September 2022

ತವರಿನಿಂದ ಬರಲೊಪ್ಪದ ಪತ್ನಿಯ ಕರೆತರಲು ಗುಂಡು ಹಾರಿಸಿದ ಭೂಪ

ಸಮಗ್ರ ನ್ಯೂಸ್: ತವರಿನಿಂದ ವಾಪಸ್ ಬರಲೊಪ್ಪದ ಪತ್ನಿಯ ಮೇಲೆ ವ್ಯಕ್ತಿಯೋರ್ವ ಗುಂಡು ಹಾರಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ. ವಿಜಯಪುರ ಜಿಲ್ಲೆ ಸಿಂಧಗಿಯ ಶಿವಾನಂದ ಕಾಲೆಬಾಗ ಗುಂಡು ಹಾರಿಸಿದ ಆರೋಪಿ. ಘಟನೆಗೆ ಸಂಬಂಧಿಸಿದಂತೆ ಈತನ ಪತ್ನಿ ಪ್ರೀತಿ ಅಥಣಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಥಣಿಯ ಪ್ರೀತಿ ಎಂಬಾಕೆಯನ್ನು ಸಿಂಧಗಿಯ ಶಿವಾನಂದನಿಗೆ 4 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಕೆಲವು ತಿಂಗಳು ಚೆನ್ನಾಗಿ ಜೀವನ ಮಾಡಿಕೊಂಡಿದ್ದ ಆರೋಪಿ ಬಳಿಕ ಬೇರೊಂದು […]

ತವರಿನಿಂದ ಬರಲೊಪ್ಪದ ಪತ್ನಿಯ ಕರೆತರಲು ಗುಂಡು ಹಾರಿಸಿದ ಭೂಪ Read More »

ಹೋಟೆಲ್ ನಲ್ಲಿ ಅಗ್ನಿ ದುರಂತ ; 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

ಸಮಗ್ರ ನ್ಯೂಸ್ : ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಮಹಿಳೆ ಸೇರಿದಂತೆ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆಯೊಂದು ಹೈದಾರಾಬಾದ್ ನ ಸಿಕಂದರಾಬಾದ್ ನಲ್ಲಿ ನಡೆದಿದೆ. ಸಿಕಂದರಾಬಾದ್ ನ ರೂಬಿ ಹೋಟೆಲ್ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿನ ರೂಬಿ ಎಲೆಕ್ಟ್ರಿಕ್ ವೆಹಿಕಲ್ ಶೋರಂ ನಲ್ಲಿ ಬ್ಯಾಟರಿ ಸ್ಪೋಟಗೊಂಡು, ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದೆ. ಈ ವೇಳೆ ಹೋಟೆಲ್ ನಲ್ಲಿದ್ದ ಮಹಿಳೆ ಸೇರಿದಂತೆ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೋಟೆಲ್ ನಲ್ಲಿ ಅಗ್ನಿ ದುರಂತ ; 6 ಮಂದಿ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ Read More »

ಸಿಸಿ ಕ್ಯಾಮರಾ ಮತ್ತು ತಂತಿ ತಡೆಬೇಲಿ ಧ್ವಂಸ ನಾಲ್ವರ ಬಂಧನ

ಮಂಗಳೂರು: ಸೋಮೇಶ್ವರ ಸಮುದ್ರ ತೀರದಿಂದ ನಿರಂತರವಾಗಿ ಮರಳು ಕಳ್ಳತನ ನಡೆಯುತ್ತಿದ್ದ ಹಿನ್ನೆಲೆ ಹಾಕಿದ್ದ ಸಿಸಿ ಕ್ಯಾಮರ ಮತ್ತು ತಂತಿ ತಡೆಬೇಲಿ ಧ್ವಂಸಗೈದ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ ಟಿಪ್ಪರ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮಡ್ಯಾರ್ ಸಾಯಿ ನಗರ ನಿವಾಸಿ ಸೂರಜ್ , ಮುಡಿಪು ಮದ್ಯನಡ್ಕ ನಿವಾಸಿ ಇಕ್ಬಾಲ್ ,ತಲಪಾಡಿ ನಿವಾಸಿ ಅಖಿಲ್ ,ಸೋಮೇಶ್ವರ ನಿವಾಸಿ ಪ್ರಜ್ವಲ್ ಬಂಧಿತರು ಅವರು ಕೃತ್ಯಕ್ಕೆ ಬಳಸಿದ ಟಿಪ್ಪರ್ ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸೋಮೇಶ್ವರ ದೇವಸ್ಥಾನ ಬಳಿಯಿಂದ ಮತ್ತು ಗಡಿಭಾಗ ಮೂಡ

ಸಿಸಿ ಕ್ಯಾಮರಾ ಮತ್ತು ತಂತಿ ತಡೆಬೇಲಿ ಧ್ವಂಸ ನಾಲ್ವರ ಬಂಧನ Read More »

ಕೆಎಸ್ ಪಿ 3484 ಕಾನ್ ಸ್ಟೇಬಲ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ| ತೃತೀಯ ಲಿಂಗಿಗಳಿಗೂ ಅವಕಾಶ

ಸಮಗ್ರ ನ್ಯೂಸ್: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 3,484 ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪೇದೆ (ಡಿಆರ್) ಹಾಗೂ ನಗರ ಸಶಸ್ತ್ರ ಮೀಸಲು ಪೊಲೀಸ್ (ಸಿಎಆರ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಸೋಮವಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ.ಶೀಘ್ರದಲ್ಲೇ ವೆಬ್‌ಸೈಟ್‌ನಲ್ಲಿ ಪೊಲೀಸ್ ಇಲಾಖೆ ನೋಟಿಫಿಕೇಶನ್‌ನ್ನು ಪ್ರಕಟಿಸಲಿದೆ. ಅರ್ಹ ಅಭ್ಯರ್ಥಿಗಳು ಇದೇ ತಿಂಗಳು ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 31ರವರರೆಗೆ Ksp-recruitment.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯದ ಎಲ್ಲ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಯಲ್ಲಿ

ಕೆಎಸ್ ಪಿ 3484 ಕಾನ್ ಸ್ಟೇಬಲ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ| ತೃತೀಯ ಲಿಂಗಿಗಳಿಗೂ ಅವಕಾಶ Read More »

ನಿಮ್ಮ ಫೋನ್‌ನಲ್ಲಿ ಈ ಆ್ಯಪ್ ಗಳು ಡೇಂಜರ್!

ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅಪಯಾಕಾರಿ, ಅಕ್ರಮ ಆಯಪ್‌ಗಳಿಗೆ ಪ್ರವೇಶವಿಲ್ಲ. ಆದರೆ ಹಲವು ಬಾರಿ ಹ್ಯಾಕರ್‌ಗಳು ಗೂಗಲ್ ಪ್ಲೇ ಸ್ಟೋರ್ ಕಣ್ತಪ್ಪಿಸಿ ಅಪಾಯಾಕಾರಿ ಆಯಪ್‌ಗಳನ್ನು ಸೇರಿಸುತ್ತಾರೆ. ಹೀಗಾಗಿ ಹ್ಯಾಕರ್‌ಗಳು ಸೇರಿಸಿದ 35ಕ್ಕೂ ಹೆಚ್ಚು ಆಯಪ್‌ಗಳು ಅತ್ಯಂತ ಅಪಾಯಕಾರಿ ಎಂದು ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಸಂಸ್ಥೆ ಹೇಳಿದೆ. ಆಯಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 35 ಆಯಪ್ ಕುರಿತು ಗೂಗಲ್‌ಗೆ ಮಾಹಿತಿ ನೀಡಲಾಗಿದೆ. ಈ ಆಯಪ್‌ಗೆ ನಿರ್ಬಂಧ ವಿಧಿಸಲು ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಸಂಸ್ಥೆ ಸೂಚಿಸಿದೆ. ಸೈಬರ್ ಸೆಕ್ಯೂರಿಟಿ ಟೆಕ್ನಾಲಜಿ ಕಂಪನಿ

ನಿಮ್ಮ ಫೋನ್‌ನಲ್ಲಿ ಈ ಆ್ಯಪ್ ಗಳು ಡೇಂಜರ್! Read More »

ಅಡಿಕೆ ಆದಾಯದಿಂದ ಬಸ್ ಖರೀದಿಸಿ ಮಾದರಿಯಾದ ಸರ್ಕಾರಿ ಶಾಲೆ

ಸಮಗ್ರ ನ್ಯೂಸ್: ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದು ತನ್ನ ಅಡಿಕೆ ತೋಟದ ಆದಾಯದಿಂದ ಬಸ್‌ ಸೌಲಭ್ಯ ಗಳಿಸಿಕೊಂಡ ಅಪೂರ್ವ ಸಂಗತಿಯೊಂದು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದಿಂದ ವರದಿಯಾಗಿದೆ. 112 ವರ್ಷಗಳ ಇತಿಹಾಸ ಇರುವ ವಿಟ್ಲದ ಮಿತ್ತೂರು ಸ. ಉನ್ನತೀಕರಿಸಿದ ಹಿ.ಪ್ರಾ ಶಾಲೆ ಸುಮಾರು 4 ಎಕರೆ ಜಮೀನು ಹೊಂದಿದೆ. ಎಸ್‌ಡಿಎಂಸಿಯವರು, ಶಿಕ್ಷಕರು ಹಾಗೂ ಗ್ರಾಮಸ್ಥರು ಸೇರಿ 2017ರಲ್ಲಿ ಇಲ್ಲಿ 628 ಅಡಿಕೆ ಸಸಿಗಳನ್ನು ನೆಟ್ಟು, ಬೆಳೆಸಿದ್ದಾರೆ. ಈಗ ಅಡಿಕೆ ಇಳುವರಿ ಬರುತ್ತಿದೆ. ಈ ತೋಟದ

ಅಡಿಕೆ ಆದಾಯದಿಂದ ಬಸ್ ಖರೀದಿಸಿ ಮಾದರಿಯಾದ ಸರ್ಕಾರಿ ಶಾಲೆ Read More »

ಮಂಗಳೂರು: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾ.ಮಂಡಳಿ ಸದಸ್ಯರಾಗಿ ಪಿ.ಬಿ ಹರೀಶ್ ರೈ

ಸಮಗ್ರ ನ್ಯೂಸ್: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಆಯ್ಕೆಯಾಗಿದ್ದಾರೆ. ಇವರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಆಡಳಿತ ಮಂಡಳಿ ನಿರ್ದೇಶಕ ಹಾಗೂ ಮಂಗಳೂರು ಪ್ರೆಸ್ ಕ್ಲಬ್‌ನ ಉಪಾಧ್ಯಕ್ಷರಾಗಿದ್ದಾರೆ.

ಮಂಗಳೂರು: ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾ.ಮಂಡಳಿ ಸದಸ್ಯರಾಗಿ ಪಿ.ಬಿ ಹರೀಶ್ ರೈ Read More »

ಸುಬ್ರಹ್ಮಣ್ಯ – ಜಾಲ್ಸೂರು ಹೆದ್ದಾರಿಯಲ್ಲಿ ಬಲಿಗಾಗಿ ಕಾಯುತ್ತಿವೆ ಎರಡು ಮರಗಳು

ಸಮಗ್ರ ನ್ಯೂಸ್: ಯಾತ್ರಾಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಸುಬ್ರಹ್ಮಣ್ಯ- ಜಾಲ್ಸೂರು ಹೆದ್ದಾರಿಯ ಮರಕತ ಬಳಿ ಎರಡು ಜೋಡಿ ಮರಗಳು ಜೀವ ಬಲಿಗಾಗಿ ಕಾಯುತ್ತಿವೆ. ಕಳೆದ ಬಾರಿ ಸಂಭವಿಸಿದ ಪ್ರಾಕೃತಿಕ ವಿಕೋಪ ‌ಮತ್ತು ಜಲಸ್ಪೋಟದಿಂದ ಈ ಹೆದ್ದಾರಿಯ ನಡುಗಲ್ಲಿನಿಂದ ಕಲ್ಲಾಜೆವರೆಗೆ ಅಲ್ಲಲ್ಲಿ ಭೂಕುಸಿತ ಸಂಭವಿಸಿತ್ತು. ಗುಡ್ಡ ಕುಸಿದ ಪರಿಣಾಮ ಹಲವಾರು ಮರಗಳು ಧರಶಾಹಿಯಾಗಿದ್ದವು. ಇದರಲ್ಲಿ ಹಲವು ಮರಗಳು ಉರುಳಿದ್ದರೆ ಕೆಲವೊಂದು ಮರಗಳು ಅಲ್ಲೇ ಕುಸಿದು ಕುಳಿತಿವೆ. ಹೀಗೆ ಉಂಟಾದ ವಿಕೋಪದಿಂದ ಎರಡು ಬೃಹತ್ ಮರಗಳು ಮರಕತ ಬಳಿ‌ ರಸ್ತೆಗೆ

ಸುಬ್ರಹ್ಮಣ್ಯ – ಜಾಲ್ಸೂರು ಹೆದ್ದಾರಿಯಲ್ಲಿ ಬಲಿಗಾಗಿ ಕಾಯುತ್ತಿವೆ ಎರಡು ಮರಗಳು Read More »

2500 ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: 2500 ಶಿಕ್ಷಕರ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದೆ. ಈ ಬಗ್ಗೆ ಶಿಕ್ಷಣ ಸಚಿವ ಬಿಸಿ ನಾಗೇಶ್‌ ಅವರು ತಮ್ಮ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು 2,500 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಸಹ ಶಿಕ್ಷಕರು – 2,200 ಹುದ್ದೆಗಳು. ದೈಹಿಕ ಶಿಕ್ಷಣ ಶಿಕ್ಷಕರು – 200 ಹುದ್ದೆಗಳು. ವಿಶೇಷ ಶಿಕ್ಷಕರು – 100 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.

2500 ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ Read More »

ಅಂಬೇಡ್ಕರ್ ರಕ್ಷಣಾ ವೇದಿಕೆಯ ಮನವಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕು ಅರಂತೋಡು ಗ್ರಾಮದ ನೆಕ್ಕರೆ ಎಂಬಲ್ಲಿ ರಸ್ತೆ ಅಭಿವೃದ್ಧಿಯ ಬಗ್ಗೆ ಅಂಬೇಡ್ಕರ್ ರಕ್ಷಣೆ ವೇದಿಕೆಯರ ಮನವಿಗೆ ಸ್ಪಂದಿಸಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಸೆ.12ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅರಂತೋಡು ಗ್ರಾಮದ ನೆಕ್ಕರೆ ಎಂಬಲ್ಲಿ ರಸ್ತೆ ಅಭಿವೃದ್ಧಿಯ ಬಗ್ಗೆ ಮತ್ತು ಅರಮನೆ ಗಯ ಸೇತುವೆಯ ಬಗ್ಗೆ ಅಂಬೇಡ್ಕರ್ ರಕ್ಷಣೆ ವೇದಿಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ ಸಿ ಎಸ್ ಟಿ ಕುಂದು ಕೊರತೆ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಪಿಸುಂದರ ಪಾಟಾಜೆಯವರು

ಅಂಬೇಡ್ಕರ್ ರಕ್ಷಣಾ ವೇದಿಕೆಯ ಮನವಿಗೆ ಸ್ಪಂದಿಸಿದ ಸಮಾಜ ಕಲ್ಯಾಣ ಇಲಾಖೆ Read More »