ಪಿಎಫ್ಐ, ಎಸ್ಡಿಪಿಐ ಬ್ಯಾನ್ ಮಾಡಲು ಶಾಸಕ ಖಾದರ್ ನನ್ನ ಬಳಿ ಕಣ್ಣೀರು ಹಾಕಿದ್ದರು – ನಳಿನ್ ಕುಮಾರ್

ಸಮಗ್ರ ನ್ಯೂಸ್: ಯು.ಟಿ ಖಾದರ್ ಅವರೇ ನಮ್ಮ ಬಳಿ ಬಂದು ಎಸ್‍ಡಿಪಿಐ , ಪಿಎಫ್‍ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಕಣ್ಣೀರು ಹಾಕಿದ್ದರು. ಇದಕ್ಕೆ ನನ್ನ ಬಳಿ ಸಾಕ್ಷಿ ಆಧಾರಗಳಿವೆ ಎಂದು ಎಲ್ಲಾ ಸಂಘಟನೆಗಳು ಬ್ಯಾನ್ ಅಗಬೇಕು ಎಂಬ ಯು.ಟಿ ಖಾದರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

Ad Widget ... ..

ಚಿಕ್ಕೋಡಿಯಲ್ಲಿ ಮಾತನಾಡಿದ ಅವರು, ಎಸ್‍ಡಿಪಿಐ ಹಾಗೂ ಪಿಎಫ್‍ಐ ಕಾರ್ಯಕರ್ತರು ಯು.ಟಿ ಖಾದರ್ ಅವರನ್ನೇ ಹತ್ಯೆ ಮಾಡಲು ಮುಂದಾಗಿದ್ದರು. ಧಾರ್ಮಿಕ ಸಂಘಟನೆಯ ಹೆಸರಲ್ಲಿ ನಾವು ಯಾರನ್ನೂ ವಿರೋಧ ಮಾಡಿಲ್ಲ.

Ad Widget

ಕಳೆದ 8 ವರ್ಷಗಳ ಅಧ್ಯಯನದ ನಂತರ ಈ ಕ್ರಮ ಕೈಗೊಂಡಿದ್ದೇವೆ. ಪ್ರವೀಣ್ ಹತ್ಯೆ, ಪ್ರಶಾಂತ್ ಹತ್ಯೆ, ಮೈಸೂರಿನ ಹತ್ಯೆಗಳು, ಚೂರಿ ಇರಿತ, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣಗಳು ಎಲ್ಲಾ ರೀತಿಯಲ್ಲಿ ತನಿಖೆ ಮಾಡಲಾಗಿದೆ. ತನಿಖಾ ಸಂಸ್ಥೆಗಳು ನೀಡಿದ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

Leave a Comment

Your email address will not be published. Required fields are marked *