September 2022

ಐವರ್ನಾಡು; ನಾಳೆ ಜಿಲ್ಲಾ ಮಟ್ಟದ ಪ್ರಾಥಮಿಕ ಪ್ರೌಢಶಾಲಾ ಖೋ ಖೋ ಪಂದ್ಯಾಟ

ಸುಳ್ಯ : ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಸ.ಹಿ.ಪ್ರಾ.ಶಾಲೆ ಐವರ್ನಾಡು ದಿನಾಂಕ 9 ರಂದು ಸಮಯ 9.30 ಗೆ ಸರಿಯಾಗಿ ಐವರ್ನಾಡು ಜೂನಿಯರ್ ಕಾಲೇಜ್ ಮೈದಾನದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಜಿಲ್ಲಾಮಟ್ಟದ ಖೋ ಖೋ ಪಂದ್ಯಾಟ ನಡೆಯಲಿದೆ.

ಐವರ್ನಾಡು; ನಾಳೆ ಜಿಲ್ಲಾ ಮಟ್ಟದ ಪ್ರಾಥಮಿಕ ಪ್ರೌಢಶಾಲಾ ಖೋ ಖೋ ಪಂದ್ಯಾಟ Read More »

ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಹುಲಿದಾಳಿಗೆ ಹಸು ಬಲಿ

ಸಮಗ್ರ ನ್ಯೂಸ್: ಹುಲಿಯೊಂದು ಹಸುವನ್ನು ಕೊಂದು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದೇವರುಮನೆ ಹೋಗುವ ದಾರಿಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕು ವ್ಯಾಪ್ತಿಯ ಹಲವು ಕಡೆಗಳಲ್ಲಿ ವಾರಕ್ಕೊಂದರಂತೆ ರಾಸುಗಳು ಹುಲಿ ದಾಳಿಗೆ ಬಲಿಯಾಗುತ್ತಿವೆ. ಒಂದೆಡೆ ಕಾಡಾನೆಗಳ ಉಪಟಳದಿಂದ ರೈತ ಬೆಳೆದ ಬೆಳೆ ನಷ್ಟವಾದರೆ, ಇನ್ನೊಂದೆಡೆ ಕೃಷಿ ಕಾರ್ಯ ನಿರ್ವಹಿಸುವ ರೈತರಿಗೆ ತೀವ್ರ ಆತಂಕ ಸೃಷ್ಟಯಾಗಿದೆ. ಅರಣ್ಯ ರಕ್ಷಕರಾದ ಅಭಿಜಿತ್ ಮತ್ತು ಮಂಜುನಾಥ್ ಘಟನಾ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಕೊಟ್ಟಿಗೆಹಾರ: ಮಲೆನಾಡಿನಲ್ಲಿ ಹುಲಿದಾಳಿಗೆ ಹಸು ಬಲಿ Read More »

‘ರಾಷ್ಟ್ರೀಯ ಧರ್ಮಗ್ರಂಥ’ವಾಗಿ ‘ಶ್ರೀಮದ್ ಭಗವದ್ಗೀತೆ’! ಶೀಘ್ರದಲ್ಲೇ ಕೇಂದ್ರ ಸರ್ಕಾರ ಘೋಷಣೆ ಸಾಧ್ಯತೆ

ಸಮಗ್ರ ನ್ಯೂಸ್: ರಾಷ್ಟ್ರಗೀತೆ, ರಾಷ್ಟ್ರಗೀತೆ, ರಾಷ್ಟ್ರ ಧ್ವಜದಂತೆಯೇ ಶೀಘ್ರದಲ್ಲೇ ರಾಷ್ಟ್ರ ಗ್ರಂಥ ಬರಲಿದೆ. ಭಾರತ ಸರ್ಕಾರವು ಶ್ರೀಮದ್ ಭಗವದ್ಗೀತೆಯನ್ನ ರಾಷ್ಟ್ರೀಯ ಗ್ರಂಥವೆಂದು ಘೋಷಿಸಬಹುದು. ಇದನ್ನು ಜಾರಿಗೆ ತರುವ ಪ್ರಯತ್ನವನ್ನ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ. ಇದಕ್ಕಾಗಿ, ಭಾರತ ಸರ್ಕಾರವು ವಿವಿಧ ಸಚಿವಾಲಯಗಳಿಂದ ಅಭಿಪ್ರಾಯವನ್ನ ತೆಗೆದುಕೊಳ್ಳುತ್ತಿದೆ. ಗಮನಾರ್ಹವಾಗಿ, ಮಹಾರಾಷ್ಟ್ರದ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಅವರು ಕಳುಹಿಸಿದ ಪತ್ರದ ಆಧಾರದ ಮೇಲೆ ಸರ್ಕಾರವು ಈ ಅಭ್ಯಾಸ ನಡೆಸಿದೆ. ಮಹಾರಾಷ್ಟ್ರದ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಜುಲೈ 5ರಂದು ಕೇಂದ್ರ

‘ರಾಷ್ಟ್ರೀಯ ಧರ್ಮಗ್ರಂಥ’ವಾಗಿ ‘ಶ್ರೀಮದ್ ಭಗವದ್ಗೀತೆ’! ಶೀಘ್ರದಲ್ಲೇ ಕೇಂದ್ರ ಸರ್ಕಾರ ಘೋಷಣೆ ಸಾಧ್ಯತೆ Read More »

”ಬಿಜೆಪಿ ಸರ್ಕಾರ ತನಿಖಾ ತಂಡಗಳನ್ನು ದುರ್ಬಳಕೆ ಮಾಡಿಕೊಳ್ತಿದೆ” – ಎನ್ಐಎ ತನಿಖೆ ಬಳಿಕ ಎಸ್ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ರಿಯಾಕ್ಷನ್|

ಸಮಗ್ರ ನ್ಯೂಸ್: ಕೇಂದ್ರದ ಬಿಜೆಪಿ ಸರಕಾರವು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಈ ವ್ಯವಸ್ಥೆಯನ್ನು ನಿಲ್ಲಿಸಬೇಕು ಎಂದು ಎಸ್‌ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ಹೇಳಿದ್ದಾರೆ. ಸುಮಾರು 10 ಗಂಟೆಗಳ ಕಾಲ ಎನ್‌ಐಎ ತಂಡದ ತೀವ್ರ ವಿಚಾರಣೆಯ ಬಳಿಕ ಅವರು ಮಾಧ್ಯಮದ ಜೊತೆ ಮಾತನಾಡಿದರು. ಕೆಲವೊಂದು ಸುಳ್ಳು ಹಾಗೂ ಕಪೋಲ ಕಲ್ಪಿತ ಪ್ರಕರಣವನ್ನು ಮುಂದಿಟ್ಟುಕೊಂಡು, ಈ ರೀತಿಯಾಗಿ ದಾಳಿ ನಡೆಸಿ, ಸಂಘಟನೆ, ಅದರ ಕಾರ್ಯಕರ್ತರನ್ನು ವಿಚಲಿತರನ್ನಾಗಿ ಮಾಡುವ ತಂತ್ರವಾಗಿದೆ ಇದು ಎಂದು ಅವರು ಹೇಳಿದರು. ಪಕ್ಷವು ನನ್ನನ್ನು

”ಬಿಜೆಪಿ ಸರ್ಕಾರ ತನಿಖಾ ತಂಡಗಳನ್ನು ದುರ್ಬಳಕೆ ಮಾಡಿಕೊಳ್ತಿದೆ” – ಎನ್ಐಎ ತನಿಖೆ ಬಳಿಕ ಎಸ್ಡಿಪಿಐ ಮುಖಂಡ ರಿಯಾಝ್ ಫರಂಗಿಪೇಟೆ ರಿಯಾಕ್ಷನ್| Read More »

ರಾಜೇಂದ್ರ ಕುಮಾರ್ ಅವರಿಗೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪ್ರದಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ (ಎಸ್‍ಸಿಡಿಸಿಸಿ) ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಬುಧವಾರ ನಡೆದ ಅಪೆಕ್ಸ್ ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನ ಮಾಡಲಾಯಿತು. ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರಕುಮಾರ್ ಹಾಗೂ ನಿಕಟಪೂರ್ವ ಮುಖ್ಯಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಿ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಎಸ್‍ಸಿಡಿಸಿಸಿ ಬ್ಯಾಂಕ್ 2020-21ನೇ ಸಾಲಿನಲ್ಲಿ ಸರ್ವಾಂಗೀಣ ಪ್ರಗತಿಯೊಂದಿಗೆ ಗುರುತಿಸಿಕೊಂಡು ಲೆಕ್ಕ ಪರಿಶೋಧನೆಯಲ್ಲಿ ‘ಎ’ ವರ್ಗವನ್ನು ಪಡೆದಿರುವ ಕಾರಣ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಗೆ

ರಾಜೇಂದ್ರ ಕುಮಾರ್ ಅವರಿಗೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪ್ರದಾನ Read More »

ದಾಖಲೆಗಳಿಲ್ಲದೆ ಹಣ ಇಟ್ಟುಕೊಂಡಿದ್ದ ಮೂವರ ಬಂಧನ; 76 ಲಕ್ಷ ಹಣ, 3 ಮೊಬೈಲ್ ಸಿಸಿಬಿ ಪೋಲಿಸ್ ವಶ

ಬೆಂಗಳೂರು:  ದಾಖಲೆ ಇಲ್ಲದೆ ಹಣ ಇಟ್ಟುಕೊಂಡಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ 76 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ. ಇದು ಹವಾಲ ಹಣವಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ಈ ಬಗ್ಗೆ ಮುಂದಿನ ತನಿಖೆ ಕೈಗೊಂಡಿದ್ದಾರೆ. ಗುಜರಾತ್ ಮೂಲದ ರಾಬಿನ್ ಕುಮಾರ್(26), ರಾಜಸ್ಥಾನದ ಸುಂದರ್‍ಲಾಲ್(39) ಮತ್ತು ಬೆಂಗಳೂರಿನ ಸುದಾಮ ನಗರದ ಸಿಕೆಸಿ ಗಾರ್ಡನ್ ನಿವಾಸಿ ನೀರಜ್ ಮಿಶ್ರಾ(37) ಬಂಧಿತರು. ವಿಲ್ಸನ್‍ಗಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿ ನಗರದ ನಂಜಪ್ಪ ರಸ್ತೆ, ನಿರ್ಮಲ ಇಂಗ್ಲೀಷ್ ಶಾಲೆಯ ಹತ್ತಿರ ಮೂವರು ಹಣವನ್ನಿಟ್ಟುಕೊಂಡು ಒಬ್ಬರಿಗೊಬ್ಬರು ಸನ್ನೆ

ದಾಖಲೆಗಳಿಲ್ಲದೆ ಹಣ ಇಟ್ಟುಕೊಂಡಿದ್ದ ಮೂವರ ಬಂಧನ; 76 ಲಕ್ಷ ಹಣ, 3 ಮೊಬೈಲ್ ಸಿಸಿಬಿ ಪೋಲಿಸ್ ವಶ Read More »

25 ಲಕ್ಷ ರೂ. ಗೆ ಹುಲಿ ಮರಿಗಳ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ

ಸಮಗ್ರ ನ್ಯೂಸ್:  ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ವ್ಯಾಟ್ಸಾಪ್ ಮೂಲಕ 25 ಲಕ್ಷ ರೂ.ಗೆ ಹುಲಿ ಮರಿಗಳನ್ನು ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸರ್ಪನಮೇಡುವಿನ ವಾಸಿ ಪಥಿಬನ್ ಎಂದು ಗುರುತಿಸಲಾಗಿದ್ದು, ಈತ ತಿರುಪತಿಯಲ್ಲಿ ಕಾನೂನು ಅಧ್ಯಯನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಟ್ಸಪ್ ಮೂಲಕ ಬುಕ್ಕಿಂಗ್ ಮಾಡಿದ 10 ದಿನಗಳ ನಂತರ ಮರಿಗಳನ್ನು ವಿತರಿಸುವುದಾಗಿ ಭರವಸೆ ನೀಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ  ಅಬಕಾರಿಗಳ ತಂಡ ಆತನ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಹುಲಿಮರಿಗಳು ಇರುವುದು

25 ಲಕ್ಷ ರೂ. ಗೆ ಹುಲಿ ಮರಿಗಳ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧನ Read More »

ನೀಟ್ ಯುಜಿ ಪರೀಕ್ಷೆ ಯಲ್ಲಿ ಫೇಲ್; ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್ : ಬಹುನಿರೀಕ್ಷಿತ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್​) ಫಲಿತಾಂಶ ಪ್ರಕಟಗೊಂಡಿದ್ದು, 9.93 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಫೇಲ್​ ಆದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಘಟನೆಯೊಂದು ತಮಿಳುನಾಡಿನ ತಿರುವಳ್ಳೂರ್​​​​ನ ಇಂದಿರಾ ನಗರದಲ್ಲಿ ನಡೆದಿದೆ. 19 ವರ್ಷದ ವಿದ್ಯಾರ್ಥಿನಿ ಫಲಿತಾಂಶದಿಂದ ನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಲಕ್ಷಣ ಸ್ವೇಧ ಎಂದು ಗುರುತಿಸಲಾಗಿದೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯಕೀಯ ಕಾಲೇಜಿ​​ಗೆ ರವಾನಿಸಲಾಗಿದೆ.

ನೀಟ್ ಯುಜಿ ಪರೀಕ್ಷೆ ಯಲ್ಲಿ ಫೇಲ್; ನೇಣು ಬಿಗಿದು ಆತ್ಮಹತ್ಯೆಗೆ ಶರಣು Read More »

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಾಲಿವುಡ್ ಖ್ಯಾತ ನಟಿ ರಿಚಾ ಚಡ್ಡಾ ಮತ್ತು ನಟ ಅಲಿ ಫಜಲ್

ಸಮಗ್ರ ನ್ಯೂಸ್:  ಬಾಲಿವುಡ್ ನ ಖ್ಯಾತ ನಟಿ ರಿಚಾ ಚಡ್ಡಾ ಹಾಗೂ ನಟ ಅಲಿ ಫಜಲ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಜೋಡಿಗಳ ವಿವಾಹಕ್ಕೆ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. 2020ರಲ್ಲಿ ರಿಚಾ ಚಡ್ಡಾ ಮತ್ತು ಅಲಿ ಫಜಲ್ ತಾವಿಬ್ಬರು ಮದುವೆ ಆಗುವುದಾಗಿ ಅಧಿಕೃತವಾಗಿ ಮಾಹಿತಿ ತಿಳಿಸಿದ್ದರು. ಆದರೆ ಕೊರೊನಾ ಕಾರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಸೂಕ್ತ ಸಮಯ ಬಂದಿದ್ದು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದೇ ಸೆಪ್ಟೆಂಬರ್ ಕೊನೆಯಲ್ಲಿ ರಿಚಾ ಹಾಗೂ ಅಲಿ ದಾಂಪತ್ಯ ಜೀವನಕ್ಕೆ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಾಲಿವುಡ್ ಖ್ಯಾತ ನಟಿ ರಿಚಾ ಚಡ್ಡಾ ಮತ್ತು ನಟ ಅಲಿ ಫಜಲ್ Read More »

ಇಂದು ಪ್ರೇರಣಾ ಅವರ ಅದ್ದೂರಿ ಸೀಮಂತ ಕಾರ್ಯಕ್ರಮ

ಬೆಂಗಳೂರು: ಧ್ರುವ ಸರ್ಜಾ ಹಾಗೂ ಪ್ರೇರಣಾ ಪೋಷಕರಾಗುತ್ತಿದ್ದಾರೆ. ಈ ವಿಚಾರವನ್ನು ಧ್ರುವ ಸರ್ಜಾ ಇತ್ತಿಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಇಂದು ಸೀಮಂತ ಕಾರ್ಯ ಅದ್ದೂರಿಯಾಗಿ ನಡೆದಿದೆ. ಖಾಸಗಿ ಹೋಟೆಲ್ ನಲ್ಲಿ ನಡೆದ ಈ ಸೀಮಂತ ಕಾರ್ಯಕ್ರಮಕ್ಕೆ ಮನೆಯ ಹಿರಿಯರೆಲ್ಲಾ ಸೇರಿದ್ದರು. ಅರ್ಜುನ್ ಸರ್ಜಾ ಕುಟುಂಬವು ಆಗಮಿಸಿತ್ತು. ಆದರೆ ಈ ವೇಳೆ ಚಿರುನನ್ನು ನೆನೆದು ಕೊಂಚ ಭಾವುಕರಾಗಿದ್ದಾರೆ. ಯಾಕೆಂದರೆ ತಮ್ಮನ ಖುಷಿಯಲ್ಲಿ ಅಣ್ಣ ಸಂಭ್ರಮ ಪಡುತ್ತಿದ್ದರು. ಅದರಲ್ಲೂ ಧ್ರುವ ತಂದೆಯಾಗುತ್ತಿರುವ ವಿಚಾರವೇ ಚಿರುಗೆ ಹಬ್ಬದಂತೆ ಆಗುತ್ತಿತ್ತು. ಈ

ಇಂದು ಪ್ರೇರಣಾ ಅವರ ಅದ್ದೂರಿ ಸೀಮಂತ ಕಾರ್ಯಕ್ರಮ Read More »