September 2022

ಬೆಳ್ಳಾರೆ: ಹಿಂದೂ ಕಾರ್ಯಕರ್ತನಿಗೆ ಫೋನ್ ನಲ್ಲಿ ಧಮ್ಕಿ| ಪ್ರವೀಣ್ ಕೊಲೆ ಆರೋಪಿ ಸಹೋದರ ಸಫ್ರೀದ್ ಅಂದರ್

ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಫೀಕ್ ಎಂಬಾತನ ಸಹೋದರನೊಬ್ಬ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ಳಾರೆ ನಿವಾಸಿ, ಇಬ್ರಾಹಿಂ ಎಂಬವರ ಪುತ್ರ ಸಫ್ರಿದ್‌ ಎಂದು ಗುರುತಿಸಲಾಗಿದೆ. ಏನಿದು ಘಟನೆ?ಹಿಂದೂ ಸಂಘಟನೆಯೊಂದರ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್‌ನ ಮ್ಯಾನೇಜರ್ ಪ್ರಶಾಂತ್ ರೈ ಅವರಿಗೆ ಕೊಲೆ ಆರೋಪಿ ಶಫೀಕ್ […]

ಬೆಳ್ಳಾರೆ: ಹಿಂದೂ ಕಾರ್ಯಕರ್ತನಿಗೆ ಫೋನ್ ನಲ್ಲಿ ಧಮ್ಕಿ| ಪ್ರವೀಣ್ ಕೊಲೆ ಆರೋಪಿ ಸಹೋದರ ಸಫ್ರೀದ್ ಅಂದರ್ Read More »

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರ ಚಿಕ್ಕಪ್ಪ ,ನಟ ಕೃಷ್ಣಂ ರಾಜು ನಿಧನ

ಸಮಗ್ರ ನ್ಯೂಸ್: ‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರ ಚಿಕ್ಕಪ್ಪ, ತೆಲುಗು ಚಿತ್ರರಂಗದ ಹಿರಿಯ ನಟ ಕೃಷ್ಣಂ ರಾಜು ಅವರು ಇಂದು (ಭಾನುವಾರ) ಮುಂಜಾನೆ ನಿಧನರಾಗಿದ್ದಾರೆ. ಕೃಷ್ಣಂ ರಾಜು ಅವರಿಗೆ 83 ವರ್ಷ ವಯಸ್ಸಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 3.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕೃಷ್ಣಂ ರಾಜು ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇಂದು ಸಂಜೆ ವೇಳೆಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಅವರ ಚಿಕ್ಕಪ್ಪ ,ನಟ ಕೃಷ್ಣಂ ರಾಜು ನಿಧನ Read More »

ಸುಳ್ಯ: ಇಲಿಜ್ವರಕ್ಕೆ ಯುವಕ ಬಲಿ

ಸಮಗ್ರ ನ್ಯೂಸ್: ಮಾರಕ ಇಲಿ ಜ್ವರಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಸುಳ್ಯ ನಗರದ ಹೊರವಲಯ ಜಯನಗರದಿಂದ ವರದಿಯಾಗಿದೆ. ನಿತ್ಯಾದರ್ ಸಮುದಾಯದ ಜಯನಗರ ರಿಚರ್ಡ್ ಕ್ರಾಸ್ತ ಮತ್ತು ಜುಲಿಯಾನ ಡಿಸೋಜ ಇವರ 2ನೇ ಮಗ ಆಕರ್ಷ್ ಎಲೋಸಿಯಸ್ ಕ್ರಾಸ್ತ(35) ಮೃತಪಟ್ಟ ಯುವಕ. ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಆಕರ್ಷ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಲ್ಲಿದ್ದ ಆಕರ್ಷ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಸುಳ್ಯ: ಇಲಿಜ್ವರಕ್ಕೆ ಯುವಕ ಬಲಿ Read More »

“ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ‌ ಥರ” | “ನಿಮಗೆ ಹೇಗ್ ಗೊತ್ತು?” ಎಂದ ನೆಟ್ಟಿಗರು

ಸಮಗ್ರ ನ್ಯೂಸ್: ಸೆಲೆಬ್ರಿಟಿಗಳು ನೀಡುವ ಹೇಳಿಕೆ ಕೆಲವೊಮ್ಮೆ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿ ಬಿಡುತ್ತದೆ. ಕೆಲವೊಂದು ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿದ ಉದಾಹರಣೆ ಕೂಡ ಇದೆ. ಆದರೆ, ಕೆಲವು ನಟಿಯರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ತಮಗೆ ಏನು ಹೇಳಬೇಕು ಅನಿಸುತ್ತದೆಯೋ ಅದನ್ನೇ ಹೇಳುತ್ತಾರೆ. ಈಗ ನಟಿ ರೆಜಿನಾ ಕ್ಯಾಸಂಡ್ರಾ (Regina Cassandra) ನೀಡಿದ ಹೇಳಿಕೆ ಚರ್ಚೆ ಹುಟ್ಟು ಹಾಕಿದೆ. ಪುರುಷರ ಲೈಂಗಿಕ ಸಾಮರ್ಥ್ಯದ ಬಗ್ಗೆ ಅವರು ಜೋಕ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ

“ಹುಡುಗರ ಲೈಂಗಿಕ ಸಾಮರ್ಥ್ಯ ಮ್ಯಾಗಿ‌ ಥರ” | “ನಿಮಗೆ ಹೇಗ್ ಗೊತ್ತು?” ಎಂದ ನೆಟ್ಟಿಗರು Read More »

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ ನಾಲ್ಕು ದಿನ ಮಳೆಯ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ,

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಜೀವನದಲ್ಲಿ ಪ್ರತಿಯೊಂದು ಏಳುಬೀಳುಗಳು ಆಯಾ ವ್ಯಕ್ತಿಯ ರಾಶಿ, ನಕ್ಷತ್ರಗಳಿಗೆ ಅನುಸಾರವಾಗಿ‌ ಇರುತ್ತವೆ. ನಿತ್ಯ ವಿದ್ಯಮಾನಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರಲು ರಾಶಿಗಳು ಹಾಗೂ‌ ಅವುಗಳ ಫಲಾಫಲಗಳು ಕಾರಣ ಎಂಬುದು ಜ್ಯೋತಿಷ್ಯ ನಂಬಿಕೆ. ಈ ಹಿನ್ನೆಲೆಯಲ್ಲಿ ದ್ವಾದಶ ರಾಶಿಗಳ ಗೋಚಾರಫಲ ಮತ್ತು ಪರಿಹಾರೋಪಾಯಗಳನ್ನು ನೀಡಲಾಗಿದೆ. ಮೇಷ ರಾಶಿ:ಕೆಲವರ ಕೌಟುಂಬಿಕ ವಿವಾದಗಳು ರಾಜಿ ಸಂಧಾನದ ಮೂಲಕ ಪರಿಹಾರವಾಗುತ್ತವೆ.ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂಭವವಿದೆ. ವ್ಯವಹಾರಗಳಲ್ಲಿ ನಿಮ್ಮ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಸರಿಯಾಗಿ ವ್ಯವಹರಿಸುವುದರಿಂದ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ

ದ್ವಾದಶ ರಾಶಿಗಳ ವಾರಭವಿಷ್ಯ Read More »

ಇದು 40% ಕಮಿಷನ್ ಸಮಾವೇಶ – ರಾಜ್ಯ ಸರ್ಕಾರಕ್ಕೆ ಕುಟುಕಿದ ಕಾಂಗ್ರೆಸ್

ಸಮಗ್ರ ನ್ಯೂಸ್: ಬಿಜೆಪಿಗರು 40% ಕಮಿಷನ್‌ ಲೂಟಿಯ ಹಣದಲ್ಲಿ ʼಕಮಿಷನ್‌ ಸಮಾವೇಶʼ ನಡೆಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್‌ ಕಮಲಪಾಳಯದ ವಿರುದ್ಧ ಗುಡುಗಿದೆ. ಈ ಕುರಿತು ಸರಣಿ ಟ್ಟೀಟ್‌ ಮಾಡಿರುವ ಕೆಪಿಸಿಸಿ, ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮಾವೇಶವಲ್ಲ “ಕಮಿಷನ್ ಸಮಾವೇಶ” 40% ಕಮಿಷನ್ ಲೂಟಿಯ ಪಾಪದ ಹಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುವಿರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ?. ನಿಮ್ಮದೇ ಪಕ್ಷದ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್‌ರನ್ನು ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಹೇಳಿಕೊಳ್ಳುವಿರಾ? ಎಂದು ಪ್ರಶ್ನಿಸಿದೆ.

ಇದು 40% ಕಮಿಷನ್ ಸಮಾವೇಶ – ರಾಜ್ಯ ಸರ್ಕಾರಕ್ಕೆ ಕುಟುಕಿದ ಕಾಂಗ್ರೆಸ್ Read More »

ಪ್ರವೀಣ್ ಕೊಲೆ ಆರೋಪಿಯ ಸಹೋದರನಿಂದ ಹಿಂದೂ ಕಾರ್ಯಕರ್ತನಿಗೆ ಜೀವ ಬೆದರಿಕೆ!? ಬೆಳ್ಳಾರೆಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ!!

ಸಮಗ್ರ ನ್ಯೂಸ್: ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ತಲೆದೊರುವಂತಹ ಘಟನೆಯೊಂದು ಜರುಗಿದೆ . ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಫೀಕ್ ಎಂಬಾತನ ಸಹೋದರ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪ ಕೇಳಿ ಬಂದಿದ್ದು, ಈ ಹಿನ್ನಲೆಯಲ್ಲಿ ಬೆಳ್ಳಾರೆ ಠಾಣೆ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ ಘಟನೆ ಸೆ

ಪ್ರವೀಣ್ ಕೊಲೆ ಆರೋಪಿಯ ಸಹೋದರನಿಂದ ಹಿಂದೂ ಕಾರ್ಯಕರ್ತನಿಗೆ ಜೀವ ಬೆದರಿಕೆ!? ಬೆಳ್ಳಾರೆಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ!! Read More »

ಹದಿನಾಲ್ಕು ವರ್ಷದ ಬಾಲಕಿಯ ಮದ್ವೆಯಾದ 45ರ ಅಂಕಲ್| ಹಣದಾಸೆಗೆ ಮಗಳ ಬಾಳು ಬಲಿಕೊಟ್ಟ ಪೋಷಕರು

ಸಮಗ್ರ ನ್ಯೂಸ್: 14 ವರ್ಷದ ಬಾಲಕಿಯನ್ನ ಮದುವೆಯಾದ 45 ವರ್ಷದ ವ್ಯಕ್ತಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಈಗಾಗಲೇ ಮದುವೆಯಾಗಿ, 17 ವರ್ಷದ ಮಗ ಕೂಡ ಇದ್ದಾನೆ. ಆದರೂ ಬಡ ದಂಪತಿಯೊಬ್ಬರಿಗೆ ಹಣದಾಸೆ ತೋರಿಸಿ, ಅವರ ಅಪ್ರಾಪ್ತ ವಯಸ್ಸಿನ ಮಗಳನ್ನು ಬಲವಂತವಾಗಿ ಮದ್ವೆಯಾಗಿದ್ದಾನೆ.ಗುರುಪ್ರಸಾದ್ (45) ಬಂಧಿತ. ಗುರುಪ್ರಸಾದ್​ಗೆ 18 ವರ್ಷಗಳ ಹಿಂದೆಯೇ ಮದ್ವೆ ಆಗಿದೆ. 17 ವರ್ಷ ವಯಸ್ಸಿನ ಮಗ ಕೂಡ ಇದ್ದಾನೆ. ಕೆಲ ವರ್ಷಗಳಿಂದ ಹೆಂಡತಿಯಿಂದ ದೂರವಾಗಿದ್ದ ಗುರುಪ್ರಸಾದ್​, ಅಪ್ರಾಪ್ತೆ ಮೇಲೆ ಕಣ್ಣು

ಹದಿನಾಲ್ಕು ವರ್ಷದ ಬಾಲಕಿಯ ಮದ್ವೆಯಾದ 45ರ ಅಂಕಲ್| ಹಣದಾಸೆಗೆ ಮಗಳ ಬಾಳು ಬಲಿಕೊಟ್ಟ ಪೋಷಕರು Read More »

ಪ.ಪಂಗಡದ ಜಾಗದ ಅಕ್ರಮ‌ ಪರಭಾರೆ ಸರಿಪಡಿಸಲು ಅಂಬೇಡ್ಕರ್ ರಕ್ಷಣಾ ವೇದಿಕೆ ಮನವಿ

ಸಮಗ್ರ ನ್ಯೂಸ್: ಪರಿಶಿಷ್ಟ ಪಂಗಡಕ್ಕೆ ಸೇರಿದ ಜಾಗವನ್ನು ಮೇಲ್ವರ್ಗದವರು ಅಕ್ರಮವಾಗಿ ತಮ್ಮ ಹೆಸರಿಗೆ ರೆಕಾರ್ಡ್ ಮಾಡಿಕೊಂಡ ಹಿನ್ನಲೆ ಅದನ್ನು ಸರಿಪಡಿಸುವಂತೆ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ಮನವಿ ಸಲ್ಲಿಸಲಾಯಿತು. ದೂರಿನಲ್ಲಿ ಏನಿದೆ?ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ತಲ್ಲೂರು ಪರಿಶಿಷ್ಟ ಪಂಗಡದ ನಾರು ನಾಯ್ಕ ಬಿನ್ ಮಾಲಿಂಗ ನಾಯ್ಕ ಎಂಬವರ ಜಾಗದ ಸರ್ವೆ ನಂಬರ್ 109/2 ರಲ್ಲಿ4.65 ಎಕ್ರೆ ಜಾಗ ಈ ಜಾಗ ಡಿಸಿ ಡಿಆರ್ 1960 ರಲ್ಲಿ ನಾರು ನಾಯ್ಕ ಎಂಬವರಿಗೆ ಮಂಜುರಾಗಿರುತ್ತದೆ. ಈ ಜಾಗವನ್ನು ಭಾಸ್ಕರ ಬಿನ್

ಪ.ಪಂಗಡದ ಜಾಗದ ಅಕ್ರಮ‌ ಪರಭಾರೆ ಸರಿಪಡಿಸಲು ಅಂಬೇಡ್ಕರ್ ರಕ್ಷಣಾ ವೇದಿಕೆ ಮನವಿ Read More »