ಮತ್ತೊಂದು ಸ್ನಾನದ ವಿಡಿಯೋ ಲೀಕ್| ಚಂಡೀಗಢ ಮಾದರಿಯಲ್ಲೇ ನಡೆಯಿತು ಈ ಯುವತಿ ಮಾಡಿದ ವಿಕೃತ ಕೃತ್ಯ!!

ಸಮಗ್ರ ನ್ಯೂಸ್: ಹಾಸ್ಟೆಲ್ ನಲ್ಲಿನ ಸಹಪಾಠಿಗಳ ಖಾಸಗಿ ವಿಡಿಯೋವನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಪ್ರಕರಣ ಮಾಸುವ ಮುನ್ನವೇ ತಮಿಳುನಾಡಿನ ಮಧುರೈನಲ್ಲಿ ಇದೇ ರೀತಿಯ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ.

Ad Widget ... ..

ವೈದ್ಯನೊಬ್ಬನ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮಧುರೈನ ಪಿಜಿಯಲ್ಲಿ ವಾಸವಿದ್ದು, ಇದೇ ಪಿಜಿಯಲ್ಲಿದ್ದ ಇತರ ಮಹಿಳೆಯರ ಸ್ನಾನ ಮಾಡುವ, ಬಟ್ಟೆ ಬದಲಿಸುವ ವಿಡಿಯೋವನ್ನು ರಹಸ್ಯವಾಗಿ ಚಿತ್ರೀಕರಿಸಿ ಅದನ್ನು ತನ್ನ ಪ್ರಿಯಕರನಾಗಿದ್ದ ವೈದ್ಯನಿಗೆ ಕಳುಹಿಸಿ ಕೊಟ್ಟಿರುವುದು ಬೆಳಕಿಗೆ ಬಂದಿದೆ.

Ad Widget

ರಾಮನಾಥಪುರಂನ ವೈದ್ಯ ಆಶಿಕ್ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದ ಜನನಿ ಎಂಬಾಕೆ ಇಂತಹ ಹೀನ ಕೃತ್ಯ ಮಾಡಿದ್ದು, ಈ ವಿಡಿಯೋಗಳನ್ನು ಪ್ರಿಯಕರನೂ ಆಗಿದ್ದ ಆಶಿಕ್ ಗೆ ಕಳುಹಿಸಿದ್ದಾಳೆ. ಈಕೆ ಬಗ್ಗೆ ಅನುಮಾನಗೊಂಡಿದ್ದ ಕೆಲವರು ಈಕೆಯ ಮೊಬೈಲ್ ಪರಿಶೀಲಿಸಿದಾಗ ಈ ಕೃತ್ಯ ಬಯಲಾಗಿದೆ.

ಇದೀಗ ಠಾಣೆಗೆ ದೂರು ನೀಡಲಾಗಿದ್ದು, ವೈದ್ಯ ಆಶಿಕ್ ಹಾಗೂ ಆತನ ಗೆಳತಿ ಜನನಿಯನ್ನು ಬಂಧಿಸಿರುವ ಮಧುರೈನ ಅಣ್ಣಾ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *