ಚಿಕ್ಕಮಗಳೂರು : ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಹಸುಗಳು ಸಜೀವ ದಹನ| ದುಷ್ಕರ್ಮಿಗಳು ಬೆಂಕಿ ಹಾಕಿರುವ ಶಂಕೆ

ಸಮಗ್ರ ನ್ಯೂಸ್: ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಎರಡು ಹಸುಗಳು ಸಜೀವ ದಹನವಾದ ಘಟನೆ ಅಜ್ಜಂಪುರ ತಾಲೂಕಿನ ಶಿವನಿ ಸಮೀಪದ ಗಡಿರಂಗಾಪುರ ಗ್ರಾಮದಲ್ಲಿ ಸಂಭವಿಸಿದೆ.

Ad Widget ... ..

ಮೂರ್ತಿ ಎಂಬುವರಿಗೆ ಸೇರಿದ ಕೊಟ್ಟಿಗೆಯಾಗಿದ್ದು ಇವರು ನಾಲ್ಲೈದು ದಿನದಿಂದ ಮನೆಯಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ವೇಳೆ ಕೊಟ್ಟಿಗೆಗೆ ಬೆಂಕಿ ತಗುಲಿದೆ. ಈ ಸಂದರ್ಭ ಎರಡು ಹಸುಗಳು ಓಡಿಹೋಗಿ ಜೀವ ಉಳಿಸಿಕೊಂಡಿದ್ದು, ಇನ್ನೆರಡು ಹಸುಗಳು ಸಜೀವ ದಹನವಾಗಿದೆ. ಇನ್ನೂ ಕೊಟ್ಟಿಗೆ ಸಂಪೂರ್ಣ ಸುಟ್ಟು ಕರಕಲಾಗಿದೆ.

Ad Widget

ಇನ್ನೂ ಕೊಟ್ಟಿಗೆಗೆ ಬೆಂಕಿ ತಗಲುವ ಯಾವುದೇ ಸಾಧ್ಯತೆ ಇಲ್ಲದ ಕಾರಣ ದುಷ್ಕರ್ಮಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *