Ad Widget .

ಮಂಗಳೂರು: ಇನ್ನೂ ಪತ್ತೆಯಾಗದ ಕಾಲೇಜು ಡೀನ್

ಸಮಗ್ರ ನ್ಯೂಸ್: ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನ ಡೀನ್ ಅವರು ಸೆಪ್ಟೆಂಬರ್ 25ರಂದು ನಾಪತ್ತೆಯಾಗಿದ್ದರು. ಆದರೆ ಅವರು ಇನ್ನೂ ಪತ್ತೆ ಆಗಿಲ್ಲ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಾ.ಅರ್ಬನ್ ಜೆ ಅರ್ನಾಲ್ಡ್ ಡಿಸೋಜಾ ಅವರು ಭಾನುವಾರ ಬೇಗನೆ ಮನೆಗೆ ಬುರುತ್ತೇನೆ ಎಂದು ಹೇಳಿ ಹಿಂತಿರುಗಿ ಬರಲೇ ಇಲ್ಲ ಎಂದು ದೂರಿನಲ್ಲಿ ದಾಖಲಾಗಿದೆ. ವೆಲೆನ್ಸಿಯಾದಲ್ಲಿನ ಅವರ ಮನೆಯಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

Ad Widget . Ad Widget .

ವಿವಿಧ ಮೂಲಗಳ ಪ್ರಕಾರ, ಡಾ.ಡಿಸೋಜಾ ಅವರು ತಮ್ಮ ಹೆಂಡತಿಗೆ ಹತ್ತಿರದ ಅಂಗಡಿಗೆ ಹೋಗುವುದಾಗಿ ಹೇಳಿ ಭಾನುವಾರ ತಡರಾತ್ರಿ ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಟರು. ಅಂದಿನಿಂದ ಅವರು ನಾಪತ್ತೆಯಾಗಿದ್ದು, ನಂತರ ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ. ಆತನ ಮೊಬೈಲ್ ಫೋನ್ ಸ್ಥಳವನ್ನು ಕೊನೆಯದಾಗಿ ಉಳ್ಳಾಲ ಬೀಚ್ ಬಳಿಯ ಸ್ಥಳದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ನಡೆಸುತ್ತಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *