Ad Widget .

ಭಾರತೀಯ ಸೇನಾಪಡೆಗಳ ಮುಖ್ಯಸ್ಥರಾಗಿ ಜ.ಅನಿಲ್ ಚೌಹಾಣ್ ನೇಮಕ

ಸಮಗ್ರ ನ್ಯೂಸ್: ಭಾರತೀಯ ಸೇನಾಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕೇಂದ್ರ ಸರ್ಕಾರ ನಿವೃತ್ತ ಲೆ. ಜನರಲ್​ ಅನಿಲ್ ಚೌಹಾಣ್​ ಅವರನ್ನು ನೇಮಿಸಿದೆ.

Ad Widget . Ad Widget .

ಈಸ್ಟರ್ನ್​ ಕಮಾಂಡ್ ಚೀಫ್​ ಆಗಿದ್ದ ಅನಿಲ್ ಚೌಹಾಣ್​ 2021ರ ಮೇನಲ್ಲಿ ನಿವೃತ್ತರಾಗಿದ್ದರು. ಇದೀಗ ಅವರನ್ನು ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

Ad Widget . Ad Widget .

ಅಲ್ಲದೆ ಇವರು ಕೇಂದ್ರ ಸರ್ಕಾರದ ಸೇನಾ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ.

ಭಾರತೀಯ ಸೇನಾಪಡೆಗಳ ಮುಖ್ಯಸ್ಥ (ಸಿಡಿಸಿ) ಆಗಿದ್ದ ಬಿಪಿನ್ ರಾವತ್ 2021ರ ಡಿ. 8ರಂದು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ್ದ ಹೆಲಿಕಾಪ್ಟರ್ ಪತನದಲ್ಲಿ ಸಾವಿಗೀಡಾಗಿದ್ದರು. ಈ ದುರಂತದಲ್ಲಿ ರಾವತ್ ಅವರ ಪತ್ನಿ ಮಧುಲಿಕಾ ಸೇರಿ 13 ಒಟ್ಟು 13 ಮಂದಿ ಮೃತಪಟ್ಟಿದ್ದರು. ಅದಾಗಿ ಒಂಬತ್ತು ತಿಂಗಳ ಬಳಿಕ ಸರ್ಕಾರ ನೂತನ ಸಿಡಿಸಿ ಅವರನ್ನು ನೇಮಿಸಿದೆ.

Leave a Comment

Your email address will not be published. Required fields are marked *