ತಂದೆಯ ಮರ್ಮಾಂಗಕ್ಕೆ ಸಲಾಕೆಯಿಂದ ಹೊಡೆದು ಕೊಲೆಗೈದ ಪಾಪಿ ಮಗ| ಬುದ್ದಿವಾದ ಹೇಳಿದ್ದೇ ಪ್ರಾಣಕ್ಕೆ ಮುಳುವಾಯಿತೇ?

ಸಮಗ್ರ ನ್ಯೂಸ್: ಸ್ವಂತ ತಂದೆಯ ಮರ್ಮಾಂಗಕ್ಕೆ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ ಪಾಪಿ ಮಗನನ್ನು ಬೆಂಗಳೂರಿನ ಕಾಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಖಾಜಿಸೊನ್ನನಹಳ್ಳಿಯ ನಿವಾಸಿ ಚನ್ನಬಸವರಾಜು ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ಪುತ್ರ ರಾಕೇಶ್ ಕುಮಾರ್ ಬಂಧಿತ ಆರೋಪಿ.

Ad Widget ... ..

ಚನ್ನಬಸವರಾಜು ಅವರ ಹಿರಿಯ ಮಗ ವಕೀಲನಾಗಿದ್ದು, ಮತೊಬ್ಬ ಪುತ್ರ ರಾಕೇಶ್ 10ನೇ ತರಗತಿವರೆಗೆ ಮಾತ್ರ ಓದಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ.

Ad Widget

ಇಬ್ಬರೂ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಳ್ಳೆಯ ವ್ಯಾಸಂಗ ಮಾಡಿದ್ದರೆ ನಿನಗೆ ಉತ್ತಮ ಹುದ್ದೆಯಲ್ಲಿ ಕೆಲಸ ಮಾಡಬಹುದಿತ್ತು ಎಂದು ಚನ್ನಬಸವರಾಜು ತನ್ನ ಪುತ್ರನಾದ ರಾಕೇಶ್​ಗೆ ಬುದ್ದಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಾಕೇಶ್ ಪಕ್ಕದಲ್ಲಿದ್ದ ಸಲಾಕೆಯಿಂದ ತಂದೆ ಚನ್ನಬಸವರಾಜು ಮರ್ಮಾಂಗಕ್ಕೆ ಹಲ್ಲೆ ನಡೆಸಿದ್ದ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಚನ್ನಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಕಾಡುಗೋಡಿ ಠಾಣಾ ಪೊಲೀಸರು ರಾಕೇಶ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Leave a Comment

Your email address will not be published. Required fields are marked *