September 2022


ಹೊಳೆಯಲ್ಲಿ ಸ್ನಾನ‌ ಮಾಡಲು ಹೋಗಿ ಯುವಕ ಕಾಲು ಜಾರಿ ಬಿದ್ದು ಸಾವು

ಸಮಗ್ರ ನ್ಯೂಸ್: ಹೊಳೆಯಲ್ಲಿ ಸ್ನಾನ ಮಾಡಲು ಹೋದ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಹೆಬ್ರಿ ತಾಲೂಕಿನ ವರಂಗ ಗ್ರಾಮದ ತಲಮನೆಯ ಹೊಳೆಯಲ್ಲಿ ಬುಧವಾರದಂದು ನಡೆದಿದೆ. ಮೃತ ಯುವಕ ಮುನಿಯಾಲು ವರಂಗ ಗ್ರಾಮ ಹೆಬ್ರಿ ತಾಲೂಕಿನ ಪವನ್ ರಾಜ್(28) ಎಂದು ಗುರುತಿಸಲಾಗಿದೆ. ಇವರು ತನ್ನ ಸಂಬಂಧಿಕರೊಂದಿಗೆ ವರಂಗ ಗ್ರಾಮದ ತಲಮನೆಯ ಹೊಳೆಯ ಬದಿಯಲ್ಲಿರುವ ಕಲ್ಲಿನ ಬಂಡೆಯ ಮೇಲೆ ಪಾರ್ಟಿ ಮಾಡುತ್ತಿರುವಾಗ ಪವನ್ ರಾಜ್ ಬುಧವಾರ ಸಂಜೆ ಹೊಳೆಯಲ್ಲಿ ಸ್ನಾನ ಮಾಡಲು ಹೋದವರು ಅಕಸ್ಮಿಕವಾಗಿ ಅವರ […]


ಹೊಳೆಯಲ್ಲಿ ಸ್ನಾನ‌ ಮಾಡಲು ಹೋಗಿ ಯುವಕ ಕಾಲು ಜಾರಿ ಬಿದ್ದು ಸಾವು
Read More »

ಕೆಎಸ್ ಆರ್ ಟಿ ಸಿ ಬಸ್ ಮತ್ತು  ಬೈಕ್ ಅಪಘಾತ; ಬೈಕ್ ಸವಾರ ಸಾವು

ಬೆಳಗಾವಿ: ಬೈಕ್ ಹಾಗೂ ಸಾರಿಗೆ ಬಸ್ ವಾಹನ ಮುಖಾಮುಖಿ ಡಿಕ್ಕಿ, ಈ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆಯೊಂದು ಗೋಕಾಕ ತಾಲೂಕಿನ ಚಿಕ್ಕನಂದಿ ಕ್ರಾಸ್ ಬಳಿ ನಡೆದಿದೆ. ಈ ಅಪಘಾತದಲ್ಲಿ ಬೈಕ್ ಸವಾರ ರೇವಣ್ಣ ಬಣವಿ (36) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಸ್ ಉಡುಪಿಯಿಂದ ಗೋಕಾಕ್​ ಗೆ ಹೊರಟಿತ್ತು. ಬೈಕ್ ಸವಾರ ಚಿಕ್ಕನಂದಿ ಗ್ರಾಮಕ್ಕೆ ಹೋಗುತ್ತಿದ್ದನು. ಈ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಬಗ್ಗೆ ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎಸ್ ಆರ್ ಟಿ ಸಿ ಬಸ್ ಮತ್ತು  ಬೈಕ್ ಅಪಘಾತ; ಬೈಕ್ ಸವಾರ ಸಾವು Read More »

ಸಾಕುನಾಯಿ ವಿಚಾರದಲ್ಲಿ ಅತ್ತೆ ಮಾವನೊಂದಿಗೆ ಗಲಾಟೆ, ಮನನೊಂದು ತಾಯಿ ಮಗಳು ಆತ್ಮಹತ್ಯೆ

ಬೆಂಗಳೂರು: ಸಾಕುನಾಯಿ ವಿಚಾರದಲ್ಲಿ ಅತ್ತೆ ಮಾವನೊಂದಿಗೆ ನಡೆದ ವಿವಾದದಿಂದ ಮನನೊಂದ ತಾಯಿ- ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಿವ್ಯಾ ಹಾಗೂ ಮಗಳು ಮೃತ ದುರ್ದೈವಿಗಳು. ದಿವ್ಯಾ ಉಸಿರಾಟ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು. ದಿವ್ಯಾ ಅವರ ಅತ್ತೆ- ಮಾವ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಮನೆಯಲ್ಲಿ ನಾಯಿ ಇದ್ದರೆ ಅಸ್ತಮಾ ಸಂಬಂಧಿ ಅಲರ್ಜಿ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ನಾಯಿಯನ್ನು ಯಾರಿಗಾದರೂ ನೀಡಿ ಎಂದು ಅತ್ತೆ ಮಾವನಿಗೆ ದಿವ್ಯಾ ಹೇಳಿದ್ದರು. ಆದರೆ

ಸಾಕುನಾಯಿ ವಿಚಾರದಲ್ಲಿ ಅತ್ತೆ ಮಾವನೊಂದಿಗೆ ಗಲಾಟೆ, ಮನನೊಂದು ತಾಯಿ ಮಗಳು ಆತ್ಮಹತ್ಯೆ Read More »

ನಟಿ ಶ್ರೀ ಲೀಲಾ ತಾಯಿ ಸ್ವರ್ಣ ಲತಾ ಅವರಿಗೆ ಬಂಧನದ ಭೀತಿ

ಬೆಂಗಳೂರು: ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣ ಲತಾ ಅವರಿಗೆ ಬಂಧನದ ಭೀತಿ ಎದುರಾಗಿದ್ದು, ಅವರಿಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್‌ 10ರಂದು ಮಧುಕರ್‌ ಅಂಗೂರು ಜೊತೆಗೆ ಸ್ವರ್ಣ ಲತಾ ಅಲೆಯನ್ಸ್‌ ವಿವಿಯೊಳಗೆ ತಮ್ಮ ಬೌನ್ಸರ್‌ ಜೊತೆಗೆ ಅಕ್ರಮ ಪ್ರವೇಶವನ್ನು ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೋರ್ಟ್‌ ಈ ಬಗ್ಗೆ ಆದೇಶ ನೀಡಿದ್ದರು ಕೂಡ ಸ್ವರ್ಣ ಲತಾ ಕಿರಿಕ್‌ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ನಡುವೆ ಸ್ವರ್ಣ ಲತಾ ಸೇರಿದಂತೆ ಪ್ರಕರಣ ಸಂಬಂಧ ಏಳು

ನಟಿ ಶ್ರೀ ಲೀಲಾ ತಾಯಿ ಸ್ವರ್ಣ ಲತಾ ಅವರಿಗೆ ಬಂಧನದ ಭೀತಿ Read More »

ವಿಧಾನ ಮಂಡಲ ಅಧಿವೇಶನ ನೇರಪ್ರಸಾರ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆಯ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು ೫ನೇ ದಿನದ ಅಧಿವೇಶನ ನೇರಪ್ರಸಾರ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ; ವಿಡಿಯೋ ಕೃಪೆ: ಡಿಡಿ ಚಂದನ

ವಿಧಾನ ಮಂಡಲ ಅಧಿವೇಶನ ನೇರಪ್ರಸಾರ Read More »

ಉಪಸಭಾಪತಿ ಆನಂದ್ ಮಾಮನಿ ಆರೋಗ್ಯ ಸ್ಥಿತಿ‌ ಗಂಭೀರ; ಚೆನ್ನೈ ನ ಖಾಸಗಿ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆಯ ಉಪ ಸಭಾಪತಿ ಆನಂದ್ ಮಾಮನಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನಂದ ಮಾಮನಿ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕರಾಗಿದ್ದು, ಕಳೆದ ಕೆಲ ದಿನಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಎರಡು ದಿನಗಳ ಹಿಂದೆ ಚೆನ್ನೈಗೆ ಶಿಫ್ಟ್ ಮಾಡಲಾಗಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿರುವ ಹಿನ್ನೆಲೆ ನಾಳೆ ಅಥವಾ ನಾಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಪ್ಟ್ ಮಾಡುವ ಸಾಧ್ಯತೆ ಇದೆ. ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಆನಂದ್ ಮಾಮನಿ

ಉಪಸಭಾಪತಿ ಆನಂದ್ ಮಾಮನಿ ಆರೋಗ್ಯ ಸ್ಥಿತಿ‌ ಗಂಭೀರ; ಚೆನ್ನೈ ನ ಖಾಸಗಿ ಆಸ್ಪತ್ರೆಗೆ ದಾಖಲು Read More »

ಪುತ್ತೂರು: ಅಂಗಡಿಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ| ಆರೋಪಿ ಅರೆಸ್ಟ್; ಬಂದ್ ಕರೆ ವಾಪಸ್

ಸಮಗ್ರ ನ್ಯೂಸ್: ಖರೀದಿಗೆಂದು ಅಂಗಡಿಗೆ ಬಂದ ಹಿಂದೂ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆ ಪುತ್ತೂರು ತಾಲೂಕಿನ ತಿಂಗಳಾಡಿಯ ಅಂಗಡಿಯೊಂದರಲ್ಲಿ ನಡೆದಿತ್ತು. ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ಮನೆಯ ಬದ್ರುದ್ದಿನ್ ಬಂಧಿತ ಆರೋಪಿ. ಈತನ ವಿರುದ್ಧ ಐಪಿಸಿ ಸೆಕ್ಷನ್ 354 ರಂತೆ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದತಿಂಗಳಾಡಿ ಎಂಬಲ್ಲಿರುವ ನ್ಯೂ ಸೂಪರ್ ಬಜಾರ್ ಜನರಲ್ ಸ್ಟೋರ್ ಸ್ವೀಟ್ ಸ್ಟಾಲ್ ಎಂಬ ಅಂಗಡಿಯಲ್ಲಿ ಸಂತ್ರಸ್ತೆ ಸ್ವೀಟ್

ಪುತ್ತೂರು: ಅಂಗಡಿಗೆ ಬಂದ ಮಹಿಳೆಗೆ ಲೈಂಗಿಕ ಕಿರುಕುಳ| ಆರೋಪಿ ಅರೆಸ್ಟ್; ಬಂದ್ ಕರೆ ವಾಪಸ್ Read More »

ಸುಳ್ಯ: ಕೆರೆಗೆ ಹಾರಿ ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೇಕಿ ಎಂಬಲ್ಲಿ ನಡೆದಿದೆ. ಗ್ರಾಮದ ಅಲೇಕಿ ಚೆನ್ನಪ್ಪ ಗೌಡರ ಪುತ್ರ ರವಿಚಂದ್ರ (40 ವರ್ಷ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಪತ್ನಿ ಹಾಗೂ ಮಗುವಿನೊಂದಿಗೆ ಪುತ್ತೂರಿನ ಬಾಡಿಗೆ ಮನೆಯಲ್ಲಿ ವಾಸವಿದ್ದು, ಸೆ. 13 ರಂದು ಅಲೇಕಿಯ ತನ್ನ ಮನೆಗೆ ಬಂದಿದ್ದರು. ಮನೆಯಲ್ಲಿ ತಾಯಿ ಒಬ್ಬರೇ ಇರುವ ಸಂದರ್ಭದಲ್ಲಿ ಮೈಲುತುತ್ತು ಬ್ಯಾಗನ್ನು ಹಿಡಿದುಕೊಂಡು ರೋಗ ಇರುವ ಅಡಿಕೆ ಮರದ ಬುಡಕ್ಕೆ ಮೈಲುತುತ್ತನ್ನು ಪುಡಿ ಮಾಡಿ

ಸುಳ್ಯ: ಕೆರೆಗೆ ಹಾರಿ ಯುವಕ ಆತ್ಮಹತ್ಯೆ Read More »

ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರಾಬಿನ್ ಉತ್ತಪ್ಪ

ಸಮಗ್ರ ನ್ಯೂಸ್: ರಾಬಿನ್ ಉತ್ತಪ್ಪ ಅವರು ಎಲ್ಲಾ ಮಾದರಿಯ ಕ್ರಿಕೆಟ್‌ ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ. ಭಾರತದ ಕ್ರಿಕೆಟ್ ಮಾಜಿ ತಾರೆ ರಾಬಿನ್ ಉತ್ತಪ್ಪ ನಿವೃತ್ತಿ ಬಗ್ಗೆ ಟ್ವಿಟರ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ದೇಶ ಮತ್ತು ನನ್ನ ರಾಜ್ಯ ಕರ್ನಾಟಕವನ್ನು ಪ್ರತಿನಿಧಿಸುವುದು ನನ್ನ ದೊಡ್ಡ ಗೌರವ. ಹೇಗಾದರೂ, ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ಕೃತಜ್ಞತೆಯ ಹೃದಯದಿಂದ, ನಾನು ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. 205

ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರಾಬಿನ್ ಉತ್ತಪ್ಪ Read More »

ದ.ಕ ಜಿಲ್ಲಾಧಿಕಾರಿ ಮೊಬೈಲ್ ನಂಬರ್ ಹ್ಯಾಕ್| ದೂರು ದಾಖಲಿಸಿದ ಡಿ.ಸಿ; ಮೋಸ ಹೋಗದಂತೆ ಮನವಿ

ಸಮಗ್ರ ನ್ಯೂಸ್: ಮೊಬೈಲ್ ಸಂಖ್ಯೆಯೊಂದರ ವಾಟ್ಸ್‌ ಆ್ಯಪ್‌ನಿಂದ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಹೆಸರು ಮತ್ತು ಫೋಟೋವನ್ನು ದುರ್ಬಳಕೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮಂಗಳೂರಿನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಮೊ.ಸಂ: 8590710748ರ ವಾಟ್ಸ್‌ ಆ್ಯಪ್‌ನಲ್ಲಿ ತನ್ನ ಹೆಸರು ಹಾಗೂ ಫೋಟೊ ದುರ್ಬಳಕೆ ಮಾಡಲಾಗಿದೆ. ಅಪರಿಚಿತರು ಈ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ಸಹಾಯ ಅಥವಾ ಹಣವನ್ನು ವರ್ಗಾಯಿಸಲು ವಿನಂತಿಸಬಹುದು. ಆ ನಂಬರ್ ತನ್ನದ್ದಲ್ಲ. ಹಾಗಾಗಿ ಯಾರೂ ಕೂಡ ಯಾವುದೇ ರೀತಿಯಲ್ಲಿ

ದ.ಕ ಜಿಲ್ಲಾಧಿಕಾರಿ ಮೊಬೈಲ್ ನಂಬರ್ ಹ್ಯಾಕ್| ದೂರು ದಾಖಲಿಸಿದ ಡಿ.ಸಿ; ಮೋಸ ಹೋಗದಂತೆ ಮನವಿ Read More »