Ad Widget .

ಕ್ಷುಲ್ಲಕ ಕಾರಣಕ್ಕೆ ಗೆಳತಿಯ ಗುಂಡಿಕ್ಕಿ ಕೊಂದ| ಪರಾರಿಯಾಗಲು ಯತ್ನಿಸಿದವನ ಪ್ರಾಣ ಕಸಿದ ವಿಧಿ

ಸಮಗ್ರ ನ್ಯೂಸ್: ಯುವಕನೊಬ್ಬ ತನ್ನ ಪ್ರೇಯಸಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ಘಟನೆ ಮುಂಬೈನ ಬೋಯ್ಸರ್ ಎಂಬಲ್ಲಿ ನಡೆದಿದ್ದು, ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

Ad Widget . Ad Widget .

ಇಲ್ಲಿನ ಟೀಮಾ ಆಸ್ಪತ್ರೆಯ ಬಳಿ ಶ್ರೀಕೃಷ್ಣ ಯಾದವ್‌ ಮತ್ತವನ ಪ್ರೇಯಸಿ ನೇಹಾ ಮಹತೋ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಸಿಟ್ಟಿಗೆದ್ದ ಯಾದವ್‌ ತನ್ನ ಜೇಬಿನಿಂದ ಪಿಸ್ತೂಲ್‌ ತೆಗೆದು ನೇಹಾಗೆ ಗುಂಡು ಹಾರಿಸಿದ್ದಾನೆ.

Ad Widget . Ad Widget .

ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಸಾರ್ವಜನಿಕರ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಆರೋಪಿ ಶ್ರೀಕೃಷ್ಣ ಯಾದವ್‌ ಅಲ್ಲಿಂದ ಓಡಿದ್ದಾನೆ.

ಈ ವೇಳೆ ವೇಗವಾಗಿ ಬರ್ತಾ ಇದ್ದ ಯುದ್ಧ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಆತನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತ ಅಷ್ಟರಲ್ಲಿ ಮೃತಪಟ್ಟಿದ್ದ. ಮಾಡಿದ್ದುಣ್ಣೋ ಮಹರಾಯ ಎಂಬಂತೆ ಕ್ಷುಲ್ಲಕ ಕಾರಣಕ್ಕೆ ಗೆಳತಿಯ ಪ್ರಾಣತೆಗೆದ ಯುವಕನಿಗೆ ವಿಧಿಯೇ ತಕ್ಕ ಶಿಕ್ಷೆ ಕೊಟ್ಟಿದೆ. ಹಾಡಹಗಲಲ್ಲೇ ಈ ಘಟನೆ ನಡೆದಿದೆ.

Leave a Comment

Your email address will not be published. Required fields are marked *