September 2022

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

ಸಮಗ್ರ ನ್ಯೂಸ್ : ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಬುಧವಾರ ಮುಂಜಾನೆ ಸುಮಾರು 3.30 ಕ್ಕೆಬೆಂಗಳೂರಿನ ಇಬ್ಬರು ಹಾಗೂ ಚಿಕ್ಕಮಗಳೂರಿನ ಓರ್ವ ವಿದ್ಯಾರ್ಥಿನಿ ನಿಗೂಢವಾಗಿ ಕಾಣೆಯಾಗಿದ್ದರು. ಘಟನೆ ಸಂಬಂಧ ಕಂಕನಾಡಿಯ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ Read More »

ಐಸಿಸ್ ಗೆ ಭಯೋತ್ಪಾದಕರನ್ನು ನೇಮಿಸುವ ಪಿಎಫ್ಐ ಬ್ಯಾನ್ ಮಾಡಿ| ಪ್ರಧಾನಿಗೆ ಪತ್ರ ಬರೆದ ಮುಸ್ಲಿಂ ಸಂಘಟನೆಗಳು

ಸಮಗ್ರ ನ್ಯೂಸ್: ಐಸಿಸ್ ಗೆ ಭಯೋತ್ಪಾದಕರನ್ನು ನೇಮಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ತ್ವರಿತ ಕ್ರಮವನ್ನು ತೆಗೆದುಕೊಳ್ಳಲು ಪ್ರಧಾನಿ ಮೋದಿಗೆ ಮುಸ್ಲಿಂ ಸಂಘಟನೆಗಳು ಪತ್ರ ಬರೆದಿವೆ. ಈ ಸಂಘಟನೆಗಳಲ್ಲಿ ಸೂಫಿ ಖಾನ್ಖಾಹ್ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಪಾಸ್ಮಾಂಡಾ ಮುಸ್ಲಿಂ ಮಹಾಜ್ ಕೂಡ ಸೇರಿವೆ. ಸೂಫಿ ಖಾನಖಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಕೌಸರ್ ಹಸನ್ ಮಜಿದಿ ಪಿಎಫ್‌ಐ ನಿಷೇಧಿಸುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವರದಿಗಳ ಪ್ರಕಾರ, ಸೂಫಿ ಖಾನ್ಖಾಹ್ ರಾಷ್ಟ್ರೀಯ ಅಧ್ಯಕ್ಷ ಕೌಸರ್

ಐಸಿಸ್ ಗೆ ಭಯೋತ್ಪಾದಕರನ್ನು ನೇಮಿಸುವ ಪಿಎಫ್ಐ ಬ್ಯಾನ್ ಮಾಡಿ| ಪ್ರಧಾನಿಗೆ ಪತ್ರ ಬರೆದ ಮುಸ್ಲಿಂ ಸಂಘಟನೆಗಳು Read More »

ಕಾಬೂಲ್ ಮಸೀದಿ ಬಳಿ ಭಾರೀ ಸ್ಪೋಟ; 10ಕ್ಕೂ ಹೆಚ್ಚು ಮಂದಿ ಸಾವು

ಸಮಗ್ರ ನ್ಯೂಸ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಮಸೀದಿಯೊಂದರ ಬಳಿ ಸ್ಫೋಟ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ನಿಖರವಾದ ಸಂಖ್ಯೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಸೀದಿ ಬಳಿಯ ಮುಖ್ಯ ರಸ್ತೆಯಲ್ಲಿ ಸ್ಫೋಟ ಸಂಭವಿಸಿದೆ. ಪೊಲೀಸ್ ತಂಡಗಳು ಸ್ಥಳದಲ್ಲಿದ್ದು, ತನಿಖೆ ನಡೆಯುತ್ತಿವೆ ಎಂದು ಆಂತರಿಕ ಸಚಿವ ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದರು. ಪ್ರಾರ್ಥನೆಯ ನಂತರ ಜನರು ಮಸೀದಿಯಿಂದ ಹೊರ ಬರುತ್ತಿದ್ದ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು

ಕಾಬೂಲ್ ಮಸೀದಿ ಬಳಿ ಭಾರೀ ಸ್ಪೋಟ; 10ಕ್ಕೂ ಹೆಚ್ಚು ಮಂದಿ ಸಾವು Read More »

ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಆರೋಪ| ಮುರುಘಾ ಶ್ರೀ ಜಾಮೀನು ಅರ್ಜಿ ವಜಾ; ಜೈಲುವಾಸ ಕಂಟಿನ್ಯೂ…

ಸಮಗ್ರ ನ್ಯೂಸ್: ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಆರೋಪದಡಿ ಜೈಲು ಪಾಲಾಗಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಇದರಿಂದ ಮುರಾಘ ಶ್ರೀಗಳ ಜೈಲುವಾಸ ಮತ್ತೆ ಮುಂದುವರೆದಿದೆ. ಚಿತ್ರದುರ್ಗ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮುರುಘಾ ಶ್ರೀಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಸೆಪ್ಟೆಂಬರ್ 27ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳು ಸದ್ಯ ಶಿವಮೊಗ್ಗದ ಮೆಗ್ಗಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 19ಕ್ಕೆ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ

ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಆರೋಪ| ಮುರುಘಾ ಶ್ರೀ ಜಾಮೀನು ಅರ್ಜಿ ವಜಾ; ಜೈಲುವಾಸ ಕಂಟಿನ್ಯೂ… Read More »

ಚಿಕ್ಕಮಂಗಳೂರು: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ/ಕಿಡಿಗೇಡಿಗಳನ್ನು ತಕ್ಷಣ ಬಂಧಿಸದಿದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ: ಪಿ.ಸುಂದರ ಪಾಟಾಜೆ,

ಸಮಗ್ರ ನ್ಯೂಸ್: ಚಿಕ್ಕಮಂಗಳೂರು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು ತಪ್ಪಿದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ. ಚಿಕ್ಕಮಂಗಳೂರು ನಗರದ ಹನುಮಂತ ವೃತ್ತದಲ್ಲಿ ಹಾಕಿರುವಂತ ಪ್ಲೆಕ್ಸ್ ನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಆಗಿರುವುದನ್ನು ಅಂಬೇಡ್ಕರ್ ರಕ್ಷಣಾ ವೇದಿಕೆ ಖಂಡಿಸುತ್ತದೆ. ಆದ್ದರಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದಂತ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು, ಇಲ್ಲದಿದ್ದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಉಗ್ರ ಪ್ರತಿಭಟನೆ ಮಾಡುವುದಾಗಿ ಮಾಧ್ಯಮ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷರು

ಚಿಕ್ಕಮಂಗಳೂರು: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ/ಕಿಡಿಗೇಡಿಗಳನ್ನು ತಕ್ಷಣ ಬಂಧಿಸದಿದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ: ಪಿ.ಸುಂದರ ಪಾಟಾಜೆ, Read More »

ಮಿತವಾದ ಬಿಯರ್ ಸೇವನೆಯಿಂದ ಇದೆ ಹಲವು ಲಾಭ| ಆದರೆ ಅದು ಅತಿಯಾಗದಂತೆ ನೋಡ್ಕೊಳ್ಳಿ!

ಸಮಗ್ರ ಡಿಜಿಟಲ್ ಡೆಸ್ಕ್: ಮಿತವಾಗಿ ಆಲ್ಕೋಹಾಲ್ ಕುಡಿಯುವುದು ಹಾನಿಕಾರಕವಲ್ಲ ಆದರೆ ಪ್ರಯೋಜನಕಾರಿ ಎಂದು ಅನೇಕ ಆರೋಗ್ಯ ಅಧ್ಯಯನಗಳು ಮಾಹಿತಿ ನೀಡುತ್ತಿದೆ. ಒತ್ತಡವನ್ನು ಕಡಿಮೆ ಮಾಡಲು ಅಥವಾ ಸ್ನೇಹಿತರೊಂದಿಗೆ ಪಾರ್ಟಿಯ ಸಮಯದಲ್ಲಿ ಅನೇಕ ಜನರು ಬಿಯರ್ ಕುಡಿಯುತ್ತಾರೆ. ಆದಾಗ್ಯೂ, ಬಿಯರ್ ಅನ್ನು ಮಿತವಾಗಿ ಸೇವಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ. ಬಿಯರ್ ನ ಸಾಧಕ ಬಾಧಕಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಎಂಬುದನ್ನು ನೋಡೋಣ… ಕುಡಿಯುವುದಕ್ಕೂ ಒಂದು ಮಿತಿಯಿದೆ. ಯಾರು ಈ ಪ್ರಮಾಣದಲ್ಲಿ

ಮಿತವಾದ ಬಿಯರ್ ಸೇವನೆಯಿಂದ ಇದೆ ಹಲವು ಲಾಭ| ಆದರೆ ಅದು ಅತಿಯಾಗದಂತೆ ನೋಡ್ಕೊಳ್ಳಿ! Read More »

ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ ಬಾಗಿಲಲ್ಲಿ ಕಾದು ಸುಸ್ತಾದ ಜನ|ಸರ್ವರ್ ಸಮಸ್ಯೆಯಿಂದ ವೃದ್ದರು, ಮಹಿಳೆಯರ ಪರದಾಟ

ಸಮಗ್ರ ನ್ಯೂಸ್: ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರದಾರರು ಪರದಾಡಿದ ಘಟನೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಸಮೀಪದ ಅಬ್ರುಗುಡಿಗೆಯಲ್ಲಿ ನಡೆದಿದೆ. ಕಳೆದ ಕೆಲದಿನಗಳಿಂದ ಸರ್ವರ್ ಸಮಸ್ಯೆಯಿಂದ ಪಡಿತರದಾರರು ನ್ಯಾಯಬೆಲೆ ಅಂಗಡಿಯಲ್ಲಿ ಸಂಜೆಯವರೆಗೂ ಕಾದು ಹಿಂದಿರುಗುವಂತಾಗಿದೆ.ಈ ಭಾಗದಲ್ಲಿ ಬಹುತೇಕರೂ ಕೂಲಿ ಕಾರ್ಮಿಕರಾಗಿದ್ದು ಕೆಲಸಕ್ಕೆ ರಜೆ ಮಾಡಿ ನ್ಯಾಯಬೆಲೆ ಅಂಗಡಿಗೂ ಬಂದರೂ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಸಾಧ್ಯವಾಗಿಲ್ಲ. ಹಳ್ಳಿಗಾಡು ಪ್ರದೇಶದಿಂದ ಬರುವ ಮಹಿಳೆಯರು, ವೃದ್ದರು ದಿನಗಟ್ಟಲೆ ನ್ಯಾಯಬೆಲೆ ಅಂಗಡಿ ಬಾಗಿಲು ಕಾಯುವಂತಾಗಿದೆ. ಅರಮನೆ ತಲಗೂರು ಗ್ರಾಮದ ವೃದ್ದೆ ಸುಂದರಮ್ಮ‌

ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ ಬಾಗಿಲಲ್ಲಿ ಕಾದು ಸುಸ್ತಾದ ಜನ|ಸರ್ವರ್ ಸಮಸ್ಯೆಯಿಂದ ವೃದ್ದರು, ಮಹಿಳೆಯರ ಪರದಾಟ Read More »

“PAY CM” ಪೋಸ್ಟರ್ ಅಂಟಿಸಿದ ಕೈ ನಾಯಕರು| ಡಿಕೆಶಿ, ಸಿದ್ದರಾಮಯ್ಯ ಪೊಲೀಸ್ ವಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮೂರ್ನಾಲ್ಕು ದಿನಗಳಿಂದ PAYCM ಪೋಸ್ಟರ್‌ ವಿವಾದ ಬೆನ್ನಲ್ಲೇ ಮತ್ತೆ ಬೆಂಗಳೂರಿನಲ್ಲಿ ರೇಸ್‌ಕೋರ್ಸ್‌ ರಸ್ತೆಯಿಂದ ಕ್ಯಾಂಪೇನ್ ಶುರುವಾಗಿದ್ದು, ಪೋಸ್ಟರ್‌ ಅಂಟಿಸಿದ ಬೆನ್ನಲ್ಲೆ ಪೊಲೀಸರು ಪೋಸ್ಟರ್‌ ಹರಿದು ಹಾಕಿದ್ದಾರೆ. ರೇಸ್‌ಕೋರ್ಸ್‌ ರಸ್ತೆಯ ಕಾಂಪೌಂಡ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ PAYCM ಪೋಸ್ಟರ್‌ ಅಂಟಿಸುತ್ತಿದ್ದಂತೆ, ಪೊಲೀಸರ ಹರಿದು ಹಾಕಿದ್ದಾರೆ. ಬಳಿಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಈ ಸರ್ಕಾರ 40% ಭ್ರಷ್ಟಾಚಾರ ನಡೆಸುತ್ತಿದೆ. ಸರ್ಕಾರ ಪೊಲೀಸರನ್ನು ಬಳಸಿಕೊಂಡು ನಮ್ಮ ಪೋಸ್ಟರ್‌

“PAY CM” ಪೋಸ್ಟರ್ ಅಂಟಿಸಿದ ಕೈ ನಾಯಕರು| ಡಿಕೆಶಿ, ಸಿದ್ದರಾಮಯ್ಯ ಪೊಲೀಸ್ ವಶ Read More »

ಜಿಮ್ ನಲ್ಲಿ ಶಕ್ತಿ ಪ್ರದರ್ಶಿಸುವ ಮದುಮಗಳ ವೆಡ್ಡಿಂಗ್ ಫೋಟೋ ಶೂಟ್, ಸಕ್ಕತ್ತ್ ವಿಡಿಯೋ ವೈರಲ್

ಸಮಗ್ರ ನ್ಯೂಸ್: ಪ್ರೀ ವೆಡ್ಡಿಂಗ್ ಮತ್ತು ಪೋಸ್ಟ್​ ವೆಡ್ಡಿಂಗ್ ಫೋಟೋಶೂಟ್ ಇದೀಗ ಟ್ರೆಂಡ್ ಆಗಿದ್ದು, ವಿಭಿನ್ನ ಕಾನ್ಸೆಪ್ಟ್ ಮೂಲಕ ಫೋಟೋಶೂಟ್ ಮಾಡ್ತಾರೆ. ನಂತರ ಸೋಶಿಯಲ್ ಮಿಡಿಯಾ ದಲ್ಲಿ ಅಪ್ಲೋಡ್ ಮಾಡಿ ಬಾರಿ ವೈರಲ್ ಆಗುತ್ತದೆ. ಮೊನ್ನೆ ತಾನೇ ರಸ್ತೆ ಗುಂಡಿಗಳಲ್ಲಿ ಕೇರಳದ ಮದುಮಗಳ ಪೋಟೋ ಶೂಟ್ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಮದುಮಗಳೊಬ್ಬಳು ಜಿಮ್​ನಲ್ಲಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾಳೆ. ಕಾಂಜೀವರಂ ಸೀರೆಯುಟ್ಟು, ಮದುವೆ ಹೆಣ್ಣಿನಂತೆ ಸಿಂಗರಿಸಿಕೊಂಡು ಜಿಮ್​ನಲ್ಲಿ ಕಸರತ್ತು ನಡೆಸಿದ್ದಾಳೆ. 25 ಕೆ.ಜಿ ಡಂಬಲ್ಸ್​​ ಎತ್ತಿಕೊಂಡು ಫೋಟೋಗೆ

ಜಿಮ್ ನಲ್ಲಿ ಶಕ್ತಿ ಪ್ರದರ್ಶಿಸುವ ಮದುಮಗಳ ವೆಡ್ಡಿಂಗ್ ಫೋಟೋ ಶೂಟ್, ಸಕ್ಕತ್ತ್ ವಿಡಿಯೋ ವೈರಲ್ Read More »

ಸಾಧನೆಗೆ ಅಡ್ಡಿಯಾಗದ ದಿವ್ಯಾಂಗ| ದ.ಕನ್ನಡದ ಈ ಯುವಕ ಎಲ್ಲರಿಗೂ ಸ್ಪೂರ್ತಿ

ಸಮಗ್ರ ನ್ಯೂಸ್: ದ.ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ಜನಾರ್ದನ ಗೌಡ ಮತ್ತು ಬೇಬಿ ದಂಪತಿಯ ಪುತ್ರ ಪ್ರದೀಪ್ ಬಿ.ಜೆ (23) ಅವರು ಎಂಡೋಸಲ್ಫಾನ್ ಸಮಸ್ಯೆಯಿಂದ ಅಂಗವೈಕಲ್ಯವನ್ನು ಮೀರಿ ಇತ್ತೀಚೆಗೆ ಶಿವಮೊಗ್ಗದ ತೀರ್ಥಹಳ್ಳಿಯ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗನಾಗಿ ನೇಮಕಗೊಂಡಿದ್ದಾರೆ. ಪ್ರತಿದಿನ ಅವರು ಮೊಣಕಾಲುಗಳ ಮೇಲೆ ನಡೆಯುತ್ತಾ ಕಚೇರಿಗೆ ಪ್ರವೇಶಿಸುತ್ತಿದ್ದಾರೆ. ಪ್ರದೀಪ್ ಅವರ ಕಾಲುಗಳು ಮೊಣಕಾಲಿನ ಕೆಳಗೆ ದುರ್ಬಲವಾಗಿವೆ. ಅವರ ಎಡಗೈಗೂ ಬಲವಿಲ್ಲ. ಆದಾಗ್ಯೂ ದೈಹಿಕ ಅಂಗವೈಕಲ್ಯ ಕಡೆಗಣಿಸಿದ ಅವರು, ಉತ್ತಮ ಶೈಕ್ಷಣಿಕ ದಾಖಲೆಯನ್ನು ಪಡೆದಿದ್ದಾರೆ. ಪ್ರಸ್ತುತ

ಸಾಧನೆಗೆ ಅಡ್ಡಿಯಾಗದ ದಿವ್ಯಾಂಗ| ದ.ಕನ್ನಡದ ಈ ಯುವಕ ಎಲ್ಲರಿಗೂ ಸ್ಪೂರ್ತಿ Read More »