September 2022

ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿಳಿದ 8 ಚಿರತೆಗಳು

ಸಮಗ್ರ ನ್ಯೂಸ್ : ಭಾರತ ಕಾಡುಗಳಿಂದ ಕಣ್ಮರೆಯಾಗಿದ್ದ ಚಿರತೆಗಳು ಸುಮಾರು 70 ವರ್ಷಗಳ ಬಳಿಕ ಮತ್ತೆ ಬಂದಿದೆ. ಇದೀಗ ನಮೀಬಿಯಾ ದೇಶದಿಂದ ಎಂಟು ಚಿರತೆಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿದೆ. ನಮೀಬಿಯಾದಿಂದ ಎಂಟು ಚಿರತೆಗಳನ್ನು ಹೊತ್ತ ವಿಶೇಷ ಚಾರ್ಟರ್ಡ್‌ ಕಾರ್ಗೋ ವಿಮಾನವು ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿರುವ ಭಾರತೀಯ ವಾಯುಪಡೆಯ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಂದು ಇಳಿದಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಬಿಡುಗಡೆ ಮಾಡಲಿದ್ದಾರೆ.

ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂದಿಳಿದ 8 ಚಿರತೆಗಳು Read More »

ಕಾಣೆಯಾಗಿದ್ದ ಮಹಿಳಾ ಪೋಲಿಸ್ ಪೇದೆ; ಶವವಾಗಿ ಪತ್ತೆ

ಸಮಗ್ರ ನ್ಯೂಸ್: ನಾಪತ್ತೆಯಾಗಿದ್ದ ಮಹಿಳಾ ಪೊಲೀಸ್ ಪೇದೆ ಶವವಾಗಿ ಪತ್ತೆಯಾದ ಘಟನೆಯೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಸುಧಾ (39) ಮೃತ ಮಹಿಳಾ ಪೊಲೀಸ್ ಪೇದೆ ಎಂದು ಗುರುತಿಸಲಾಗಿದೆ. ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206 ರ ಮೈಲನಹಳ್ಳಿ ಗ್ರಾಮದ ಬಳಿಯ ಪೊದೆಯೊಂದರಲ್ಲಿ ಸುಧಾ ಮೃತದೇಹ ಸಿಕ್ಕಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಸುಧಾ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇದೀಗ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಸುಧಾರನ್ನು ಕಾರಿನಲ್ಲಿ

ಕಾಣೆಯಾಗಿದ್ದ ಮಹಿಳಾ ಪೋಲಿಸ್ ಪೇದೆ; ಶವವಾಗಿ ಪತ್ತೆ Read More »

‘ನಮೋ’ಗೆ ವಿಶಿಷ್ಟವಾಗಿ ಬರ್ತ್ ಡೇ ಶುಭಾಶಯ ತಿಳಿಸಿದ ಪುಟಿನ್

ಸಮಗ್ರ ನ್ಯೂಸ್: ಉಜ್ಬೇಕಿಸ್ತಾನದ ಸಮರ್ಕಂಡ್ ನಲ್ಲಿ ನಡೆದ ಎಸ್ ಸಿಒ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ರಷ್ಯಾದ ಸಂಪ್ರದಾಯದಲ್ಲಿ, ಜನ್ಮದಿನಗಳಿಗೆ ಮುಂಚಿತವಾಗಿ ಶುಭಾಶಯಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದರು. ಆದ್ದರಿಂದ ನಾನು ಈ ಸಮಯದಲ್ಲಿ ನಿಮ್ಮನ್ನು ಅಭಿನಂದಿಸುತ್ತಿಲ್ಲ, ಆದರೆ ನನ್ನ ಶುಭ ಹಾರೈಕೆಗಳು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತವೆ. ನಿಮ್ಮ ನಾಯಕತ್ವದಲ್ಲಿ

‘ನಮೋ’ಗೆ ವಿಶಿಷ್ಟವಾಗಿ ಬರ್ತ್ ಡೇ ಶುಭಾಶಯ ತಿಳಿಸಿದ ಪುಟಿನ್ Read More »

ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಅಪ್ಪು ಪೋಟೊ ಹಾಗೂ ಕನ್ನಡದ ಬಾವುಟ ಹಾರಿಸಿದ ಶಿವಮೊಗ್ಗದ ಯುವಕರು

ಸಮಗ್ರ ನ್ಯೂಸ್: ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಮ್ಮನ್ನು ಅಗಲಿ ಒಂದು ವರ್ಷ ಆಗುತ್ತಾ ಬರುತ್ತಿದೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಶಾಶ್ವತವಾಗಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಶಿವಮೊಗ್ಗದ ಯುವಕರು, ವಿಶ್ವದ ಅತಿ ಎತ್ತರದ ಲಡಾಕ್‌ನ ರಸ್ತೆಯಲ್ಲಿ ಅಪ್ಪು ಫೋಟೊ ಹಾಗೂ ಕನ್ನಡದ ಬಾವುಟ ಅನಾವರಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಜಗತ್ತಿನ ಅತಿ ಎತ್ತರದ ರಸ್ತೆಯಾದ ಭಾರತದ ಖರ್ದುಂಗ್‌ ಲಾ ಪಾಸ್ (17,582 ಅಡಿ ಎತ್ತರ) ರಸ್ತೆಯಲ್ಲಿ ಶಿವಮೊಗ್ಗದ ಅಪ್ಪು ಅಭಿಮಾನಿಗಳಾದ ವಿನಯ್ ತಾಂದ್ಲೆ, ಪ್ರಮೋದ್, ಗೌತಮ್, ಹರೀಶ್

ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಅಪ್ಪು ಪೋಟೊ ಹಾಗೂ ಕನ್ನಡದ ಬಾವುಟ ಹಾರಿಸಿದ ಶಿವಮೊಗ್ಗದ ಯುವಕರು Read More »


ಬಿಗ್ ಬಾಸ್ ಒಟಿಟಿ ಶೋ ಟಾಪರ್ ಆದ ರೂಪೇಶ್ ಶೆಟ್ಟಿ, 5ಲಕ್ಷ ನಗದು ಬಹುಮಾನ

ಬೆಂಗಳೂರು: ರೂಪೇಶ್​ ಶೆಟ್ಟಿ ಬಿಗ್ ಬಾಸ್ ಕನ್ನಡ ಒಟಿಟಿ ವಿನ್ನರ್ ಆಗಿದ್ದು, 5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋನಲ್ಲಿ ಟಾಪರ್​ ಆದ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ಕೊನೆಗೊಂಡಿದ್ದು, ಶುಕ್ರವಾರ (ಸೆ.16) ಅದ್ದೂರಿಯಾಗಿ ಫಿನಾಲೆ ನಡೆಯಿತು. 42 ದಿನಗಳ ಕಾಲ ಎಲ್ಲರ ನಡುವೆ ಸಖತ್​ ಪೈಪೋಟಿ ಇತ್ತು. ಕಡೆಗೂ ನಾಲ್ಕು ಜನರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸ್ಪರ್ಧಿಸುವ ಚಾನ್ಸ್​ ಪಡೆದಿದ್ದಾರೆ.


ಬಿಗ್ ಬಾಸ್ ಒಟಿಟಿ ಶೋ ಟಾಪರ್ ಆದ ರೂಪೇಶ್ ಶೆಟ್ಟಿ, 5ಲಕ್ಷ ನಗದು ಬಹುಮಾನ
Read More »

ಕೊಡಗು: ಅ.17 ಸಂಜೆ ತೀರ್ಥರೂಪಿಣಿಯಾಗಿ ಹರಿಯಲಿದ್ದಾಳೆ ಕಾವೇರಿ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಅಕ್ಟೋಬರ್ 17ರ ಸಂಜೆ 7.21ರಂದು ತಿರ್ಥೋದ್ಬವ ಉಂಟಾಗಲಿದೆ. ಮಡಿಕೇರಿಯ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕಾಗಿ ಇಂದು ಭಾಗಮಂಡಲದ ದೇಗುಲದಲ್ಲಿ ಪಂಚಾಗ ಶ್ರವಣ ಕಾರ್ಯವನ್ನು ನಡೆಸಲಾಯಿತು. ಈ ಪಂಚಾಂಗ ಶ್ರವಣ ಕಾರ್ಯದಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ ಪಡಿಸಲಾಯಿತು. ಇಂದು ನಿಗದಿಪಡಿಸಿದಂತೆ ಅಕ್ಟೋಬರ್ 17ರ ಸಂಜೆ 7.21ಕ್ಕೆ ಸರಿಯಾಗಿ ಮೇಷ ಲಗ್ನದಲ್ಲಿ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ ಎಂದು ನಿಗದಿ ಪಡಿಸಲಾಗಿದೆ.

ಕೊಡಗು: ಅ.17 ಸಂಜೆ ತೀರ್ಥರೂಪಿಣಿಯಾಗಿ ಹರಿಯಲಿದ್ದಾಳೆ ಕಾವೇರಿ Read More »

ಟೀಚರ್ ಸ್ಟೂಡೆಂಟ್ ನಡುವಿನ ವಿಡಿಯೋ ವೈರಲ್| ಈ ಪುಟ್ಟಣ್ಣನ ಟೀಚರ್​ ಏನು ಹೇಳಿದ್ರು ಗೊತ್ತಾ?
ವೈರಲ್ ಆದನಂತರ ಪ್ರತಿಕ್ರಿಯಿಸಿದ ಶಿಕ್ಷಕಿ

ಸಮಗ್ರ ನ್ಯೂಸ್: “ಸಾಕು ಮಾಡು ನಿನ್ನ ಹುಚ್ಚಾಟ. ಎಷ್ಟು ಸಲ ಹೇಳಿದರೂ ನೀನು ಕೇಳುವುದೇ ಇಲ್ಲವಲ್ಲ. ನನಗೆ ಕೋಪ ಬರುತ್ತಿದೆ. ನಿನ್ನೊಂದಿಗೆ ನಾನು ಮಾತನಾಡುವುದೇ ಇಲ್ಲ” ಹೀಗೆ ಟೀಚರ್ ಹೇಳಿದಾಗ ಯಾವ ಮಗುವಿಗೆ ದುಃಖವಾಗುವುದಿಲ್ಲ? ಆಗ ಮಗು ಕ್ಷಮೆ ಕೇಳದೆ ಬೇರೆ ಹಾದಿ ಇದೆಯೆ? ಕ್ಷಮೆ ಕೇಳಿದರೂ ಟೀಚರ್ ಮಣಿಯದಿದ್ದಾಗ ಏನು ಮಾಡಬೇಕು? ಏನು ಮಾಡಬೇಕೋ ಅದನ್ನೇ ಮಾಡಿ ಟೀಚರ್ ಮನಸ್ಸನ್ನು ಕರಗಿಸಿದ್ದಾನೆ ಈ ಪುಟ್ಟಣ್ಣ. ವೈರಲ್ ಆದ ಈ ಟೀಚರ್-ಸ್ಟೂಡೆಂಟ್​ ಜೋಡಿಯ ವಿಡಿಯೋ ಅನ್ನು ನಿನ್ನೆಯಷ್ಟೇ

ಟೀಚರ್ ಸ್ಟೂಡೆಂಟ್ ನಡುವಿನ ವಿಡಿಯೋ ವೈರಲ್| ಈ ಪುಟ್ಟಣ್ಣನ ಟೀಚರ್​ ಏನು ಹೇಳಿದ್ರು ಗೊತ್ತಾ?
ವೈರಲ್ ಆದನಂತರ ಪ್ರತಿಕ್ರಿಯಿಸಿದ ಶಿಕ್ಷಕಿ
Read More »

ಕೋತಿಗಳ ಕಾಟಕ್ಕೆ ಸಿಲುಕಿದ ಪೊಲೀಸರು/ ಮಧ್ಯೆ ಎಂಟ್ರಿ ಕೊಟ್ಟ ಹಾವು/ ಮುಂದೇನಾಯ್ತು ನೀವೇ ನೋಡಿ

ತಿರುವನಂತಪುರಂ: ಸಮಾಜದಲ್ಲಿ ಶಾಂತಿ ಭದ್ರತೆಯನ್ನು ಕಾಪಾಡುವ ಪೊಲೀಸರನ್ನು ಕೋತಿಗಳಿಂದ ಕಾಪಾಡುವವರೇ ಇರಲಿಲ್ಲ. ಇಲ್ಲಿ ನಡೆದಿರೋದು ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಕೇರಳ ಅರಣ್ಯ ಪ್ರದೇಶದ ಕುಂಬುಮೆಟ್ಟು ಪೊಲೀಸ್​ ಠಾಣೆಯಯಲ್ಲಿ. ಕೋತಿಗಳ ಗುಂಪು ಏಕಾಏಕಿ ದಾಳಿ ಮಾಡಿ ನಾನಾ ಹಂಗಾಮಾ ಮಾಡೋದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಇಂತಹ ಸಂದರ್ಭದಲ್ಲಿ ಪೊಲೀಸರಿಗೆ ಸ್ಥಳೀಯ ರೈತರೊಬ್ಬರು ನೀಡಿದ್ದ ಸಲಹೆ ಸದ್ಯ ವರ್ಕ್​ ಆಗಿದ್ದು, ಪೊಲೀಸರ ಸಮಸ್ಯೆಗೆ ಪರಿಹಾರ ಲಭ್ಯವಾಗಿದೆ. ಕೇರಳದ ಇಡುಕಿಯಲ್ಲಿರುವ ಕುಂಬುಮೆಟ್ಟು ಪೊಲೀಸ್​​ ಠಾಣೆಯ ಬಳಿ ಅತೀ ಹೆಚ್ಚು ಕೋತಿಗಳ ಕಾಟವಿದ್ದು.

ಕೋತಿಗಳ ಕಾಟಕ್ಕೆ ಸಿಲುಕಿದ ಪೊಲೀಸರು/ ಮಧ್ಯೆ ಎಂಟ್ರಿ ಕೊಟ್ಟ ಹಾವು/ ಮುಂದೇನಾಯ್ತು ನೀವೇ ನೋಡಿ Read More »

ಜಾಲ್ಸೂರು-ಸುಬ್ರಹ್ಮಣ್ಯ ಹೆದ್ದಾರಿ ಬದಿಯ ಅಪಾಯಕಾರಿ ಮರಗಳ ತೆರವು

ಸಮಗ್ರ ನ್ಯೂಸ್: ಜಾಲ್ಸೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನಡುಗಲ್ಲು ಕಲ್ಲಾಜೆ ಸಮಿಪ ಗುಡ್ಡ‌ ಕುಸಿತದ ಪರಿಣಾಮ ಕೆಲವು ಬೃಹತ್ ಮರಗಳು ರಸ್ತೆಗೆ ವಾಲಿನಿಂತಿದ್ದು ಅಪಾಯವನ್ನು ಆಹ್ವಾನಿಸುತ್ತಿತ್ತು. ಈ ಕುರಿತು ಸಮಗ್ರ ಸಮಾಚಾರ ವರದಿ‌ ಬೆನ್ನಲ್ಲೇ ಮರಗಳನ್ನು ತೆರವು ಮಾಡಲಾಗಿದೆ. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ಇದರ ಸ್ವಯಂ ಸೇವಕರು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಇಂದು ತೆರವು ಮಾಡಿದರು. ಅರಣ್ಯ ಇಲಾಖೆಯ ನಾಲ್ಕೂರು ವಿಭಾಗದ ಅರಣ್ಯಾಧಿಕಾರಿ ಸದಾಶಿವ, ಅರಣ್ಯ ರಕ್ಷಕ ಅಶೋಕ್ ಇವರ ಜೊತೆಗೆ ಶೌರ್ಯ

ಜಾಲ್ಸೂರು-ಸುಬ್ರಹ್ಮಣ್ಯ ಹೆದ್ದಾರಿ ಬದಿಯ ಅಪಾಯಕಾರಿ ಮರಗಳ ತೆರವು Read More »

ಚಿಕ್ಕಮಗಳೂರು: ಮಾಧ್ಯಮಗಳ ಮುಂದೆ ಬಂದ ಜಾಫರ್- ಚೈತ್ರಾ| ಮುಂದೆನೂ ನಾವು ಚೆನ್ನಾಗಿರ್ತೀವಿ, ದಯವಿಟ್ಟು ಯಾರೂ ಅಡ್ಡಿಮಾಡ್ಬೇಡಿ ಎಂದ ಲವ್ ಬರ್ಡ್ಸ್

ಸಮಗ್ರ ನ್ಯೂಸ್: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸೆ. 14 ರಂದು ಮುಸ್ಲಿಂ ಹುಡುಗ ಜಾಫರ್- ಹಿಂದು ಹುಡುಗಿ ಚೈತ್ರಾ, ಪ್ರೇಮಿಗಳು ಮದುವೆಯಾಗಲು ಮುಂದಾಗಿದ್ದರು. ಈ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಮದುವೆಗೆ ತಡೆಯೊಡ್ಡಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಯುವತಿ ಚೈತ್ರಾ ಮಾಧ್ಯಮಗಳ ಮುಂದೆ ಮಾತನಾಡಿ, ನಾವು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ. ಇಬ್ಬರು ಇಷ್ಟಪಟ್ಟೆ ಮದುವೆಗೆ ಮುಂದಾಗಿದ್ದೇವೆ. ನಾವು ಮದುವೆಯಾಗುತ್ತೇವೆ, ಚೆನ್ನಾಗಿರ್ತೀವಿ, ಕೇಳೋಕೆ ಅವರ್ಯಾರು.? ಎಂದು ಬಜರಂಗದಳ ಕಾರ್ಯಕರ್ತರ ವಿರುದ್ಧ

ಚಿಕ್ಕಮಗಳೂರು: ಮಾಧ್ಯಮಗಳ ಮುಂದೆ ಬಂದ ಜಾಫರ್- ಚೈತ್ರಾ| ಮುಂದೆನೂ ನಾವು ಚೆನ್ನಾಗಿರ್ತೀವಿ, ದಯವಿಟ್ಟು ಯಾರೂ ಅಡ್ಡಿಮಾಡ್ಬೇಡಿ ಎಂದ ಲವ್ ಬರ್ಡ್ಸ್ Read More »