ಬಿಜೆಪಿ ಕಾರ್ಯಕ್ರಮದಲ್ಲಿ ಕನ್ನಡದ ಕಗ್ಗೊಲೆ| ಬ್ಯಾನರ್ ನಲ್ಲಿನ ಕನ್ನಡ ಅಬ್ಬಾ..!

ಸಮಗ್ರ ನ್ಯೂಸ್: ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಫಲಾನುಭವಿಗಳ ಸಮಾರಂಭದ ಬ್ಯಾನರ್ ನಲ್ಲಿ ಕನ್ನಡ ಅಕ್ಷರಗಳ ಕಗ್ಗೊಲೆ ನಡೆದಿದೆ.

Ad Widget ... ..

ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಪ್ರತಿನಿಧಿಸುವ ಕಾಗವಾಡ ವಿಧಾನಸಭೆ ವ್ಯಾಪ್ತಿಯಲ್ಲಿ ನಡೆದ ಫಲಾನುಭವಿಗಳ ಸಭೆಯಲ್ಲಿ ಅಳವಡಿಸಿದ್ದ ಬ್ಯಾನರ್ ನಲ್ಲಿ ಕನ್ನಡ ಅಕ್ಷರಗಳನ್ನು ತಪ್ಪಾಗಿ ಬರೆದಿದ್ದರು. ಕರ್ನಾಟಕ ಜನಪ್ರಿಯ ಯೋಜನೆಗಳಲ್ಲಿ ಒಂದಾದ ಅನ್ನ ಭಾಗ್ಯವನ್ನು ,ಅಣ್ಣಭಾಗ್ಯ,ಹಾಗೂ ಜಲ ಜೀವನ ಮಿಷನ್ ಅನ್ನು “ ಜಲ ಜೀವನ ಮಿಷಣ ” ಎಂದು ಕಿಸಾನ್ ಸಮ್ಮಾನ್ ಯೋಜನೆಯನ್ನು ಕಿಸಾನ್ ಸನ್ಮಾನ ಎಂದು ಬರೆಯುವ ಮೂಲಕ ಕನ್ನಡದ ಕಗ್ಗೊಲೆ ನಡೆದಿದೆ.

Ad Widget

Leave a Comment

Your email address will not be published. Required fields are marked *