September 2022

ಚಿಕ್ಕಮಗಳೂರು: ಬಸ್ಸಿನಿಂದ ಬಿದ್ದು ನಿಷ್ಕ್ರಿಯಗೊಂಡ ಯುವತಿಯ ಮೆದುಳು| ನೋವಿನ ನಡುವೆಯೂ ಅಂಗಾಂಗ‌ ದಾನಕ್ಕೆ ನಿರ್ಧರಿಸಿದ‌ ಕುಟುಂಬಸ್ಥರು|

ಸಮಗ್ರ ನ್ಯೂಸ್: ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಯುವತಿಯೋರ್ವಳು ಬಸ್ಸಿನಿಂದ ಬಿದ್ದು ಮೆದುಳು ನಿಷ್ಕ್ರಿಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಯುವತಿ ಗಂಭೀರ ಗಾಯಗೊಂಡಿದ್ದು, ಮೆದುಳು ನಿಷ್ಕ್ರಿಯಗೊಂಡ ಕಾರಣ ಯುವತಿಯ ಮನೆಯವರು ನೋವಿನ ನಡುವೆಯೂ ಮಾನವೀಯತೆ ಮೆರೆದಿದ್ದು, ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಈ ಸಂಬಂಧ ಯುವತಿಯ ಹೃದಯವನ್ನು ಕಸಿ ಮಾಡಲು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಜೀವಂತ ಹೃದಯವನ್ನು ವಿಶೇಷ ಹೆಲಿಕಾಪ್ಟರ್ ಮೂಲಕ ರವಾನಿಸಲಾಗಿದೆ. ಒಟ್ಟು 9 ಅಂಗಾಂಗಗಳನ್ನು ದಾನ ಮಾಡಲಾಗುತ್ತಿದ್ದು, ಯುವತಿಯ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

ಚಿಕ್ಕಮಗಳೂರು: ಬಸ್ಸಿನಿಂದ ಬಿದ್ದು ನಿಷ್ಕ್ರಿಯಗೊಂಡ ಯುವತಿಯ ಮೆದುಳು| ನೋವಿನ ನಡುವೆಯೂ ಅಂಗಾಂಗ‌ ದಾನಕ್ಕೆ ನಿರ್ಧರಿಸಿದ‌ ಕುಟುಂಬಸ್ಥರು| Read More »

ಸುಧಾ ಮೂರ್ತಿಯವರು ಪಿಎಂ ಕೇರ್ಸ್ ಫಂಡ್ ಟ್ರಸ್ಟ್ ಗೆ ನೇಮಕ

ಸಮಗ್ರ ನ್ಯೂಸ್:  ಪಿಎಂ ಕೇರ್ಸ್ ಫಂಡ್ ಟ್ರಸ್ಟಿಯಾಗಿ ರತನ್ ಟಾಟಾ, ಸಲಹಾ ಮಂಡಳಿಗೆ ಸುಧಾ ಮೂರ್ತಿ ಅವರು ನೇಮಕಗೊಂಡಿದ್ದಾರೆ. ಪ್ರಧಾನ ಮಂತ್ರಿಗಳ ಕಾರ್ಯಾಲಯ ಈ ಟ್ರಸ್ಟಿಗಳನ್ನು ಪಿಎಂ ಕೇರ್ಸ್ ಫಂಡ್​ನ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸಲು ಸ್ವಾಗತಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಿಎಂ ಕೇರ್ಸ್ ಫಂಡ್​ ಇತರ ಟ್ರಸ್ಟಿಗಳಾಗಿದ್ದಾರೆ. ಪ್ರಧಾನಮಂತ್ರಿ ಕೇರ್ಸ್ ಫಂಡ್ ಟ್ರಸ್ಟ್ಗೆ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಕೆ ಟಿ ಥಾಮಸ್, ಮಾಜಿ

ಸುಧಾ ಮೂರ್ತಿಯವರು ಪಿಎಂ ಕೇರ್ಸ್ ಫಂಡ್ ಟ್ರಸ್ಟ್ ಗೆ ನೇಮಕ Read More »

ಶ್ರೀ ಮಲೆಮಹದೇಶ್ವರ ಸ್ವಾಮಿ ಹೆಸರಿನ ಫೇಸ್‍ಬುಕ್ ಪೇಜ್ ಹ್ಯಾಕ್/ಕಿಡಿಗೇಡಿಗಳಿಂದ ಅಶ್ಲೀಲ ವೀಡಿಯೋ ಅಪ್‍ ಲೋಡ್

ಚಾಮರಾಜನಗರ: ಅಪಾರ ಭಕ್ತ ಸಾಗರವನ್ನೇ ಹೊಂದಿರುವ ಶ್ರೀ ಮಲೆಮಹದೇಶ್ವರ ಸ್ವಾಮಿ ಹೆಸರಿನ ಫೇಸ್‍ಬುಕ್ ಪೇಜ್ ಹ್ಯಾಕ್ ಮಾಡಿ ಅಶ್ಲೀಲ ವೀಡಿಯೋಗಳನ್ನು ಅಪ್‍ಲೋಡ್ ಮಾಡುವ ಮೂಲಕ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. 2013ರಲ್ಲಿ ಕೊಳ್ಳೆಗಾಲದ ಸಂಜಯ್ ಎಂಬುವರು ಕ್ರಿಯೇಟ್ ಮಾಡಿದ್ದ ಶ್ರೀ ಮಲೆಮಹದೇಶ್ವರ ಸ್ವಾಮಿ ಫೇಸ್‍ಬುಕ್ ಪೇಜ್‍ನಲ್ಲಿ 17 ಸಾವಿರ ಫಾಲೋವರ್ಸ್ ಇದ್ದಾರೆ. ಶ್ರೀ ಮಲೆಮಹದೇಶ್ವರ ಸ್ವಾಮಿಯ ಮಹಿಮೆ, ಪೂಜೆ ಪುನಸ್ಕಾರಗಳ ಬಗ್ಗೆ ಮಾಹಿತಿ ಅಪ್ಲೋಡ್ ಆಗುತ್ತಿದ್ದ ಪೇಜ್‍ನಲ್ಲಿಗ ದುಷ್ಕರ್ಮಿಗಳು ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದ್ದಾರೆ.  ಕಳೆದ ಎರಡು ತಿಂಗಳ ಹಿಂದೆ

ಶ್ರೀ ಮಲೆಮಹದೇಶ್ವರ ಸ್ವಾಮಿ ಹೆಸರಿನ ಫೇಸ್‍ಬುಕ್ ಪೇಜ್ ಹ್ಯಾಕ್/ಕಿಡಿಗೇಡಿಗಳಿಂದ ಅಶ್ಲೀಲ ವೀಡಿಯೋ ಅಪ್‍ ಲೋಡ್ Read More »

ಭಾರತದ ಶ್ರೀಮಂತ ಮಹಿಳೆಯಾದ ನೈಕಾ ಕಂಪನಿ ಸಂಸ್ಥಾಪಕಿ ಫಲ್ಗುಣಿ ನಾಯರ್

ಸಮಗ್ರ ನ್ಯೂಸ್: ನೈಕಾ ಕಂಪನಿ ಸಂಸ್ಥಾಪಕಿ ಫ‌ಲ್ಗುಣಿ ನಾಯರ್‌ ಅವರು ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ಅವರನ್ನು ಹಿಂದಿಕ್ಕಿ ಸ್ವಂತ ಬಲದಿಂದ ಮೇಲೆ ಬಂದ ಭಾರತದ ಶ್ರೀಮಂತ ಮಹಿಳೆಯಾಗಿದ್ದಾರೆ. ಭಾರತದ ಶ್ರೀಮಂತರ ಪಟ್ಟಿ-2022ಯನ್ನು ಐಐಎಫ್‌ಎಲ್‌ ವೆಲ್ತ್‌ ಹುರುನ್‌ ಬಿಡುಗಡೆಗೊಳಿಸಿದ್ದು, ಅದರ ಪ್ರಕಾರ ಭಾರತದ ಶ್ರೀಮಂತ ಮಹಿಳೆಯಾಗಿ ಫ‌ಲ್ಗುಣಿ ನಾಯರ್‌ ಹೊರಹೊಮ್ಮಿದ್ದಾರೆ. ಹಾಗೆಯೇ ಈ ವರ್ಷ ಫ‌ಲ್ಗುಣಿ ನಾಯರ್‌ ಮತ್ತು ಅವರ ಕುಟುಂಬದ ಆಸ್ತಿ ಮೌಲ್ಯ 30,000 ಕೋಟಿ ರೂ.ಗಳಷ್ಟು ಹೆಚ್ಚಿದ್ದು, ಫ‌ಲ್ಗುಣಿ ನಾಯರ್‌ ಅವರ ನಂತರದ

ಭಾರತದ ಶ್ರೀಮಂತ ಮಹಿಳೆಯಾದ ನೈಕಾ ಕಂಪನಿ ಸಂಸ್ಥಾಪಕಿ ಫಲ್ಗುಣಿ ನಾಯರ್ Read More »

ನಾಳೆಯಿಂದ ಮತ್ತೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ

ಸಮಗ್ರ ನ್ಯೂಸ್: ನಾಳೆಯಿಂದ ಮತ್ತೆ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಭಾಗಗಳಲ್ಲಿ ನಾಳೆಯಿಂದ ಚದುರಿದ ರೀತಿ ಮಳೆಯಾಗುವ ಸಾಧ್ಯತೆಗಳಿವೆ. ಶುಕ್ರವಾರ ಮತ್ತು ಶನಿವಾರ ರಾಜ್ಯದ ದಕ್ಷಿಣ ಒಳನಾಡು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ.

ನಾಳೆಯಿಂದ ಮತ್ತೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ Read More »

ಮಂಗಳೂರು: ಎಸ್‍ಡಿಪಿಐ ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ ಎನ್‍ಐಎ ಅಧಿಕಾರಿಗಳು

ಸಮಗ್ರ ನ್ಯೂಸ್: ಎನ್‍ಐಎ ಅಧಿಕಾರಿಗಳು ಸೆ.22 ಎಸ್‍ಡಿಪಿಐ ಕಚೇರಿಯ ಬಾಗಿಲು ಧ್ವಂಸ ಮಾಡಿ ಕಚೇರಿಯ ಒಳಗೆ ನುಗ್ಗಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಎನ್‍ಐಎ ಅಧಿಕಾರಿಗಳು ಎಸ್‍ಡಿಪಿಐ ಕಚೇರಿಯ ಬೀಗವನ್ನು ಬ್ಲೇಡ್‍ನಿಂದ ಕಟ್ ಮಾಡಿ ಕಚೇರಿಯ ಶಟರ್ ಒಪನ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಧಿಕಾರಿಗಳು ಒಳಭಾಗದ ಡೋರ್‌ನ ಗಾಜನ್ನು ಪುಡಿ ಮಾಡಿದ್ದಾರೆ. ಮಂಗಳೂರಿನ ಕಚೇರಿಯೊಳಗೆ ನುಗ್ಗಿದ ಎನ್‍ಐಎ ಅಧಿಕಾರಿಗಳು ಅಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಂಪ್ಯೂಟರ್ ಸಿಪಿಯುನ ಹಾರ್ಡ್‍ಡಿಸ್ಕ್‌ನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ

ಮಂಗಳೂರು: ಎಸ್‍ಡಿಪಿಐ ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ ಎನ್‍ಐಎ ಅಧಿಕಾರಿಗಳು Read More »

ರಸ್ತೆ ಗುಂಡಿಗಳ ಮಧ್ಯೆ ವೆಡ್ಡಿಂಗ್ ಪೋಟೋಶೂಟ್….!!

ಕೇರಳ: ವಧು-ವರ ಇಬ್ಬರೂ ವೆಡ್ಡಿಂಗ್‌ ಫೋಟೋಶೂಟ್‌ ಹೇಗೆ ಮಾಡಿಸೋದು ಅಂತಾ ಪ್ರೀ ಪ್ಲಾನ್‌ ಮಾಡ್ಕೊಂಡಿರ್ತಾರೆ. ಇದಕ್ಕಾಗಿ ತಮ್ಮ ನೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ತಾರೆ. ಆದ್ರೆ, ಇಲ್ಲೊಬ್ಬ ವಧು ಗುಂಡಿಗಳಿಂದ ಕೂಡಿದ ರಸ್ತೆ ರಸ್ತೆಯಲ್ಲಿ ಫೋಟೋಶೂಟ್‌ ಮಾಡಿಸಿದ್ದಾರೆ. ಹೌದು, ಕೇರಳದ ವಧುಯೊಬ್ಬರು ತಮ್ಮ ಮದುವೆಯ ಚಿತ್ರೀಕರಣವನ್ನು ಸ್ಮರಣೀಯವಾಗಿಸಲು ನಿರ್ಧರಿಸಿ, ಆ ಪ್ರದೇಶದಲ್ಲಿನ ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಿದ್ದಾರೆ. ಇದೀಗ ವಧು ಮತ್ತು ವಿವಾಹದ ಛಾಯಾಗ್ರಾಹಕರನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಂಪು ಸೀರೆ ಉಟ್ಟ ವಧು ಗುಂಡಿಗಳಿಂದ

ರಸ್ತೆ ಗುಂಡಿಗಳ ಮಧ್ಯೆ ವೆಡ್ಡಿಂಗ್ ಪೋಟೋಶೂಟ್….!! Read More »

ಪುಂಜಾಲಕಟ್ಟೆ: ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಪೋಸ್ಟ್ ಯುವಕ ಬಂಧನ

ಸಮಗ್ರ ನ್ಯೂಸ್: ರಾಜಕೀಯ ವ್ಯಕ್ತಿಗಳ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸುತ್ತಿದ್ದ ಆರೋಪದ ಮೇಲೆ ವಾಮದಪದವು ನಿವಾಸಿಯೋರ್ವರಿಗೆ ಬಂಟ್ವಾಳ ತಾಲೂಕು ದಂಡಾಧಿಕಾರಿ ಡಾ. ಸ್ಮಿತಾರಾಮು ಅವರು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಈತ ಸೋಶಿಯಲ್ ಮಿಡಿಯಾದಲ್ಲಿ ಕಳೆದ ಹಲವು ದಿನಗಳಿಂದ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುತ್ತಿದ್ದ, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪುಂಜಾಲಕಟ್ಟೆ ಪೊಲೀಸರು ಕಳೆದ ಫೆಬ್ರವರಿ ತಿಂಗಳಿನಲ್ಲಿ ಈತನ ಮೇಲೆ ತಹಶೀಲ್ದಾರ್ ಅವರಿಗೆ ಪಿ.ಎ.ಆರ್. ವರದಿಯೊಂದನ್ನು ಸಲ್ಲಿಸಿದ್ದರು. ಈತನ ಮೇಲೆ ಇಂತಹ 5 ಪ್ರಕರಣಗಳಿದ್ದು,

ಪುಂಜಾಲಕಟ್ಟೆ: ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಪೋಸ್ಟ್ ಯುವಕ ಬಂಧನ Read More »

ಪಿರಿಯಾಪಟ್ಟಣ: ಗಂಧದ ಮರ ಕಳ್ಳತನ| ಓರ್ವ ಬಂಧನ, ಮತ್ತೊಬ್ಬ ಪರಾರಿ

ಸಮಗ್ರ ನ್ಯೂಸ್: ಮೀಸಲು ಅರಣ್ಯ ಪ್ರದೇಶದಿಂದ ಗಂಧದ ಮರ ಕಳ್ಳತನ ಮಾಡಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ದೇವರಾಜ ಕಾಲೋನಿಯ ಮಹದೇವ್ ಬಂಧಿತ ಆರೋಪಿ, ಮತ್ತೊಬ್ಬ ಪರಾರಿಯಾಗಿದ್ದಾನೆ. ಇವರು ಅರನೇನಹಳ್ಳಿ ಮೀಸಲು ಅರಣ್ಯದ ಶ್ರೀಗಂಧದ ಪ್ಲಾಂಟೇಷನ್ ನಿಂದ 5 ಲಕ್ಷ ರೂ. ಬೆಲೆಬಾಳುವ ಸುಮಾರು 45 ಕೆ.ಜಿ ತೂಕದ ಗಂಧದ ಮರದ ತುಂಡನ್ನು ಕದ್ದು ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ಮಾಡಿದ ಅರಣ್ಯ

ಪಿರಿಯಾಪಟ್ಟಣ: ಗಂಧದ ಮರ ಕಳ್ಳತನ| ಓರ್ವ ಬಂಧನ, ಮತ್ತೊಬ್ಬ ಪರಾರಿ Read More »

ಇಂದು ಚಿನ್ನ,ಬೆಳ್ಳಿಯ ಬೆಲೆ ಮತ್ತೆ ಇಳಿಕೆ

ಬೆಂಗಳೂರು: ಭಾರತದಲ್ಲಿ ಏರಿಕೆಯಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ ಇಳಿಕೆಯಾಗಿದೆ. ನಿನ್ನೆ ಏರಿಕೆಯಾಗಿದ್ದ ಬೆಳ್ಳಿಯ ಬೆಲೆ ಇಂದು 600 ರೂ. ಕುಸಿತವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಇಳಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 45,950 ರೂ. ಇದ್ದುದು 45,800 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 50,130 ರೂ. ಇದ್ದುದು 49,960

ಇಂದು ಚಿನ್ನ,ಬೆಳ್ಳಿಯ ಬೆಲೆ ಮತ್ತೆ ಇಳಿಕೆ Read More »