Ad Widget .

ನೀನು ನೋಡಲು ಕಪ್ಪಾಗಿದ್ಯಾ ಎಂದ ಪತಿಯನ್ನು ಕೊಚ್ಚಿ ಕೊಂದ ಪತ್ನಿ

ಚಂಡೀಗಢ: ನೀನು ನೋಡಲು ಕಪ್ಪಾಗಿದ್ಯಾ, ನಿನ್ನ ಮೈ ಬಣ್ಣ ಕಪ್ಪು ಎಂದು ಹೀಯಾಳಿಸುತ್ತಿದ್ದ ಪತಿಯನ್ನು ಪತ್ನಿ ಹತ್ಯೆಗೈದಿರುವ ಘಟನೆ ಛತ್ತೀಸ್‍ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.

Ad Widget . Ad Widget .

ಅನಂತ್ ಸೋನ್ವಾನಿ ಮೃತ ವ್ಯಕ್ತಿಯಾಗಿದ್ದಾರೆ ಮತ್ತು ಆರೋಪಿ ಪತ್ನಿಯನ್ನು ಸಂಗೀತಾ ಸೋನ್ವಾನಿ ಎಂದು ಗುರುತಿಸಲಾಗಿದೆ. ಸೋಮವಾರ ಸಂಗೀತಾಳನ್ನು ಬಂಧಿಸಿರುವುದಾಗಿ ಪೊಲೀಸ್ ಉಪವಿಭಾಗಾಧಿಕಾರಿ (ಪಟಾನ್ ಪ್ರದೇಶ) ದೇವಾಂಶ್ ರಾಥೋಡ್ ತಿಳಿಸಿದ್ದಾರೆ.

Ad Widget . Ad Widget .

ಈ ಸಂಬಂಧ ವಿಚಾರಣೆ ವೇಳೆ ಅನಂತ್ ನನ್ನನ್ನು ಯಾವಾಗಲೂ ಕೊಳಕಿ ಎಂದು ರೇಗಿಸುತ್ತಿದ್ದ ಮತ್ತು ಕಪ್ಪು ಮೈ ಬಣ್ಣ ಹೊಂದಿರುವ ಕಾರಣ ಆಗಾಗ ನಿಂದಿಸುತ್ತಿದ್ದ. ಇದೇ ವಿಚಾರವಾಗಿ ಹಲವಾರು ಬಾರಿ ನಮ್ಮಿಬ್ಬರ ನಡುವೆ ಜಗಳ ಕೂಡ ನಡೆದಿತ್ತು. ಭಾನುವಾರ ರಾತ್ರಿ ಮತ್ತೆ ಇದೇ ವಿಚಾರವಾಗಿ ಜಗಳ ನಡೆದಿತ್ತು. ಈ ವೇಳೆ ಕೋಪದಿಂದ ಮನೆಯಲ್ಲಿದ್ದ ಕೊಡಲಿಯಿಂದ ನನ್ನ ಪತಿಯ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ನನ್ನ ಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಆರೋಪಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

ಮರುದಿನ ಬೆಳಗ್ಗೆ ತನ್ನ ಪತಿಯನ್ನು ಯಾರೋ ಕೊಂದಿದ್ದಾರೆ ಎಂದು ಗ್ರಾಮಸ್ಥರ ಮುಂದೆ ಹೈಡ್ರಾಮಾ ಮಾಡಿದ್ದಾಳೆ. ಆದರೆ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ. ಅಲ್ಲದೇ ಪತಿಯ ಗುಪ್ತಾಂಗವನ್ನು ಸಹ ಕತ್ತರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನಂತ್ ಸೋನ್ವಾನಿ ತನ್ನ ಮೊದಲ ಪತ್ನಿ ಸಾವಿನ ನಂತರ ಸಂಗೀತಾ ಸೋನ್ವಾನಿಯನ್ನು ಮದುವೆಯಾಗಿದ್ದನು. ಇದೀಗ ಮಹಿಳೆಯ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ಕಾಯಿದೆಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಈ ಘಟನೆ ಸಂಬಂಧ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Leave a Comment

Your email address will not be published. Required fields are marked *