September 2022

ಮುರುಘಾಶ್ರೀ ಗಳ ಪ್ರಕರಣದ 3 ನೇ ಅರೋಪಿ ಬಂಧನ! ಕೇಸ್ ಇನ್ನಷ್ಟು ಬಿಗಿ

ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಶ್ರೀಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು 3ನೇ ಆರೋಪಿ ಮಠದ ಮರಿಸ್ವಾಮಿ ಬಸವಾದಿತ್ಯರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರಿಂದ ಮರಿಸ್ವಾಮಿ ಬಸವಾದಿತ್ಯ ಬಂಧನಹೊಸಪೇಟೆಯಲ್ಲಿ ಆರೋಪಿ ಬಸವಾದಿತ್ಯರನ್ನ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.ಮುರುಘಾ ಮಠದ ಮರಿಸ್ವಾಮಿ ಬಸವಾದಿತ್ಯರನ್ನ ಪೊಲೀಸರು ಹೊಸಪೇಟೆಯಲ್ಲಿ ವಶಕ್ಕೆ ಪಡೆದಿದ್ದು, ಹೊಸಪೇಟೆಯಿಂದ ಚಿತ್ರದುರ್ಗಕ್ಕೆ ಕರೆತರಲಾಗುತ್ತಿದೆ. ಮುರುಘಾ ಶ್ರೀಗಳ ಬಂಧನವಾಗ್ತಿದ್ದಂತೆ ಆರೋಪಿ ಬಸವಾದಿತ್ಯ ಪರಾರಿಯಾಗಿ, ಭಕ್ತರ ಮನೆಯಲ್ಲಿ ಅಡಗಿ ಕುಳಿತಿದ್ದ. ಇದೀಗ […]

ಮುರುಘಾಶ್ರೀ ಗಳ ಪ್ರಕರಣದ 3 ನೇ ಅರೋಪಿ ಬಂಧನ! ಕೇಸ್ ಇನ್ನಷ್ಟು ಬಿಗಿ Read More »

ಮಂಗಳೂರು: ಮದುವೆಯಾದ ಹದಿನೈದು ದಿನದಲ್ಲಿ ನವವಿವಾಹಿತೆ ಆತ್ಮಹತ್ಯೆ

ಸಮಗ್ರ ನ್ಯೂಸ್: ಮದುವೆಯಾದ ಹದಿನೈದು ದಿನದಲ್ಲೇ ನವವಿವಾಹಿತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೈದ ಘಟನೆ ಮಂಗಳೂರಿನ ಕೊಣಾಜೆಯಲ್ಲಿ ನಡೆದಿದೆ. ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತುವಿನ ರಶ್ಮಿ ವಿಶ್ವಕರ್ಮ(24) ಎಂಬಾಕೆ ಆತ್ಮಹತ್ಯೆಗೈದ ಯುವತಿ. ಈಕೆ ಗಂಜಿಮಠ ಮೂಲದ ದುಬಾಯಿಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಎಂಬಾತನ ಜೊತೆ ಆರು ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿದ್ದು, ಕಳೆದ ಆಗಸ್ಡ್ 21 ರಂದು ವಿವಾಹ ನೆರವೇರಿತ್ತು. ಆದರೆ ಸೆ.3 ರಂದು ರಶ್ಮಿಯ ಅಕ್ಕನ ಮನೆಯಲ್ಲಿ ಔತನ ಕೂಟ ಏರ್ಪಡಿಸಲಾಗಿದ್ದು, ಅದೇ ದಿನ ರಶ್ಮಿ ಇಲಿಪಾಷಣ ಸೇವಿಸಿದ್ದಳು

ಮಂಗಳೂರು: ಮದುವೆಯಾದ ಹದಿನೈದು ದಿನದಲ್ಲಿ ನವವಿವಾಹಿತೆ ಆತ್ಮಹತ್ಯೆ Read More »

ಬ್ರಿಟನ್ ಪ್ರಧಾನಿಯಾಗಿ ಲಿಝ್ ಟ್ರೂಸ್ ಆಯ್ಕೆ| ರಿಷಿ ಸುನಕ್ ಗೆ ಸೋಲು

ಸಮಗ್ರ ನ್ಯೂಸ್: ಬ್ರಿಟನ್ ನ ಪ್ರಧಾನಿ ಹುದ್ದೆಗೆ ಮಾಜಿ ಸಚಿವರಾದ ರಿಷಿ ಸುನಾಕ್ ಮತ್ತು ಲಿಝ್ ಟ್ರೂಸ್ ಮಧ್ಯೆ ಕಳೆದ ಕೆಲ ದಿನಗಳಿಂದ ನಡೆದ ತುರುಸಿನ ಪೈಪೋಟಿ ಅಂತ್ಯಗೊಂಡಿದ್ದು, ಲಿಝ್ ಟ್ರೂಸ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಮೂಲದ ರಿಷಿ ಸುನಕ್ ಅವರಿಗೆ ಹಿನ್ನಡೆಯಾಗಿದೆ. ಬೋರಿಸ್ ಜಾನ್ಸನ್ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ದೇಶದಾದ್ಯಂತ ಸುಮಾರು 2 ಲಕ್ಷ ಕನ್ಸರ್ವೇಟಿವ್ ಪಕ್ಷದ ಸದಸ್ಯರು ಅಂಚೆಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು

ಬ್ರಿಟನ್ ಪ್ರಧಾನಿಯಾಗಿ ಲಿಝ್ ಟ್ರೂಸ್ ಆಯ್ಕೆ| ರಿಷಿ ಸುನಕ್ ಗೆ ಸೋಲು Read More »

ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ/ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲ್

ಶಿವಮೊಗ್ಗ: ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಅರ್ಕಾವತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಅವರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತಾ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ ಎಂದು ಮಾಜಿ ಸಚಿವ ಈಶ್ವರಪ್ಪ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲೊಡ್ಡಿದ್ದಾರೆ. ಬಿಜೆಪಿ ಜನೋತ್ಸವ ಅಲ್ಲ, ಭ್ರಷ್ಟೋತ್ಸವ ಎಂಬ ಸಿದ್ದರಾಮಯ್ಯ ಅವರ ಆರೋಪ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ಹೇಳಿಲಿ, ಇದು ಜನೋತ್ಸವ ಅಲ್ಲ ಭ್ರಷ್ಟೋತ್ಸವ ಅಂತಾ ಆಗ ನಾನು ಕೂಡಾ ಒಪ್ಪಿಕೊಳ್ಳುತ್ತೇನೆ.

ತಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅಂತ ಚಾಮುಂಡೇಶ್ವರಿ ಮೇಲೆ ಆಣೆ ಮಾಡಲಿ/ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲ್ Read More »

ಮಂಗಳೂರು: ಸಾಕು ನಾಯಿಗೆ ಸೀಮಂತ| ಸೀಮಂತದ ಪೋಟೊ, ವೀಡಿಯೋ ವ್ಯೆರಲ್

ಸಮಗ್ರ ನ್ಯೂಸ್: ಮಹಿಳೆಯರಿಗೆ ಸೀಮಂತ ಮಾಡುವುದು ಸಾಮಾನ್ಯ, ಆದರೆ ಇಲ್ಲೊಬ್ಬರು ಸಾಕು ನಾಯಿಗೆ ಸೀಮಂತದ ಮಾಡಿದ್ದು, ಸೀಮಂತದ ಪೋಟೊ, ವೀಡಿಯೋ ವ್ಯೆರಲ್ ಆಗಿವೆ. ಮಂಗಳೂರಿನ ಗುರುಪುರ ಕ್ಯೆಕಂಬದ ಮಂಜುಳ ಹಾಗೂ ಭಾಸ್ಕರ್ ಎಂಬುವವರ ಪುತ್ರಿ ಸುಶ್ಮಿತಾ ಸಾಲ್ಯಾನ್ ಎಂಬುವವರಿಗೆ ಸಾಕುಪ್ರಾಣಿ ಎಂದರೆ ತುಂಬಾ ಪ್ರೀತಿ, ತಮ್ಮ ಮನೆಯಲ್ಲಿ ಸಾಕಿದ್ದ, ಒಂದುವರೆ ವರುಷದ ಶಾಡೊ ಎಂಬ ಗರ್ಭಿನಿ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ ಅರಸಿನ ಹಚ್ಚಿ, ಆರತಿ ಬೆಳಗಿ ಸೀಮಂತ ಮಾಡಿದ್ದಾರೆ. ಶ್ವಾನಕ್ಕೆ ಅಚ್ಚುಮೆಚ್ಚಿನ ಹಣ್ಣು-ಹಂಪಲು,ಐಸ್

ಮಂಗಳೂರು: ಸಾಕು ನಾಯಿಗೆ ಸೀಮಂತ| ಸೀಮಂತದ ಪೋಟೊ, ವೀಡಿಯೋ ವ್ಯೆರಲ್ Read More »

ರೀಲ್ಸ್ ಗಾಗಿ ಪ್ರಾಣ ಕಳೆದುಕೊಂಡ ಯುವಕ/ರೈಲು ಗುದ್ದಿದದ ವಿಡಿಯೋ ವೈರಲ್

ಹೈದರಾಬಾದ್: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಲು ರೈಲ್ವೆ ಹಳಿ ಮೇಲೆ ವಿಡಿಯೋ ಶೂಟ್ ಮಾಡುತ್ತಿರುವ ಸಂದರ್ಭ ಯುವಕನಿಗೆ ರೈಲು ಡಿಕ್ಕಿ ಹೊಡೆದ ಘಟನೆ ತೆಲಂಗಾಣದ ಹನುಮಕೊಂಡ ಜಿಲ್ಲೆಯ ಕಾಜಿಪೇಟ್‍ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡ ಹುಡಗನನ್ನು ಅಕ್ಷಯ್ ರಾಜ್ (17) ಎಂದು ಗುರುತಿಸಲಾಗಿದೆ. ವೀಡಿಯೋದಲ್ಲಿ ರೈಲ್ವೆ ಹಳಿಯ ಬಳಿ ಹುಡುಗ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಬಂದ ರೈಲು ಆತನಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಹುಡುಗ ಒಂದು ಸುತ್ತು ತಿರುಗಿ ನೆಲದ ಮೇಲೆ

ರೀಲ್ಸ್ ಗಾಗಿ ಪ್ರಾಣ ಕಳೆದುಕೊಂಡ ಯುವಕ/ರೈಲು ಗುದ್ದಿದದ ವಿಡಿಯೋ ವೈರಲ್ Read More »

ಕೊಟ್ಟಿಗೆಹಾರ: ವಾರದಲ್ಲಿ 30ಕ್ಕೂ ಹೆಚ್ಚು ಹಸುಗಳು ಅಪಘಾತಕ್ಕೆ ಬಲಿ

ಸಮಗ್ರ ನ್ಯೂಸ್: ಒಂದೇ ವಾರದಲ್ಲಿ 30ಕ್ಕೂ ಹೆಚ್ಚು ಹಸುಗಳು ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮೂಡಿಗೆರೆ-ಕೊಟ್ಟಿಗೆಹಾರ ಮಾರ್ಗದಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಬಳಿ ಸೆ.05ರಂದು ಕೂಡ ಅಪಘಾತದಿಂದ ಎರಡು ಜಾನುವಾರುಗಳು ಸಾವನ್ನಪ್ಪಿವೆ. ಮೂಡಿಗೆರೆಯಲ್ಲಿ ಹಾದುಹೋಗುವ ವಿಲ್ಲುಪುರಂ-ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅಪಘಾತದಿಂದ ಒಂದು-ಎರಡು ಜಾನುವಾರುಗಳು ಸಾವನ್ನಪ್ಪುತ್ತಿವೆ. ಕೈಮರದಿಂದ ಕೊಟ್ಟಿಗೆಹಾರದವರೆಗೆ ಹಾದುಹೋಗುವ ಹತ್ತಾರು ಹಳ್ಳಿಗಳಲ್ಲಿ ರಸ್ತೆ ಮಧ್ಯೆ ನಿಲ್ಲುವ ಅಥವ ರಸ್ತೆ ಬದಿ ಮೇಯುತ್ತಿದ್ದ ಹಸುಗಳು ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿವೆ. ಹಸುಗಳು ರಸ್ತೆ ಮಧ್ಯೆ

ಕೊಟ್ಟಿಗೆಹಾರ: ವಾರದಲ್ಲಿ 30ಕ್ಕೂ ಹೆಚ್ಚು ಹಸುಗಳು ಅಪಘಾತಕ್ಕೆ ಬಲಿ Read More »

ಮುರುಘಾ ಸ್ವಾಮೀಜಿಯ ಲೈಂಗಿಕ ದೌರ್ಜನ್ಯ ಪ್ರಕರಣ| ಸೆ.14ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಸಮಗ್ರ ನ್ಯೂಸ್: ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಬಂಧನವಾಗಿರುವ ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಶರಣರನ್ನು ಸೆ. 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶ್ರೀಗಳ ಪೊಲೀಸ್ ಕಸ್ಟಡಿ ಅವಧಿ ಸೋಮವಾರ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಅವರನ್ನು ಚಿತ್ರದುರ್ಗದ 2ನೇ ಅಪರ ಸತ್ರ ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು. ಬಳಿಕ ಶ್ರೀಗಳಿಗೆ ಸೆ.14 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ನ್ಯಾಯಾಧೀಶೆ ಕೋಮಲಾ ಅವರು ಆದೇಶಿಸಿದರು. ಕೋರ್ಟಿಗೆ ಹಾಜರು ಪಡಿಸುವ ಮುನ್ನ ಜಿಲ್ಲಾಸ್ಪತ್ರೆಗೆ ಕರೆದೊಯ್ದು

ಮುರುಘಾ ಸ್ವಾಮೀಜಿಯ ಲೈಂಗಿಕ ದೌರ್ಜನ್ಯ ಪ್ರಕರಣ| ಸೆ.14ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ Read More »

ಮುರುಘಾ ಮಠದ ಶ್ರೀ ಕುರಿತ ಮಹಿಳೆಯರ ನಡುವಿನ ಆಡಿಯೋ ವೈರಲ್| ಆತ್ಮಹತ್ಯೆ‌ ಮಾಡಿಕೊಂಡ ಮಡಿವಾಳೇಶ್ವರ ಸ್ವಾಮೀಜಿ

ಸಮಗ್ರ ನ್ಯೂಸ್: ಮಹಿಳೆಯೊಬ್ಬರ ಜೊತೆ ಮಾತನಾಡಿದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ನೊಂದ ಬೈಲಹೊಂಗಲ ತಾಲೂಕಿನ ನೆಗಿನಹಾಳದ ಗುರು ಮಡಿವಾಳೇಶ್ವರ ಮಠದ ಸ್ವಾಮೀಜಿ ಶಂಕಾಸ್ಪದವಾಗಿ ಸಾವಿಗೆ ಶರಣಾಗಿದ್ದಾರೆ. ಮುರುಘಾ ಮಠದ ಸ್ವಾಮೀಜಿಗಳ ಮೇಲೆ ಇರುವ ಆರೋಪದ ಬೆನ್ನಲ್ಲೇ ಇಬ್ಬರು ಮಹಿಳೆಯರು ಮಾತನಾಡಿರುವ ಆಡಿಯೋ ರಿಲೀಸ್ ಆಗಿರುವುದೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಮುರಘಾ ಶ್ರೀಗಳ ಲೈಂಗಿಕ ಪ್ರಕರಣ ಕುರಿತು ಇಬ್ಬರು ಮಹಿಳೆಯರು ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿದ್ದು, ಅದರ ಬೆನ್ನಲ್ಲೇ ನೇಗಿನಹಾಳದ ಬಸವಸಿದ್ದಲಿಂಗ ಸ್ವಾಮೀಜಿ

ಮುರುಘಾ ಮಠದ ಶ್ರೀ ಕುರಿತ ಮಹಿಳೆಯರ ನಡುವಿನ ಆಡಿಯೋ ವೈರಲ್| ಆತ್ಮಹತ್ಯೆ‌ ಮಾಡಿಕೊಂಡ ಮಡಿವಾಳೇಶ್ವರ ಸ್ವಾಮೀಜಿ Read More »

ಬಂಟ್ವಾಳ; ತಡರಾತ್ರಿ ಮನೆಗೆ ನುಗ್ಗಿ ನಾಯಿಯನ್ನು ಹೊತ್ತೋಯ್ದ ಚಿರತೆ

ಸಮಗ್ರ ನ್ಯೂಸ್: ಮಧ್ಯರಾತ್ರಿ ಚಿರತೆಯೊಂದು ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಿ ಹೊತ್ತುಕೊಂಡು ಹೋಗಿರುವ ಘಟನೆಯೊಂದು ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದಲ್ಲಿ ನಡೆದಿದೆ. ಕಲ್ಮಲೆ ನಿವಾಸಿ ನಾರಾಯಣ ರೈ ಎಂಬವರ ಮನೆಗೆ ಚಿರತೆ ನುಗ್ಗಿ, ಮನೆಯಲ್ಲಿ ಸಾಕಿದ್ದ ನಾಯಿಯನ್ನು ಬೇಟೆಯಾಡಿದೆ. ಇದೆ ವೇಳೆ ಅಲ್ಲೆ ಇದ್ದ ಮೊತ್ತೊಂದು ನಾಯಿ ರಕ್ಷಣೆಗೆ ನುಗ್ಗಿದ್ದ, ಈ ಚಿರತೆ ನಾಯಿಯನ್ನು ಗಾಯಗೊಳಿಸಿದೆ. ಈ ವೇಳೆ ನಾಯಿಗಳು ಬೊಗಳುತ್ತಿದ್ದಂತೆ ಮನೆಮಂದಿ ಎದ್ದು ಹೊರ ಬಂದು ಕಿರುಚಾಡಿದ್ದಾರೆ. ಗಾಬರಿಗೊಂಡ ಚಿರತೆ ನಾಯಿಯನ್ನು ಹೊತ್ತುಕೊಂಡು ಹೋಗಿದೆ. ಗ್ರಾಮದ ಸುತ್ತ

ಬಂಟ್ವಾಳ; ತಡರಾತ್ರಿ ಮನೆಗೆ ನುಗ್ಗಿ ನಾಯಿಯನ್ನು ಹೊತ್ತೋಯ್ದ ಚಿರತೆ Read More »