September 2022

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಭರಪೂರ ಕೊಡುಗೆ ಘೋಷಿಸಿದ ಸಿಎಂ

ಸಮಗ್ರ ನ್ಯೂಸ್: ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 2,100 ಶಾಲಾ ಕೊಠಡಿಗಳು ಮತ್ತು 2,500 ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಲ್ಯಾಣ ಕರ್ನಾಟಕದ ಅಮೃತ ಮಹೋತ್ಸವದ ಅಂಗವಾಗಿ ಶನಿವಾರ ಇಲ್ಲಿನ ಪೊಲೀಸ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಮತ್ತು ಕನಸನ್ನು ನನಸಾಗಿಸಲು ಬದ್ಧವಾಗಿದೆ ಎಂದರು. ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸೂಚನೆಗಳನ್ನು […]

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಭರಪೂರ ಕೊಡುಗೆ ಘೋಷಿಸಿದ ಸಿಎಂ Read More »

ಮಂಗಳೂರು: ಬ್ಯಾರಿ‌ಭಾಷಾ ದಿನಾಚರಣೆ| ವಿವಿಧ ಸ್ಪರ್ಧೆಗಳಿಗೆ ಆಹ್ವಾನ

ಸಮಗ್ರ ನ್ಯೂಸ್: ಅಕ್ಟೋಬರ್ 3ರಂದು ನಡೆಯುವ ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಅಖಿಲ ಭಾರತ ಬ್ಯಾರಿ ಪರಿಷತ್ ವಿವಿಧ ಬ್ಯಾರಿ ಸ್ಪರ್ಧೆಗಳನ್ನು ಆಯೋಜಿಸಿದೆ. 1) ಪ್ರಬಂಧ ಸ್ಪರ್ಧೆ: ಪ್ರವಾದಿ ಮುಹಮ್ಮದ್ (ಸ.ಅ.) ಅವರ ಜೀವನ ಮತ್ತು ಸಂದೇಶ ಎಂಬ ವಿಷಯದಲ್ಲಿ ಕನ್ನಡ ಲಿಪಿ ಬಳಸಿ ಬ್ಯಾರಿ ಭಾಷೆಯಲ್ಲಿ ನಾಲ್ಕು ಪುಟಗಳಿಗೆ ಮೀರದ ಪ್ರಬಂಧವನ್ನು ವಿದ್ಯಾರ್ಥಿಗಳ ಸಹಿತ ಸಾರ್ವಜನಿಕರು (ಮುಕ್ತ ಸ್ಪರ್ಧೆ) ಬರೆದು ಸೆಪ್ಟೆಂಬರ್ 30ರೊಳಗೆ ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಕ್ಯಾಪಿಟಲ್ ಅವೆನ್ಯೂ, ತಳ ಅಂತಸ್ತು,

ಮಂಗಳೂರು: ಬ್ಯಾರಿ‌ಭಾಷಾ ದಿನಾಚರಣೆ| ವಿವಿಧ ಸ್ಪರ್ಧೆಗಳಿಗೆ ಆಹ್ವಾನ Read More »

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ| ಮಾತನಾಡಲು ಕರೆದವರು ಚೂರಿಯಿಂದ ತಿವಿದರು

ಸಮಗ್ರ ನ್ಯೂಸ್: ಮಂಗಳೂರು ನಗರದ ಕಾಲೇಜೊಂದರ ವಿದ್ಯಾರ್ಥಿಗೆ ಮತ್ತೊಂದು ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಚೂರಿಯಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಗರದ ನಂತೂರು ಜಂಕ್ಷನ್ ಬಳಿ ನಡೆದಿದೆ. ನಂತೂರು ಬಳಿಯಿರುವ ಪ.ಪೂ.ಕಾಲೇಜಿನ 17 ವರ್ಷ ಪ್ರಾಯದ ವಿದ್ಯಾರ್ಥಿ ಸೆ.15ರಂದು ಸಂಜೆ ಕಾಲೇಜು ಬಿಟ್ಟು ತನ್ನ ಗೆಳೆಯರೊಂದಿಗೆ ನಂತೂರು ಜಂಕ್ಷನ್ ಕಡೆಗೆ ನಡೆದುಕೊಡು ಹೋಗುತ್ತಿದ್ದಾಗ ಮತ್ತೊಂದು ಪ.ಪೂ.ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಆಗಮಿಸಿ ‘ಮಾತನಾಡಲು ಇದೆ’ ಎನ್ನುತ್ತಾ ದೈವಸ್ಥಾನದ ಹಿಂಬದಿಗೆ ಕರೆದುಕೊಂಡು ಹೋಗಿ ಚೂರಿಯಿಂದ 17ರ ಹರೆಯದ ವಿದ್ಯಾರ್ಥಿಯ ಹೊಟ್ಟೆ,

ಮಂಗಳೂರು: ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ| ಮಾತನಾಡಲು ಕರೆದವರು ಚೂರಿಯಿಂದ ತಿವಿದರು Read More »

ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕ ಸಿಬ್ಬಂದಿಯನ್ನು ನೇಮಿಸಿ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ಸಮಗ್ರ ನ್ಯೂಸ್: ಬ್ಯಾಂಕ್‌ಗಳಿಗೆ ಸ್ಥಳೀಯ ಭಾಷೆ ಮಾತನಾಡಬಲ್ಲ ಸಿಬ್ಬಂದಿಯನ್ನು ನೇಮಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ. ನೀವು ವ್ಯಾಪಾರ ಮಾಡಲು ಅಲ್ಲಿದ್ದೀರಿ. ನಾಗರಿಕರಲ್ಲಿ ಕೆಲವು ಮೌಲ್ಯ ವ್ಯವಸ್ಥೆಯನ್ನು ಬೆಳೆಸಲು ಅಲ್ಲ ಎಂದು ಮುಂಬೈನಲ್ಲಿ ನಡೆದ ಭಾರತೀಯ ಬ್ಯಾಂಕ್‌ಗಳ ಸಂಘದ 75ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಪ್ರಾದೇಶಿಕ ಭಾಷೆಯಲ್ಲಿ ಮಾತನಾಡದ ಸಿಬ್ಬಂದಿಯನ್ನು ನೀವು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಹೊಂದಿದ್ದು ಅಲ್ಲಿ ನೀವು ಹಿಂದಿ ಮಾತನಾಡುವುದಿಲ್ಲ, ಬಹುಶಃ ನೀವು ಭಾರತೀಯರಲ್ಲ ಎಂದು

ಬ್ಯಾಂಕುಗಳಿಗೆ ಸ್ಥಳೀಯ ಭಾಷಿಕ ಸಿಬ್ಬಂದಿಯನ್ನು ನೇಮಿಸಿ – ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ Read More »

ಹಸುಗೂಸನ್ನು ಪಾಳು ಬಾವಿಗೆಸೆದ ಕ್ರೂರಿ‌ತಾಯಿ| ಹಾವಿನ ಪಕ್ಕದಲ್ಲಿ ಬಿದ್ರೂ ಬದುಕಿ ಬಂದ ಕಂದಮ್ಮ

ಸಮಗ್ರ ನ್ಯೂಸ್: ಆಗ ತಾನೇ ಜನಿಸಿದ ಹಸುಗೂಸನ್ನು ಕ್ರೂರಿ ತಾಯಿಯೊಬ್ಬಳು ಪಾಳು ಬಾವಿಗೆ ಎಸೆದು ಹೋಗಿರುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಅಡಿ ಆಳ ಇರುವ ಪಾಳು ಬಾವಿಗೆ ಗಂಡು ಮಗುವನ್ನು ಹೆತ್ತ ತಾಯಿಯೇ ಎಸೆದಿದ್ದಾಳೆ. ಈ ಮಧ್ಯೆ ತೋಟಕ್ಕೆ ಹೋಗುತ್ತಿದ್ದ ರೈತ ಮಹಿಳೆಯೊಬ್ಬರು ಬಾವಿಯಲ್ಲಿ ಮಗು ಅಳುತ್ತಿರುವ ಶಬ್ಧ ಕೇಳಿ ಇಣುಕಿ ನೋಡಿದಾಗ ಮಗು ಇರುವುದನ್ನು ನೋಡಿದ್ದಾರೆ. ನಂತರ ಕೂಡಲೇ ಈ ವಿಚಾರವನ್ನು

ಹಸುಗೂಸನ್ನು ಪಾಳು ಬಾವಿಗೆಸೆದ ಕ್ರೂರಿ‌ತಾಯಿ| ಹಾವಿನ ಪಕ್ಕದಲ್ಲಿ ಬಿದ್ರೂ ಬದುಕಿ ಬಂದ ಕಂದಮ್ಮ Read More »

ಮೋದಿ ಜನ್ಮದಿನ ಪ್ರಯುಕ್ತ ಮಂಗಳೂರು ಉತ್ತರ ಯುವಮೋರ್ಚಾದಿಂದ ರಕ್ತದಾನ

ಸುರತ್ಕಲ್: ಬಿಜೆಪಿ ಯುವಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ ಇದರ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮ ದಿನಾಚರಣೆಯ ಪ್ರಯುಕ್ತ ರಕ್ತದಾನ ಶಿಬಿರ, ಅಂಗಾಂಗ ದಾನ ನೋಂದಣಿ, ಅಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ವಿತರಣೆ ಕಾರ್ಯಕ್ರಮ ಕಾವೂರಿನ ಸೊಸೈಟಿ ಹಾಲ್ ನಲ್ಲಿ ಶನಿವಾರ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು, “ಪ್ರತೀ ವರ್ಷವೂ ದೇಶ ಕಂಡ ಅತ್ಯುನ್ನತ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಹಲವಾರು ಸಾಮಾಜಿಕ ಚಟುವಟಿಕೆಗಳ

ಮೋದಿ ಜನ್ಮದಿನ ಪ್ರಯುಕ್ತ ಮಂಗಳೂರು ಉತ್ತರ ಯುವಮೋರ್ಚಾದಿಂದ ರಕ್ತದಾನ Read More »

ಭಾರೀ ಭೂಕುಸಿತದಲ್ಲಿ 13 ಸಾವು, 10 ಮಂದಿ‌ ಕಣ್ಮರೆ

ಸಮಗ್ರ ನ್ಯೂಸ್: ಪಶ್ಚಿಮ ನೇಪಾಳದ ಅಚಾಮ್ ಜಿಲ್ಲೆಯಲ್ಲಿ ಭಾರಿ ಭೂಕುಸಿತದಿಂದ 13 ಮಂದಿ ಸಾವನ್ನಪ್ಪಿದ್ದಾರೆ, 10 ಮಂದಿ ಕಾಣೆಯಾಗಿದ್ದಾರೆ ಮತ್ತು 10 ಮಂದಿಯನ್ನು ರಕ್ಷಿಸಲಾಗಿದೆ ಎಂದು ಉಪ ಮುಖ್ಯ ಜಿಲ್ಲಾ ಅಧಿಕಾರಿ ದೀಪೇಶ್ ರಿಜಾಲ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ಗೃಹ ಸಚಿವರು ಆದೇಶಿಸಿದ್ದಾರೆ.

ಭಾರೀ ಭೂಕುಸಿತದಲ್ಲಿ 13 ಸಾವು, 10 ಮಂದಿ‌ ಕಣ್ಮರೆ Read More »

ವಾಹನಗಳಲ್ಲಿ ಎಲ್ಇಡಿ ದೀಪ ಬಳಸಿದರೆ 500ರೂ ದಂಡ ಫಿಕ್ಸ್

ಸಮಗ್ರ ನ್ಯೂಸ್ : ಎಲ್ ಇಡಿ (LED) ಬಳಸುವ ವಾಹನ ಸವಾರರಿಗೆ ಸಾರಿಗೆ ಸಚಿವ ಶ್ರೀರಾಮುಲು ಬಿಗ್ ಶಾಕ್ ನೀಡಿದ್ದು, ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಬಿಜೆಪಿಯ ವೈ.ಎಂ. ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾಹನಗಳಲ್ಲಿ ಎಲ್ ಇಡಿ ದೀಪ ಬಳಸುತ್ತಿರುವ ಸವಾರರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 177ರಡಿ ಪ್ರಕರಣ ದಾಖಲಿಸಿ 500 ರೂ. ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ವಾಹನಗಳಲ್ಲಿ ಎಲ್ಇಡಿ ದೀಪ ಬಳಸಿದರೆ 500ರೂ ದಂಡ ಫಿಕ್ಸ್ Read More »

ಮಂಗಳೂರು; ಅಕ್ರಮ ಮರಳು ಸಾಗಾಟ, ಆರೋಪಿಗಳ ಸೆರೆಹಿಡಿದ ಪೋಲಿಸರು

ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಸಂದೀಪ್ ನೇತೃತ್ವದ ತಂಡ 7ಮಂದಿ ಆರೋಪಿಗಳನ್ನು ಬಂಧಿಸಿ ಮರಳು ಸಾಗಾಟದ ಲಾರಿಯನ್ನು ವಶಪಡಿಸಿಕೊಂಡ ಘಟನೆಯೊಂದು ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ನಡೆದಿದೆ. ತಲಪಾಡಿ ನಿವಾಸಿ ರಿಯಾಜ್, ಕೆ ಸಿ ರೋಡ್ ನಿವಾಸಿ ಅಬೂಬಕರ್, ಸೋಮೇಶ್ವರ ಗ್ರಾಮ ನಿವಾಸಿ ರಘುನಾಥ, ತಲಪಾಡಿ ಚೆಕ್ ಪೋಸ್ಟ್ ನಿವಾಸಿ ರಾಜೇಶ್, ಕುದ್ರು ನಿವಾಸಿಗಳಾದ ಅತುಲ್, ರಾಮಧಾರಿ ಮತ್ತು ಪಂಕಜ್ ಬಂಧಿತ

ಮಂಗಳೂರು; ಅಕ್ರಮ ಮರಳು ಸಾಗಾಟ, ಆರೋಪಿಗಳ ಸೆರೆಹಿಡಿದ ಪೋಲಿಸರು Read More »

ಸೆ.26 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ

ಸಮಗ್ರ ನ್ಯೂಸ್: ‘ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.26 ರಂದು ಹುಬ್ಬಳ್ಳಿಗೆ ಭೇಟಿ ನೀಡಲಿದ್ದು, ಹುಬ್ಬಳ್ಳಿ-ಧಾರವಾಡ ಜನತೆಯ ಪರವಾಗಿ ಮಹಾನಗರ ಪಾಲಿಕೆ ವತಿಯಿಂದ ಪೌರ ಸನ್ಮಾನ ನೀಡಲಾಗುತ್ತದೆ. ಐತಿಹಾಸಿಕ ದಸರಾ ಉದ್ಘಾಟನೆಗಾಗಿ ಸಾಂಸ್ಕೃತಿಕ ನಗರಿ ಮೈಸೂರಿಗೆ 26ರಂದು ಭೇಟಿ ನೀಡಲಿರುವ ಅವರು, ಆ ನಂತರ ಹುಬ್ಬಳ್ಳಿಗೆ ಬರಲಿದ್ದಾರೆ. ಪೌರ ಸನ್ಮಾನ ನಡೆಯಲಿರುವ ಇಲ್ಲಿನ ಜಿಮ್ಖಾನ ಮೈದಾನಕ್ಕೆ ಶುಕ್ರವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮೇಯರ್ ಈರೇಶ ಅಂಚಟಗೇರಿ, ಪೊಲೀಸ್ ಆಯುಕ್ತ ಲಾಭೂ ರಾಮ್ ಭೇಟಿ ನೀಡಿ ಪರಿಶೀಲಿಸಿದರು.

ಸೆ.26 ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನ Read More »