Ad Widget .

ರಾಜ್ಯದಲ್ಲಿ ಮುಂದುವರಿದ ಆಪರೇಶನ್ ಪಿಎಫ್ಐ| ರಾತ್ರೋರಾತ್ರಿ ಹಲವು ಮಂದಿ ಎನ್ಐಎ ವಶಕ್ಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಪಿಎಫ್‌ಐ ಸಂಘಟನೆ ಮೇಲೆ ಎನ್‌ಐಎ ಏಕಕಾಲಕ್ಕೆ ದಾಳಿ ನಡೆಸುವ ಮೂಲಕ ಉಗ್ರ ಕೃತ್ಯ, ಕೋಮುಗಲಭೆಗಳಲ್ಲಿ ತೊಡಗಿರುವ ಪಿಎಫ್‌ಐ ಸಂಘಟನೆಗೆ ರಾಷ್ಟ್ರೀಯ ತನಿಖಾ ದಳ ಶಾಕ್ ನೀಡಿದೆ. ದಕ್ಷಿಣ ಕನ್ನಡ, ಮಂಗಳೂರು, ಚಿತ್ರದುರ್ಗ, ಬೆಳಗಾವಿ, ವಿಜಯಪುರ ಜಮಖಂಡಿ, ಹುಬ್ಬಳ್ಳಿ, ಬಾಗಲಕೋಟೆ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, ಹಲವರನ್ನು ವಶಕ್ಕೆ ಪಡೆಯಲಾಗಿದೆ.

Ad Widget . Ad Widget .

ಎನ್ ಐ ಎ ಮಾಹಿತಿ ಆಧರಿಸಿ ರಾಜ್ಯ ಪೊಲೀಸರಿಂದ ಪಿಎಫ್‌ಐ ಸಂಘಟನೆ ಮುಖಂಡರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಇದುವರೆಗೂ 45 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

Ad Widget . Ad Widget .

ಚಿತ್ರದುರ್ಗದ ಪಿಎಫ್‌ಐ ಮುಖಂಡ ಅಫನ್ ಅಲಿ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಚಿಕ್ಕಪೇಟೆ ಬಡಾವಣೆ ನಿವಾಸಿ ಅಫನ್ ಅಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಚಿತ್ರದುರ್ಗ ನಗರದ ಕೋಟೆ ಠಾಣೆಯಲ್ಲಿ ಅಫನ್ ಅಲಿಯನ್ನು ಎಸ್‌ಪಿ ಕೆ.ಪರಶುರಾಮ್, ಡಿವೈಎಸ್‌ಪಿ ಅನಿಲ್ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದಾರೆ.

ವಿಜಯಪುರದಲ್ಲೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಜಿಲ್ಲೆಯ ಪಿಎಫ್‌ಐ ಅಧ್ಯಕ್ಷ ಆಶ್ಪಾಕ್ ಜಮಖಂಡಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಪೊಲೀಸರೊಂದಿಗೆ ಆಶ್ಪಾಕ್ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಜೆ.ಎಂ.ರಸ್ತೆಯಲ್ಲಿರುವ ಆಶ್ಪಾಕ್ ನಿವಾಸದ ಮಾಹಿತಿ ಪಡೆದುಕೊಂಡು ದಾಳಿ ನಡೆಸಿ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ,
ಬೆಳಗಾವಿ, ಜಮಖಂಡಿ, ಮೂರು ಕಡೆಗಳಲ್ಲಿ NIA ದಾಳಿ ನಡೆದಿದೆ ಎಂಬ ಮಾಹಿತಿ ಸಿಕ್ಕಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಪಿಎಫ್‌ಐ ಕಾರ್ಯಕರ್ತರ ನಿವಾಸಗಳ ಮೇಲೆ ಎಸ್‌ಪಿ ಜಯಪ್ರಕಾಶ ನೇತೃತ್ವದಲ್ಲಿ ದಾಳಿ ನಡೆಸಿದ್ದು, ಶಾಂತಿ ಕದಡಿರುವ ಆರೋಪ ಹಿನ್ನೆಲೆ ಪಿಎಫ್‌ಐ ಜಿಲ್ಲಾಧ್ಯಕ್ಷ ಅಸ್ಗರ್ ಅಲಿ ಸೇರಿದಂತೆ 7 ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Leave a Comment

Your email address will not be published. Required fields are marked *