ದೇವಾಲಯ ಮಾದರಿಯಲ್ಲಿ ಗಣೇಶೋತ್ಸವ ಮಂಟಪ ನಿರ್ಮಿಸಲಾಗಿತ್ತು. ಗಣೇಶ ಮಂಟಪ ಇದೇ ಕಾರಣಕ್ಕೆ ಜನಾಕರ್ಷಣೆಗೆ ಕಾರಣವಾಗಿತ್ತು. ಆಕರ್ಷಕ ಅಲಂಕೃತ ಮಂಟಪ ವೀಕ್ಷಿಸಲು ಶನಿವಾರ ಭಾರಿ ಸಂಖ್ಯೆಯಲ್ಲಿ ಜನ ಸಾಗರವೇ ಮಂಟಪಕ್ಕೆ ಆಗಮಿಸಿತ್ತು. ಇದರಿಂದ ಭಾರ ತಾಳಲಾರದೇ ದೇವಾಲಯ

ಸಾರ್ವಜನಿಕ ಗಣೇಶ ಮಂಟಪ ಕುಸಿದು ಬಿದ್ದು,ಹಲವರಿಗೆ ಗಾಯ Read More »

ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ| ಹವಾಮಾನ ಇಲಾಖೆಯಿಂದ ಮಾಹಿತಿ

ಸಮಗ್ರ ನ್ಯೂಸ್ : ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಬೆಂಗಳೂರಿನಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದರೂ ಇನ್ನೂ 1 ವಾರ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ, ಮಲೆನಾಡಿನಲ್ಲೂ ಸೆ. 9ರವರೆಗೆ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಕಳೆದೊಂದು ತಿಂಗಳಿನಿಂದ ವರುಣನ ಆರ್ಭಟ ಹೆಚ್ಚಾಗಿರುವುದರಿಂದ ಕಂಗೆಟ್ಟಿರುವ ಜನರಿಗೆ ಇದರಿಂದ ಇನ್ನಷ್ಟು ಆತಂಕ ಎದುರಾಗಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವೇಗವಾಗಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಮುಂದಿನ

ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ| ಹವಾಮಾನ ಇಲಾಖೆಯಿಂದ ಮಾಹಿತಿ Read More »

ಮಂಗಳೂರು: ಪೊಲೀಸ್ ಇಲಾಖೆಯ ಗೀತಾ ಇನ್ನಿಲ್ಲ

ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಯಲ್ಲಿ ಕಳೆದ 11 ವರ್ಷದಿಂದ ಕರ್ತವ್ಯದಲ್ಲಿದ್ದ ಗೀತಾ ಎಂಬ ಹೆಸರಿನ ಶ್ವಾನ ಶನಿವಾರ ಸಾವಿಗೀಡಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಲ್ಯಾಬ್ರಡಾರ್ ರಿಟ್ರೀವರ್ ಎಂಬ ತಳಿಯ ಈ ಶ್ವಾನವು 2011 ರಲ್ಲಿ ಮೇ 21ರಂದು ಜನಿಸಿದ್ದು, ಅದೇ ವರ್ಷದ ಆಗಸ್ಟ್ 19ರಂದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು.

ಮಂಗಳೂರು: ಪೊಲೀಸ್ ಇಲಾಖೆಯ ಗೀತಾ ಇನ್ನಿಲ್ಲ Read More »

ಆರ್ಥಿಕತೆಯಲ್ಲಿ ಅತಿ ದೊಡ್ಡ ಹೆಜ್ಜೆ ಇರಿಸಿದ ಇಂಡಿಯಾ| ವಿಶ್ವದ 5ನೇ ಸ್ಥಾನಕ್ಕೆ ಭಾರತದ ಆರ್ಥಿಕತೆ

ಸಮಗ್ರ ನ್ಯೂಸ್: ಯುನೈಟೆಡ್ ಕಿಂಗ್ಡಮ್ ಹಿಂದಿಕ್ಕಿದ ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರಹೊಮ್ಮಿದೆ. 2021ರ ಹಣಕಾಸು ವರ್ಷದ ಕೊನೆಯ ಮೂರು ತೈಮಾಸಿಕದ ಜಿಡಿಪಿ ಬೆಳವಣಿಗೆಯಿಂದಾಗಿ ಭಾರತ ಯುಕೆಯನ್ನು ಹಿಂದಿಕ್ಕಿ ಐದನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ದೇಶವಾಗಿ ಹೊರ ಹೊಮ್ಮಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ. ಈಗಾಗಲೇ ಕೋವಿಡ್ ನೀಡಿದ ಹೊಡೆತದಿಂದ ಪಾರಾಗಲು ಹೆಣಗಾಡುತ್ತಿರುವ ಇಂಗ್ಲೆಂಡ್ಗೆ ಈ ವರದಿ ಮತ್ತಷ್ಟು ಹೊಡೆತ ನೀಡಿದೆ. ಡಾಲರ್ ವಿನಿಮಯ ದರವನ್ನು ಲೆಕ್ಕ ಹಾಕಿದಾಗ ಭಾರತೀಯ ಆರ್ಥಿಕತೆಯ

ಆರ್ಥಿಕತೆಯಲ್ಲಿ ಅತಿ ದೊಡ್ಡ ಹೆಜ್ಜೆ ಇರಿಸಿದ ಇಂಡಿಯಾ| ವಿಶ್ವದ 5ನೇ ಸ್ಥಾನಕ್ಕೆ ಭಾರತದ ಆರ್ಥಿಕತೆ Read More »

ಮಂಗಳೂರು: ಹಿಂದೂ ಯುವಸೇನೆ ಕಾರ್ಯಕರ್ತ ಆತ್ಮಹತ್ಯೆ| ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಸಮಗ್ರ ನ್ಯೂಸ್: ಹಿಂದೂ ಯುವಸೇನೆಯಲ್ಲಿ ಸಕ್ರಿಯರಾಗಿದ್ದ ಹಿಂದೂ ಕಾರ್ಯಕರ್ತ ಮಂಗಳೂರಿನ‌ ಜಯಂತ್ ಎಸ್. ಕುಂಪಲ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಪಲದ ಕೃಷ್ಣನಗರ ಎರಡನೇ ಅಡ್ಡ ರಸ್ತೆಯ ಬಾಡಿಗೆ ನಿವಾಸದಲ್ಲಿ ಯಾರೂ ಇಲ್ಲದ ವೇಳೆ ಜಯಂತ್ (49) ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಯಂತ್ ಆತ್ಮಹತ್ಯೆಗೆ ಶರಣಾಗಿದ್ದು, ಮನೆಯ ಹಾಲ್ ನಲ್ಲಿ ಶಾಲ್ ನಲ್ಲಿ ಕತ್ತಿಗೆ ಬಿಗಿದು ಪ್ರಾಣ ಬಿಟ್ಟಿದ್ದಾರೆ. ಜಯಂತ್ ಅವರು ಸಕ್ರಿಯ ಈ ಹಿಂದೆ ಹಿಂದು ಸಂಘಟನೆ ಕಾರ್ಯಕರ್ತರಾಗಿದ್ದು ಹಣಕಾಸು

ಮಂಗಳೂರು: ಹಿಂದೂ ಯುವಸೇನೆ ಕಾರ್ಯಕರ್ತ ಆತ್ಮಹತ್ಯೆ| ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ Read More »

ತನ್ನ ಪತ್ನಿ ದಪ್ಪಗಾಗಿದ್ದಾಳೆ ಎಂದ ಪತಿ ಮಾಡಿದ್ದೇನು ಗೊತ್ತಾ?

ಸಮಗ್ರ ನ್ಯೂಸ್: ಮದುವೆಯಾದ ಬಳಿಕ ತನ್ನ ಪತ್ನಿ ದಪ್ಪಗಾಗಿದ್ದಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ತಲಾಕ್ ನೀಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ಬೆಳಕಿಗೆ ಬಂದಿದೆ. ಮೀರತ್ ನ ಮಹಮ್ಮದ್ ಸಲ್ಮಾನ್ ಎಂಬಾತ ಎಂಟು ವರ್ಷಗಳ ಹಿಂದೆ ನಜ್ಮಾರನ್ನು ವಿವಾಹವಾಗಿದ್ದು, ದಂಪತಿಗೆ ಏಳು ವರ್ಷದ ಮಗ ಕೂಡ ಇದ್ದಾನೆ. ಮದುವೆ ನಂತರ ಪತ್ನಿ ದಪ್ಪಗಾಗಿದ್ದರು ಎನ್ನಲಾಗಿದೆ. ಹೀಗಾಗಿ ಪದೇಪದೇ ಆಕೆಯನ್ನು ಮೂದಲಿಸುತ್ತಿದ್ದ ಮೊಹಮ್ಮದ್ ಸಲ್ಮಾನ್, ಇನ್ನಿಲ್ಲದಂತೆ ಕಿರುಕುಳ ನೀಡಿದ್ದಲ್ಲದೆ ಕಳೆದ ತಿಂಗಳು ಆಕೆಯನ್ನು ಮನೆಯಿಂದ ಹೊರ ಹಾಕಿದ್ದ

ತನ್ನ ಪತ್ನಿ ದಪ್ಪಗಾಗಿದ್ದಾಳೆ ಎಂದ ಪತಿ ಮಾಡಿದ್ದೇನು ಗೊತ್ತಾ? Read More »

ರಾಕೆಟ್‌ನಲ್ಲಿ ಇಂಧನ ಸೋರಿಕೆ| ಎರಡು ಗಂಟೆ ತಡವಾಗಿ ಉಡಾವಣೆ

ಕೇಪ್‌ ಕ್ಯಾನವೆರಲ್‌: ಚಂದಿರನ ಅಂಗಳಕ್ಕೆ ಮನುಷ್ಯನನ್ನು ಕಳುಹಿಸಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (NASA) ಮಹತ್ವಾಕಾಂಕ್ಷೆ ಯೋಜನೆಗೆ ಶನಿವಾರ ಮತ್ತೊಮ್ಮೆ ಅಡ್ಡಿ ಎದುರಾಯಿತು. ಉಡಾವಣೆಗೆ ಸಜ್ಜಾಗಿದ್ದ 322 ಅಡಿ ಉದ್ದದ ರಾಕೆಟ್‌ನಲ್ಲಿ ಇಂಧನ ಸೋರಿಕೆಯಾಗುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಇಂಧನ ಸೋರಿಕೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ನಾಸಾ ತಿಳಿಸಿದೆ. ಎಂಜಿನಿಯರ್‌ಗಳು ದೋಷವನ್ನು ಸರಿಪಡಿಸಿದ ನಂತರ, ಎರಡು ಗಂಟೆ ತಡವಾಗಿ ರಾಕೆಟ್‌ ಅನ್ನು ಉಡಾವಣೆ ಮಾಡಲಾಯಿತು.

ರಾಕೆಟ್‌ನಲ್ಲಿ ಇಂಧನ ಸೋರಿಕೆ| ಎರಡು ಗಂಟೆ ತಡವಾಗಿ ಉಡಾವಣೆ Read More »

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಗ್ರ ನ್ಯೂಸ್: ಕಳೆದ ವಾರ ನಾವೆಲ್ಲ ಗೌರಿಗಣೇಶ ಹಬ್ಬ ಆಚರಿಸಿದ್ದೇವೆ. ಆದ್ದರಿಂದ ಎಲ್ಲರ ಮೇಲೆ ದಯಾಮಯ ಗಣೇಶನ ಆಶೀರ್ವಾದ ಇದ್ದೇ ಇರುತ್ತದೆ. ಹಾಗಾದರೆ ಈ ವಾರ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಲಾಭ? ಉದ್ಯೋಗ, ಆರೋಗ್ಯ, ಆರ್ಥಿಕ ಪರಿಸ್ಥಿತಿ, ದಾಂಪತ್ಯ ಜೀವನ ಹೇಗಿರಲಿದೆ? ದೋಷ ಪರಿಹಾರಕ್ಕೆ ಏನು ಮಾಡಬೇಕು? ಈ ವಾರ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಬಗ್ಗೆ ಇಲ್ಲಿದೆ ಮಾಹಿತಿ. ಮೇಷ ರಾಶಿ:ಈ ರಾಶಿಯವರಿಗೆ ಅನಗತ್ಯ ಸುತ್ತಾಟದಿಂದ ದೇಹಾಲಸ್ಯವಾಗಬಹುದು. ಕೆಲವರಿಗೆ ಉದ್ಯೋಗ

ದ್ವಾದಶ ರಾಶಿಗಳ ವಾರ ಭವಿಷ್ಯ Read More »