Ad Widget .

ಮಂಗಳೂರು: ಸೆನ್ ಪೊಲೀಸರ ಎದುರು ವಂಚಕ ದಂಪತಿಯ “ಡ್ರಾಮಾ”

ಸಮಗ್ರ ನ್ಯೂಸ್: ಪರಿಸರದ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ನಡೆಸಿ ಸಿಕ್ಕಿಬಿದ್ದಿರುವ ವಂಚಕ ದಂಪತಿ ನಟೋರಿಯಸ್ ಕ್ರಿಮಿನಲ್ ಅಶೋಕ್ ಭಟ್ ಮತ್ತಾತನ ಪತ್ನಿ ದಿವ್ಯಾವತಿ ಭಟ್ ಸದ್ಯ ಸೆನ್ ಪೊಲೀಸ್ ಕಸ್ಟಡಿಯಲ್ಲಿದ್ದು ಪ್ರಕರಣದಿಂದ ಪಾರಾಗಲು ಬೇರೆ ಬೇರೆ ಡ್ರಾಮಾ ಮಾಡುತ್ತಿರುವ ವಿಚಾರ ಮಾಧ್ಯಮಕ್ಕೆ ಲಭಿಸಿದೆ.

Ad Widget . Ad Widget .

ಸುರತ್ಕಲ್ ಮತ್ತು ಕಟೀಲಿನಲ್ಲಿ ಭಾರ್ಗವಿ ಫೈನಾನ್ಸ್ ಹೊಂದಿದ್ದ ಅಶೋಕ್ ಭಟ್ ಸುಮಾರು 15 ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿದ್ದಾರೆ. ಈ ಬಗ್ಗೆ ದೀಪಕ್ ಶೆಟ್ಟಿ ಎಂಬವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Ad Widget . Ad Widget .

ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು ಈ ವೇಳೆ ತಾವು ಫಂಡ್ ಇರಿಸಿಯೇ ಇಲ್ಲ, ಬದಲಿಗೆ ಅನೇಕರಿಂದ ಲಕ್ಷಾಂತರ ರೂ. ಬಡ್ಡಿಗೆ ಹಣ ಪಡೆದಿದ್ದೇವೆ. ಅದಕ್ಕೆ ಬಡ್ಡಿಯನ್ನು ಕೂಡಾ ಪಾವತಿಸಿದ್ದು ಆದರೆ ಅಸಲು ಪಾವತಿಸಲು ಆಗಿಲ್ಲ, ನಮ್ಮ ಬಳಿ ಹಣವಿಲ್ಲ ಎಂದೆಲ್ಲ ನಾಟಕವಾಡುತ್ತಿದ್ದು ಇವರ ನಾಟಕ ನೋಡಿ ಪೊಲೀಸರೇ ಸುಸ್ತಾಗಿದ್ದಾರಂತೆ.

ಅಶೋಕ್ ಭಟ್, ಪತ್ನಿ ವಿದ್ಯಾವತಿ ಭಟ್ ಮತ್ತು ಮಗಳು ಪ್ರಿಯಾಂಕಾ ಭಟ್ ನಡೆಸಿರುವ ವಂಚನೆ ವಿರುದ್ಧ ಹಣ ಕಳೆದುಕೊಂಡಿರುವ ಸಂತ್ರಸ್ತರು ಒಗ್ಗಟ್ಟಾಗಿದ್ದು ಆರೋಪಿ ಫಂಡ್ ಇರಿಸಿದ್ದ ಬಗ್ಗೆ ಮತ್ತು ಹಣ ನೀಡಿದ್ದಕ್ಕೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಈಗಾಗಲೇ ಸೆನ್ ಪೊಲೀಸರಿಗೆ ನೀಡಿದ್ದು ಆರೋಪಿಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಅಶೋಕ್ ಭಟ್ ಕಮ್ಯುನಲ್ ಗೂಂಡಾ ಆಗಿದ್ದು ಹಿಂದೊಮ್ಮೆ ಕೋಮು ಗಲಭೆಗಳಲ್ಲಿ ತೊಡಗಿದ್ದಕ್ಕೆ ಗಡಿಪಾರು ಆಗಿದ್ದ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಈತನ ಕೊಲೆಗೂ ಯತ್ನಿಸಲಾಗಿತ್ತು. ಹತ್ತಾರು ಮತೀಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ಆಗಿರುವ ಕಾರಣ ಸಂತ್ರಸ್ತರಲ್ಲಿ ಅನೇಕರು ಆತನ ವಿರುದ್ಧ ದೂರು ನೀಡುವುದಕ್ಕೂ ಭಯ ಪಡುತ್ತಿದ್ದಾರೆ. ಈಗಾಗಲೇ ಸಂತ್ರಸ್ತರು ಶಾಸಕ ಭರತ್ ಶೆಟ್ಟಿ ಅವರಿಗೆ ಮನವಿಯನ್ನು ಸಲ್ಲಿಸಿದ್ದು ಜಿಲ್ಲಾಧಿಕಾರಿ ಅವರಿಗೂ ದೂರು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಆರೋಪಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಲ್ಲದೆ ಸಂತ್ರಸ್ತರಿಗೆ ಕೊಲೆ ಬೆದರಿಕೆ ಒಡ್ದುತ್ತಿದ್ದು ಪೊಲೀಸ್ ಇಲಾಖೆ ತಮಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *