September 2022

ಮಂಗಳೂರಿನ‌ ಬಿಇಒ ಕಚೇರಿ ಅಧಿಕಾರಿ ಮಡಿಕೇರಿ ಲಾಡ್ಜ್ ನಲ್ಲಿ ನೇಣಿಗೆ ಶರಣು

ಮಂಗಳೂರು : ಇಲ್ಲಿನ ಅಧಿಕಾರಿ ಮಡಿಕೇರಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಲಾಡ್ಜ್‌ ಒಂದರಲ್ಲಿ ತಂಗಿದ್ದ ಶಿವಾನಂದ ಎಂಬ ಸರ್ಕಾರಿ ಅಧಿಕಾರಿ ಲಾಡ್ಜ್‌ ನ ಕೊಠಡಿಯ ಫ್ಯಾನ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಆತ್ಮಹತ್ಯೆ ಮಾಡಿಕೊಂಡ ಶಿವಾನಂದ ಅವರು ಮಂಗಳೂರು ದಕ್ಷಿಣ ವಿಭಾಗದ ಬಿಇಒ ಕಚೇರಿ ಅಧಿಕಾರಿಯಾಗಿದ್ದು, ಶಿವನಾಂದ ಅವರು ಬಜ್ಪೆ ಮೂಲದವರಾಗಿದ್ದು, ಮಡಿಕೇರಿಗೆ ಯಾಕೆ ಬಂದಿದ್ದರು ಎನ್ನುವ ಯಾವುದೇ ವಿಚಾರ ಇನ್ನೂ ತಿಳಿದು ಬಂದಿಲ್ಲ. ಮಡಿಕೇರಿ ನಗರ ಠಾಣೆ ಪೊಲೀಸರು ಈ ಬಗ್ಗೆ […]

ಮಂಗಳೂರಿನ‌ ಬಿಇಒ ಕಚೇರಿ ಅಧಿಕಾರಿ ಮಡಿಕೇರಿ ಲಾಡ್ಜ್ ನಲ್ಲಿ ನೇಣಿಗೆ ಶರಣು Read More »

ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್ ಡಿಕ್ಕಿ; ಸ್ಥಳದಲ್ಲೇ ಮಹಿಳೆ ಮೃತ್ಯು

ಸಮಗ್ರ ನ್ಯೂಸ್ : ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅಂಬಾಗಿಲು ಅಮೃತ ಗಾರ್ಡನ್ ಸಭಾಂಗಣದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬುಧವಾರ ಮಧ್ಯಾಹ್ನ ನಡೆದಿದೆ. ಹೆಬ್ರಿ ಮೂರಕೈ ನಿವಾಸಿ ವಸಂತಿ ಶೆಟ್ಟಿ(65) ಮೃತ ದುರ್ದೈವಿಯಾಗಿದ್ದಾರೆ. ಕುಂದಾಪುರದಿಂದ ಉಡುಪಿ ಕಡೆಗೆ ಬರುತ್ತಿದ್ದ ಬಸ್, ರಸ್ತೆ ದಾಟುತ್ತಿದ್ದ ವಸಂತಿ ಶೆಟ್ಟಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ

ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್ ಡಿಕ್ಕಿ; ಸ್ಥಳದಲ್ಲೇ ಮಹಿಳೆ ಮೃತ್ಯು Read More »

ಮಂಡ್ಯದ ಮಾಜಿ ಶಾಸಕ ಕೆ.ಕೆಂಪೇಗೌಡ ನಿಧನ

ಮಂಡ್ಯ: ಪಾಂಡವಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೆ.ಕೆಂಪೇಗೌಡ(96) ಅವರು ಬುಧವಾರ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬುಧವಾರ ಸಾವನ್ನಪ್ಪಿದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ 3 ರಿಂದ 4 ಗಂಟೆಯೊಳಗೆ ಸ್ವಗ್ರಾಮ ಪಾಂಡವಪುರ ತಾಲೂಕು ಚಿನಕುರಳಿಯಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ನಾಲ್ವರು ಪುತ್ರರು, ಐದು ಮಂದಿ ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಕೆಂಪೇಗೌಡ ಅವರು ಮೂರು ಬಾರಿ ಶಾಸಕರಾಗಿ ಜನಮನ್ನಣೆ ಗಳಿಸಿದ್ದರು. ತಾಲೂಕು ಬೋರ್ಡ್ ಸದಸ್ಯರಾಗಿಯೂ ಸೇವೆ

ಮಂಡ್ಯದ ಮಾಜಿ ಶಾಸಕ ಕೆ.ಕೆಂಪೇಗೌಡ ನಿಧನ Read More »

ಹಾಸಿಗೆ ಹಿಡಿದ ಹಿರಿಯ ನಟಿ ಲೀಲಾವತಿ; ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು

ಬೆಂಗಳೂರು : ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಹೀಗಾಗಿ ಅವರ ನಿವಾಸಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಭೇಟಿ ಮಾಡಿ ನೀಡಿ, ಆರೋಗ್ಯ ವಿಚಾರಿಸಿದರು. ಲೀಲಾವತಿ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವಂತ ಕನ್ನಡದ ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದಾರೆ. ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಯನ್ನು ನಟಿ ಲೀಲಾವತಿಗೆ ನೀಡಲಾಗುತ್ತಿದೆ.

ಹಾಸಿಗೆ ಹಿಡಿದ ಹಿರಿಯ ನಟಿ ಲೀಲಾವತಿ; ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು Read More »

ರಾಜಧಾನಿಯಲ್ಲಿ ಮಳೆ‌ ಅವಾಂತರ| ಕಾಂಗ್ರೆಸ್ ನಿಂದ ಕಾಣೆಯಾದ ಸಚಿವ, ಸಂಸದ, ಶಾಸಕರ ಪಟ್ಟಿ ಬಿಡುಗಡೆ| ಟ್ವೀಟ್ ಮಾಡಿ ಆಡಳಿತದ ಕಾಲೆಳದ ಪ್ರತಿಪಕ್ಷ

ಸಮಗ್ರ ನ್ಯೂಸ್: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಹಾವಳಿಯಿಂದ ಅವಾಂತರ ಸೃಷ್ಟಿಯಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದಿಗ್ಧತೆಯಲ್ಲಿ ಅವರ ಕಷ್ಟಗಳನ್ನು ಆಲಿಸದೇ ಸಚಿವರು ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ. ಬಿಜೆಪಿ (BJP) ಆಡಳಿತದ ಕೆಲ ಸಚಿವರು, ಸಂಸದರ ಪಟ್ಟಿಯನ್ನು ಕಾಂಗ್ರೆಸ್‌ (Congress) ಬಿಡುಗಡೆ ಮಾಡಿದೆ. ಸಚಿವರು, ಸಂಸದರು ಕಾಣೆಯಾಗಿದ್ದಾರೆ ಎಂದು ಟ್ವೀಟ್‌ ಮಾಡಿ ಕಾಲೆಳೆದಿದೆ. ಟ್ವೀಟ್‌ನಲ್ಲೇನಿದೆ?ಸಚಿವ ಸುಧಾಕರ್‌ ಅವರು ಕೋವಿಡ್ ಕಾಲದಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ವಿಮ್ಮಿಂಗ್ ಮಾಡ್ತಿದ್ರು. ಈಗ ಬೆಂಗಳೂರು ಸ್ವಿಮ್ಮಿಂಗ್ ಪೂಲ್ ಆಗಿದೆ, ಜನತೆ

ರಾಜಧಾನಿಯಲ್ಲಿ ಮಳೆ‌ ಅವಾಂತರ| ಕಾಂಗ್ರೆಸ್ ನಿಂದ ಕಾಣೆಯಾದ ಸಚಿವ, ಸಂಸದ, ಶಾಸಕರ ಪಟ್ಟಿ ಬಿಡುಗಡೆ| ಟ್ವೀಟ್ ಮಾಡಿ ಆಡಳಿತದ ಕಾಲೆಳದ ಪ್ರತಿಪಕ್ಷ Read More »

ಬಟ್ಟೆ ಧರಿಸುವುದು‌ ಮೂಲಭೂತ ಹಕ್ಕಾದರೆ, ತೆಗೆಯುವುದೂ ಮೂಲಭೂತ ಹಕ್ಕಾಗುತ್ತದೆ | ಹಿಜಾಜ್ ವಿಚಾರಣೆ ವೇಳೆ ಸುಪ್ರೀಂ ಅಭಿಮತ

ಸಮಗ್ರ ನ್ಯೂಸ್: ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂವಿಧಾನದ 19ನೇ ವಿಧಿಯಡಿ ಉಡುಗೆ – ತೊಡುಗೆಯನ್ನು ಸಂಪೂರ್ಣ ಮೂಲಭೂತ ಹಕ್ಕು ಎಂದು ಹೇಳಿದರೆ, ಬಟ್ಟೆ ತೆಗೆಯುವುದು ಕೂಡ ಹಕ್ಕಾಗುವ ಅರ್ಹತೆ ಪಡೆಯುತ್ತದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಅರ್ಜಿದಾರರಿಗೆ ಹೇಳಿತು. ಹೀಗೆ ಹೇಳುವ ಮೂಲಕ ನ್ಯಾ. ಹೇಮಂತ್ ಗುಪ್ತಾ ನೇತೃತ್ವದ ಪೀಠ ಸಂವಿಧಾನದ 19ನೇ ವಿಧಿ ಪ್ರಕಾರ ಬಟ್ಟೆ ಧರಿಸುವ ಹಕ್ಕನ್ನು ತರ್ಕಬದ್ಧವಲ್ಲದ ವಿಪರೀತಗಳಿಗೆ ಕೊಂಡೊಯ್ಯಬಹುದೇ ಎಂದು ಅರ್ಜಿದಾರರ ಪರ

ಬಟ್ಟೆ ಧರಿಸುವುದು‌ ಮೂಲಭೂತ ಹಕ್ಕಾದರೆ, ತೆಗೆಯುವುದೂ ಮೂಲಭೂತ ಹಕ್ಕಾಗುತ್ತದೆ | ಹಿಜಾಜ್ ವಿಚಾರಣೆ ವೇಳೆ ಸುಪ್ರೀಂ ಅಭಿಮತ Read More »

ಈ ಜಿಲ್ಲೆಗಳಲ್ಲಿ ಭಾರೀ ಮಳೆ‌ ಸಾಧ್ಯತೆ; ಹವಾಮಾನ ಕೇಂದ್ರದಿಂದ ರೆಡ್ ಅಲರ್ಟ್

ಸಮಗ್ರ ನ್ಯೂಸ್: ರಾಜ್ಯದ ಆರು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಕೇಂದ್ರ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 11.56 ಸೆ.ಮೀ. ನಿಂದ 20.44 ಸೆ.ಮೀ.ವರೆಗೆ ಮಳೆಯಾಗುವ ನಿರೀಕ್ಷೆಯಿದ್ದು, ‘ಆರೆಂಜ್ ಅಲರ್ಟ್ ನೀಡಲಾಗಿದೆ. ಮಂಡ್ಯ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ, ಬಳ್ಳಾರಿ, ಗದಗ, ಕೊಪ್ಪಳ, ಉತ್ತರ ಕನ್ನಡ, ತುಮಕೂರು, ಬಾಗಲಕೋಟೆ

ಈ ಜಿಲ್ಲೆಗಳಲ್ಲಿ ಭಾರೀ ಮಳೆ‌ ಸಾಧ್ಯತೆ; ಹವಾಮಾನ ಕೇಂದ್ರದಿಂದ ರೆಡ್ ಅಲರ್ಟ್ Read More »

ನವೀಕೃತ ‘ಸೆಂಟ್ರಲ್ ವಿಸ್ತಾ’ ಇಂದು ಉದ್ಘಾಟನೆ| ಕರ್ತವ್ಯ ಪಥಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ನವೀಕೃತ ಸೆಂಟ್ರಲ್ ವಿಸ್ತಾದ ಕೆಲವು ಭಾಗ, ಕರ್ತವ್ಯ ಪಥ ಹಾಗೂ ಇಂಡಿಯಾ ಗೇಟ್ ಸನಿಹ ಪ್ರತಿಸ್ಠಾಪಿಸಲಾಗಿರುವ ನೇತಾಜಿ ಸಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು, ಇಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಲಿದ್ದಾರೆ. ನವೀಕೃತ ಸೆಂಟ್ರಲ್ ವಿಸ್ತಾ ಬಹುತೇಕ ಸಿದ್ಧವಾಗಿದ್ದು, ಮೋದಿ ವಿಜಯ್ ಚೌಕ್ ನಿಂದ ಇಂಡಿಯಾ ಗೇಟ್ ವರೆಗಿನ ಭಾಗವನ್ನು ಇಂದು ಉದ್ಘಾಟಿಸಲಿದ್ದಾರೆ. ಈ ನವೀಕೃತ ಸೆಂಟ್ರಲ್ ವಿಸ್ತಾದಲ್ಲಿ ರಾಜ್ಯವಾರು ಆಹಾರ ಮಳಿಗೆಗಳು, ಕೆಂಪು ಗ್ರಾನೈಟ್ ಪಾದಚಾರಿ ಮಾರ್ಗಗಳು, ಸುತ್ತಲೂ ಹಸಿರು ಉದ್ಯಾನವನಗಳು ಪ್ರಮುಖ

ನವೀಕೃತ ‘ಸೆಂಟ್ರಲ್ ವಿಸ್ತಾ’ ಇಂದು ಉದ್ಘಾಟನೆ| ಕರ್ತವ್ಯ ಪಥಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ Read More »

ಪ್ರವೀಣ್ ಹತ್ಯೆ ತಿರುಚಲು ಎನ್ಐಎಗೆ ಅಸೈನ್ ಮೆಂಟ್ ನೀಡಿದ ಸರ್ಕಾರ – ಪಿಎಫ್ಐ ಆಕ್ರೋಶ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಪಿ.ಎಫ್.ಐ ಪ್ರಮುಖರ ಮೇಲೆ ಎನ್.ಐ.ಎ ದಾಳಿಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಎನ್‌ಐಎ ದಾಳಿಯನ್ನು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಮಂಗಳೂರಿನ ಪಿಎಫ್‌ಐ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎ.ಕೆ ಅಶ್ರಫ್, ಪ್ರವೀಣ್ ನೆಟ್ಟಾರ್ ಕೊಲೆ ಕೇಸ್ ನೆಪದಲ್ಲಿ ಬಿಜೆಪಿ ‌ಎನ್‌ಐಎ ದುರ್ಬಳಕೆ ಮಾಡುತ್ತಿದೆ. ಪಿಎಫ್ ಐ ನಾಯಕರು ಎನ್ನುವ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಿವಮೊಗ್ಗದ ಹರ್ಷ ‌ಮತ್ತು

ಪ್ರವೀಣ್ ಹತ್ಯೆ ತಿರುಚಲು ಎನ್ಐಎಗೆ ಅಸೈನ್ ಮೆಂಟ್ ನೀಡಿದ ಸರ್ಕಾರ – ಪಿಎಫ್ಐ ಆಕ್ರೋಶ Read More »

ಎಸ್ಡಿಪಿಐ ನಾಯಕ ರಿಯಾಝ್ ಫರಂಗಿಪೇಟೆ ಮನೆ ಮೇಲೆ NIA ದಾಳಿ

ಸಮಗ್ರ ನ್ಯೂಸ್: ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರು‌ ಹತ್ಯೆಗೆ ಸಂಬಂಧಿಸಿದಂತೆ ಕರಾವಳಿಯಲ್ಲಿ ರಾಷ್ಟ್ರೀಯ ತನಿಖಾ ದಳ ತನ್ನ ಕಾರ್ಯವೈಖರಿಯನ್ನು ಚುರುಕುಗೊಳಿಸಿದ್ದು, ಗುರುವಾರ ಮುಂಜಾನೆ ಎಸ್ಡಿಪಿಐ ನಾಯಕ ರಿಯಾಝ್ ಫರಂಗಿಪೇಟೆ ಮನೆ ಮೇಲೆ ದಾಳಿ ನಡೆಸಿದೆ. ಪೊಲೀಸ್ ತನಿಖಾ ವರದಿ ಹೊರಬಿದ್ದ ಮೇಲೂ ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರಕಾರ NIA ಗೆ ವಹಿಸಿದೆ‌. ದ.ಕ ಜಿಲ್ಲೆಯಲ್ಲಿ NIA ತನಿಖೆ ಮುಂದುವರಿದಿದ್ದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ NIA ಸಪ್ಟೆಂಬರ್ 7 ರಂದು SDPI ಹಾಗೂ PFI

ಎಸ್ಡಿಪಿಐ ನಾಯಕ ರಿಯಾಝ್ ಫರಂಗಿಪೇಟೆ ಮನೆ ಮೇಲೆ NIA ದಾಳಿ Read More »