September 2022

ಮಂಗಳೂರು: ಪಾಲಿಕೆಯ ಹಲವು ಸೇವೆ ಆ್ಯಪ್‌ನಲ್ಲಿ ಲಭ್ಯ!/“ಒನ್‌ ಟಚ್‌ ಮಂಗಳೂರು’ ಆ್ಯಪ್‌ನಲ್ಲಿರುವ ಮಾಹಿತಿ ತಿಳಿದುಕೊಳ್ಳಿ

ಸಮಗ್ರ ನ್ಯೂಸ್: ಮಂಗಳೂರು ಪಾಲಿಕೆ ಈಗಾಗಲೇ ಡಿಜಿಟಲ್‌ನತ್ತ ಮುಖ ಮಾಡಿದ್ದು, ಕೆಲವು ಸೇವೆಗಳನ್ನು ಈಗಾಗಲೇ ಆನ್‌ಲೈನ್‌ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಇದೀಗ ಆ್ಯಪ್‌ ಮುಖೇನವೂ ವಿವಿಧ ಸೇವೆಗಳನ್ನು ಪರಿಚಯಿಸಲು ಮಹಾನಗರ ಪಾಲಿಕೆ ಮುಂದಾಗಿದೆ. ಸ್ಮಾರ್ಟ್‌ಸಿಟಿಯಿಂದ ಈಗಾಗಲೇ “ಒನ್‌ ಟಚ್‌ ಮಂಗಳೂರು’ ಎಂಬ ಪ್ರತ್ಯೇಕ ಆ್ಯಪ್‌ ರೂಪುಗೊಂಡಿದ್ದು, ಅದರಲ್ಲಿ ಮುಂದಿನ ಕೆಲವು ದಿನಗಳಲ್ಲಿ ಜನನ-ಮರಣ ಪ್ರಮಾಣಪತ್ರ, ಪಾಲಿಕೆ ವ್ಯಾಪ್ತಿ ಜಾಹೀರಾತು ಪರವಾನಿಗೆ, ಆಸ್ತಿ ತೆರಿಗೆ ಹಣ ಪಾವತಿ, ಉದ್ದಿಮೆ ಪರವಾನಿಗೆ ನವೀಕರಣ ಸಹಿತ ವಿವಿಧ ಸೇವೆಗಳನ್ನು ಆ್ಯಪ್‌ನಲ್ಲಿ ತರಲು ಯೋಜನೆ […]

ಮಂಗಳೂರು: ಪಾಲಿಕೆಯ ಹಲವು ಸೇವೆ ಆ್ಯಪ್‌ನಲ್ಲಿ ಲಭ್ಯ!/“ಒನ್‌ ಟಚ್‌ ಮಂಗಳೂರು’ ಆ್ಯಪ್‌ನಲ್ಲಿರುವ ಮಾಹಿತಿ ತಿಳಿದುಕೊಳ್ಳಿ Read More »

ಮಾರಕಾಸ್ತ್ರಗಳಿಂದ ಯುವಕನ ಕೊಚ್ಚಿ‌ ಕೊಲೆಗೈದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿರುವ ಘಟನೆಯೊಂದು ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ವಿನಾಯಕ ಸೋಮಶೇಖರ ಹೋರಕೇರಿ (28) ಎಂದು ಗುರುತಿಸಲಾಗಿದೆ. ಯುವಕ ಬೈಕ್‌ನಲ್ಲಿ ಗ್ರಾಮಕ್ಕೆ ಮರಳುವಾಗ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಮನಬಂದಂತೆ ಹಲ್ಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶನಿವಾರವಷ್ಟೇ ಯುವಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಯಮಕನಮರಡಿ

ಮಾರಕಾಸ್ತ್ರಗಳಿಂದ ಯುವಕನ ಕೊಚ್ಚಿ‌ ಕೊಲೆಗೈದ ದುಷ್ಕರ್ಮಿಗಳು Read More »

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ವೆಂಕಣ್ಣ ಬೊಮ್ಮಯ್ಯ ನಿಧನ

ಸಮಗ್ರ ನ್ಯೂಸ್: ಅಂಕೋಲಾ ತಾಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ವೆಂಕಣ್ಣ ಬೊಮ್ಮಯ್ಯ ನಾಯಕ (102) ಅವರು ವಯೋಸಹಜ ಅನಾರೋಗ್ಯದಿಂದ ತಮ್ಮ ಸ್ವಗೃಹ ಸೂರ್ವೆಯಲ್ಲಿ ನಿಧನ ಹೊಂದಿದರು. ಕಳೆದ 2-3 ದಿನಗಳ ಹಿಂದೆ ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಕಾರವಾರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು, ವೆಂಟಿಲೇಟರ್ ಚಿಕಿತ್ಸೆ ನೀಡಿ ನಂತರ ಮನೆಗೆ ಕರೆದುಕೊಂಡು ಬರಲಾಗಿತ್ತು. ವೆಂಕಣ್ಣ ನಾಯಕ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ,

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ವೆಂಕಣ್ಣ ಬೊಮ್ಮಯ್ಯ ನಿಧನ Read More »

ಮನೆ ಗೋಡೆ ಕುಸಿದು ಬಿದ್ದು, ಗಂಭೀರ ಗಾಯಗೊಂಡು ಯುವಕ ಮೃತ್ಯು

ಸಮಗ್ರ ನ್ಯೂಸ್: ಭಾರಿ ಮಳೆ ಹಾಗು ಸಿಡಿಲು ಬಡಿದ ಪರಿಣಾಮ ಮಲಗಿದ್ದ ಯುವಕನ ಮೇಲೆ ಮನೆಯ ಗೋಡೆ ಕುಸಿದು ಬಿದ್ದು, ಗಂಭೀರ ಗಾಯಗೊಂಡ ಯುವಕ ಮೃತಪಟ್ಟ ಘಟನೆಯೊಂದು ಚಾಮರಾಜನಗರದ ದಡದಹಳ್ಳಿಯಲ್ಲಿ ರಾತ್ರಿ ನಡೆದಿದೆ. ಮೃತರನ್ನು ದಡದಹಳ್ಳಿ ನಿವಾಸಿ ಮೂರ್ತಿ (33) ಎಂದು ಗುರುತಿಸಲಾಗಿದೆ. ಮೂರ್ತಿ ಅವರು ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ಭಾರಿ ಮಳೆ ಹಾಗು ಸಿಡಿಲು ಬಡಿದ ಪರಿಣಾಮ ಮನೆಯ ಗೋಡೆ ಮೂರ್ತಿ ಅವರ ಮೈ ಮೇಲೆ ಬಿದ್ದಿದ್ದು, ಗಂಭೀರ ಗಾಯಗೊಂಡ ಅವರು ಮೃತಪಟ್ಟರು ಎಂದು

ಮನೆ ಗೋಡೆ ಕುಸಿದು ಬಿದ್ದು, ಗಂಭೀರ ಗಾಯಗೊಂಡು ಯುವಕ ಮೃತ್ಯು Read More »

ಪೋಲಿಸ್ ಕಸ್ಟಡಿಯಿಂದ ಇಂದು ಶ್ರೀಗಳು ಕೋರ್ಟ್ ಗೆ ಹಾಜರು

ಸಮಗ್ರ ನ್ಯೂಸ್ : ಪೋಕ್ಸೋ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ಮುರುಘಾಮಠದ ಶ್ರೀಗಳ ಪೊಲೀಸ್ ಕಸ್ಟಡಿ ಇಂದು ಕೊನೆಗೊಳ್ಳಲ್ಲಿದ್ದು, ಪೊಲೀಸರು ಇಂದು ಶ್ರೀಗಳನ್ನು ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಮುರುಘಾ ಶರಣರ ಪೊಲೀಸ್ ಕಸ್ಟಡಿ ಇಂದು ಬೆಳಗ್ಗೆ 11 ಗಂಟೆಗೆ ಅಂತ್ಯವಾಗಲಿದ್ದು, ತನಿಖಾಧಿಕಾರಿಗಳು ಶರಣರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗೆ ಮತ್ತೊಂದಿಷ್ಟು ಕಾಲಾವಕಾಶ ಬೇಕು ಅನಿಸಿದರೆ ಮತ್ತೆ ವಶಕ್ಕೆ ಪಡೆಯಲಿದ್ದಾರೆ. ಮುರುಘಾಶ್ರೀಗಳ ನಿರೀಕ್ಷಣಾ ಜಾಮೀನು ವಜಾ ಆಗಿರುವುದರಿಂದ ಸೋಮವಾರ ಮಠದ ವಕೀಲರು ರೆಗ್ಯೂಲರ್ ಬೇಲ್ ಗಾಗಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲಿದ್ದಾರೆ.

ಪೋಲಿಸ್ ಕಸ್ಟಡಿಯಿಂದ ಇಂದು ಶ್ರೀಗಳು ಕೋರ್ಟ್ ಗೆ ಹಾಜರು Read More »

ನಟನೆಯಿಂದ ದೂರ ಉಳಿತಾರಾ ನಯನತಾರ? ಇಲ್ಲಿದೆ ಉತ್ತರ

ಸಮಗ್ರ ನ್ಯೂಸ್: ಟಾಲಿವುಡ್ ನ ಸೂಪರ್ ಸ್ಟಾರ್ ನಟಿ ನಯನತಾರ ಮದುವೆ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ. ನಟಿ ನಯನತಾರಾ ಮದುವೆ ಬಳಿಕ ಸಿನಿಮಾದಲ್ಲಿ ಅಭಿನಯಿಸದಿರಲು ನಿರ್ಧಾರಿಸಿದ್ದಾರಂತೆ. ಹಾಗಂತ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಆಗಲ್ಲ. ಬದಲಿಗೆ ಒಂದು ದೊಡ್ಡ ಬ್ರೇಕ್ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದರಂತೆ. ಬ್ರೇಕ್ ಬಳಿಕ ಮತ್ತೆ ಕಮ್ ಬ್ಯಾಕ್‌ ಕೂಡ ಮಾಡಲಿದ್ದಾರೆ ನಯನತಾರಾ. ಬ್ರೇಕ್ ತೆಗೆದುಕೊಳ್ಳುವುದು ಮಾತ್ರ ಅಲ್ಲ. ನಯನತಾರಾ ಒಂದಷ್ಟು ಷರತ್ತುಗಳನ್ನು

ನಟನೆಯಿಂದ ದೂರ ಉಳಿತಾರಾ ನಯನತಾರ? ಇಲ್ಲಿದೆ ಉತ್ತರ Read More »

ಉಚಿತ ವಿದ್ಯುತ್ ಯೋಜನೆ ಕೈಬಿಟ್ಟಿಲ್ಲ, ಮಾರ್ಗಸೂಚಿ ಪರಿಷ್ಕರಿಸಿದ್ದೇವೆ – ಸಚಿವ ಸುನಿಲ್‌ಕುಮಾರ್

ಸಮಗ್ರ ನ್ಯೂಸ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್ ಕುಟುಂಬದವರಿಗೆ ಅಮೃತ ಜ್ಯೋತಿ ಯೋಜನೆಯಡಿ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ರದ್ದು ಮಾಡಲಾಗಿದೆ ಎನ್ನುವ ಚರ್ಚೆ ನಡೆದಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಇಂಧನ ಸಚಿವ ವಿ. ಸುನಿಲ್ ಕುಮಾರ್ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಿಪಿಎಲ್ ಕುಟುಂಬದವರಿಗೆ ಅಮೃತ ಜ್ಯೋತಿ ಯೋಜನೆಯಡಿ 75 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆ ಅನುಷ್ಠಾನದ ಆದೇಶ ರದ್ದಾಗಿಲ್ಲ. ಮಾರ್ಗಸೂಚಿಗಳನ್ನು

ಉಚಿತ ವಿದ್ಯುತ್ ಯೋಜನೆ ಕೈಬಿಟ್ಟಿಲ್ಲ, ಮಾರ್ಗಸೂಚಿ ಪರಿಷ್ಕರಿಸಿದ್ದೇವೆ – ಸಚಿವ ಸುನಿಲ್‌ಕುಮಾರ್ Read More »

ಸುಳ್ಯ: ಡಿ.ವಿ.ಎಸ್ ಸಿಎಂ ಆಗಿದ್ದಾಗ‌ ಪ್ರಸ್ತಾಪ ಮಾಡಿದ್ದ ಟೈರ್ ಉತ್ಪಾದನಾ ಕಾರ್ಖಾನೆ‌ಗೆ ದಶಕದ ಸಂಭ್ರಮ| ಹತ್ತು ವರ್ಷಗಳಲ್ಲಿ ಈ ಕಡತ ಯಾರಿಗೂ ಕಂಡಿಲ್ಲವೇ?

ಸಮಗ್ರ ನ್ಯೂಸ್: ಸುಮಾರು‌ 500 ಕೋಟಿ ರೂ.ಗಳಲ್ಲಿ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಸ್ಥಾಪಿಸಲು ಉದ್ದೇಶಿಸಿ‌ದ್ದ ರಬ್ಬರ್ ಟಯರ್ ತಯಾರಿಕಾ‌ ಕಾರ್ಖಾನೆಯ ಪ್ರಸ್ತಾವನೆಗೆ ಬರೋಬ್ಬರಿ ಒಂದು ದಶಕದ ಸಂಭ್ರಮ! ಸುಳ್ಯದ‌ ಮಣ್ಣಿನ ಮಗ ಡಿ.ವಿ ಸದಾನಂದ ಗೌಡರು 2012ರಲ್ಲಿ ಮುಖ್ಯಮಂತ್ರಿಯಾಗಿ ತನ್ನ ತವರೂರಿಗೆ ಭೇಟಿ ನೀಡಿದ್ದ ವೇಳೆ ನೀಡಿದ ಹೇಳಿಕೆ ಕೇವಲ ಹೇಳಿಕೆಯಾಗಿಯೇ ಉಳಿದಿದೆ. ಅಂದು ಸದಾನಂದ ಗೌಡರು ನೀಡಿದ್ದ ಹೇಳಿಕೆ ಸುಳ್ಯ ತಾಲೂಕಿನ ಯುವಜನತೆಗೆ ಬಾರೀ ನಿರೀಕ್ಷೆ ಹುಟ್ಟು ಹಾಕಿತ್ತು. ಹಲವು ಮಂದಿಗೆ ಉದ್ಯೋಗ

ಸುಳ್ಯ: ಡಿ.ವಿ.ಎಸ್ ಸಿಎಂ ಆಗಿದ್ದಾಗ‌ ಪ್ರಸ್ತಾಪ ಮಾಡಿದ್ದ ಟೈರ್ ಉತ್ಪಾದನಾ ಕಾರ್ಖಾನೆ‌ಗೆ ದಶಕದ ಸಂಭ್ರಮ| ಹತ್ತು ವರ್ಷಗಳಲ್ಲಿ ಈ ಕಡತ ಯಾರಿಗೂ ಕಂಡಿಲ್ಲವೇ? Read More »

ಅನೈತಿಕ ಅನುಮಾನಕ್ಕೆ ಕೊನೆ ಮೊಳೆ‌ ಹೊಡೆದ ಚಾಲಾಕಿ ಪತ್ನಿ| ಗಂಡನನ್ನೇ ಕೊಂದು ನಾಟಕವಾಡಿದಳು

ಸಮಗ್ರ ನ್ಯೂಸ್: ಅನೈತಿಕ ಸಂಬಂಧವಿದೆ ಎಂದು ಪದೇ ಪದೇ ಅನುಮಾನಿಸುತ್ತಿದ್ದ ಗಂಡನ ಕಥೆಯನ್ನು ಪತ್ನಿಯೇ ಮುಗಿಸಿದ್ದಾಳೆ. ಅಕ್ಕನ ಮಗನ ಸಹಾಯದಿಂದ ಬೆಂಗಳೂರಿನಲ್ಲಿ ಪತಿಯನ್ನು ಕೊಂದು ಶವವನ್ನು ಊರಿಗೆ ಕೊಂಡೊಯ್ದು ನಾಟಕವಾಡಿದ್ದ ಹೆಂಡತಿಯನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ. ಶಿಲ್ಪಾ ಬಂಧಿತ ಆರೋಪಿಯಾಗಿದ್ದು, ಮಹೇಶ್ ಕೊಲೆಯಾದ ದುರ್ದೈವಿ. ಮಂಡ್ಯ ಮೂಲದ ಮಹೇಶ್ ಮತ್ತು ಶಿಲ್ಪಾಗೆ 8 ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ಶಿಲ್ಪಾ ಬೆಂಗಳೂರಲ್ಲಿ ವಾಸವಿದ್ರೆ, ಕೆಲಸದ ನಿಮಿತ್ತ ಮಹೇಶ್ ಮಂಡ್ಯದಲ್ಲಿ

ಅನೈತಿಕ ಅನುಮಾನಕ್ಕೆ ಕೊನೆ ಮೊಳೆ‌ ಹೊಡೆದ ಚಾಲಾಕಿ ಪತ್ನಿ| ಗಂಡನನ್ನೇ ಕೊಂದು ನಾಟಕವಾಡಿದಳು Read More »

ಬೆಳ್ತಂಗಡಿ: ಆ ಮಹಿಳೆಯದ್ದು ಬರೀ ಸಾವಲ್ಲ, ಅದೊಂದು ಕೊಲೆ| ಪತಿಯೇ ಕೊಲೆ ಆರೋಪಿ

ಸಮಗ್ರ ನ್ಯೂಸ್: ಕೊಕ್ಕಡ ಗ್ರಾಮದ ಅಗರ್ತ ಎಂಬಲ್ಲಿ ನಡೆದ ಮಹಿಳೆಯೋರ್ವರ ಸಂಶಯಾಸ್ಪದ ಸಾವಿನ ಪ್ರಕರಣ ಕೊಲೆ ಎಂದು ಇದೀಗ ವೈದ್ಯಕೀಯ ವರದಿಗಳಿಂದ ದೃಢಪಟ್ಟಿದ್ದು, ಕೊಲೆ ಆರೋಪದಲ್ಲಿ ಮಹಿಳೆಯ ಪತಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಮೋಹಿನಿ(36) ಮೃತಪಟ್ಟವರಾಗಿದ್ದು, ಕೊಲೆ ಆರೋಪದಲ್ಲಿ ಆಕೆಯ ಪತಿ ಗಣೇಶ್‌(48)ನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಶನಿವಾರಸಂತೆ ನಿವಾಸಿಯಾಗಿರುವ ಗಣೇಶ್‌ ಸುಳ್ಯ ತಾಲೂಕು ಕೊಲ್ಲಮೊಗ್ರುವಿನ ಮೋಹಿನಿ ಅವರನ್ನು 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಬಳಿಕ ಪತಿ, ಪತ್ನಿ ಬೆಳ್ತಂಗಡಿ ತಾಲೂಕಿನ

ಬೆಳ್ತಂಗಡಿ: ಆ ಮಹಿಳೆಯದ್ದು ಬರೀ ಸಾವಲ್ಲ, ಅದೊಂದು ಕೊಲೆ| ಪತಿಯೇ ಕೊಲೆ ಆರೋಪಿ Read More »