Ad Widget .

ಸಂಘ ಪರಿವಾರದ ನಾಯಕರ ಬಳಿಯೂ ಆಯುಧಗಳಿವೆ, ಯಾಕೆ ಅವರ ಮೇಲೆ ದಾಳಿಯಾಗ್ತಿಲ್ಲ – ಭಾಸ್ಕರ ಪ್ರಸಾದ್

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಪಿಎಫ್ ಐ ಮುಖಂಡರ ಮನೆಗಳ ಪೊಲೀಸರು ದಾಳಿ ಮಾಡಿ 40 ಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಎಸ್​ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಖಂಡಿಸಿದ್ದಾರೆ.

Ad Widget . Ad Widget .

ಪೊಲೀಸರು ಕೇಂದ್ರ ಸರ್ಕಾರದ ಅಣತಿಯಂತೆ ಪೊಲೀಸರು ದಾಳಿ ಮಾಡಿದ್ದಾರೆ. ಪ್ರತಿಭಟನೆ ಮಾಡಬಹುದು ಎನ್ನುವ ಕಾರಣಕ್ಕೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಎಷ್ಟೇ ಜನರ ಮನೆ ಮೇಲೆ ದಾಳಿ ನಡೆಸಿದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪಿಎಫ್​ಐ ಮೇಲಿನ ದಾಳಿಗೆ ಕಾಂಗ್ರೆಸ್​​ ಸಹ ಬೆಂಬಲಿಸಿದೆ. ಸಂಘಟನೆಯ ಬಗ್ಗೆ ಇವರಿಗೆ ಅಷ್ಟೇಕೆ ಭೀತಿ? ಎಂದು ಪ್ರಶ್ನಿಸಿದರು.

Ad Widget . Ad Widget .

ಆರ್‌ಎಸ್‌ಎಸ್ ಮತ್ತು ಸಂಬಂಧಿತ ಸಂಘಟನೆಗಳು ದೇಶದ ಭಾವೈಕ್ಯತೆಗೆ ಅಪಾಯ ತಂದೊಡ್ಡುವ ಚಟುವಟಿಕೆ ನಡೆಸುತ್ತಿವೆ. ಆದರೆ ಎಂದಿಗೂ ಈ ಸಂಘಟನೆಗಳ ಮೇಲೆ ದಾಳಿ ನಡೆದಿಲ್ಲ. ಆರ್‌ಎಸ್‌ಎಸ್ ಮತ್ತು ಅದರ ಪರಿವಾರದ ಸಂಘಟನೆಗಳಾದ ಭಜರಂಗದಳ, ವಿಶ್ವ ಹಿಂದೂ ಪರಿಷತ್, ಶ್ರೀರಾಮಸೇನೆಗಳ ನಾಯಕರ ಬಳಿ ಆಯುಧಗಳಿವೆ. ಆದರೂ ಅವರ ಮೇಲೆ ಎಂದಿಗೂ ಎನ್‌ಐಎ ದಾಳಿ ಮಾಡಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದರು.

Leave a Comment

Your email address will not be published. Required fields are marked *