Ad Widget .

ಇಂದು ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಸಂಸ್ಕಾರ| ಟೋಕಿಯೋ ತಲುಪಿದ ಮೋದಿ

ಸಮಗ್ರ ನ್ಯೂಸ್: ಜುಲೈ 8 ರಂದು ನಾರಾ ನಗರದಲ್ಲಿ ಪ್ರಚಾರ ಭಾಷಣದ ವೇಳೆ ಗುಂಡಿನ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತಿಮ ಸಂಸ್ಕಾರ ಇಂದು ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಟೋಕಿಯೊ ತಲುಪಿದ್ದಾರೆ.

Ad Widget . Ad Widget .

ಓಸಾಕಾದ ಪೂರ್ವದಲ್ಲಿರುವ ನಾರಾದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 11:30 ಕ್ಕೆ ಅಬೆ ಅವರು ಚುನಾವಣಾ ಪ್ರಚಾರ ಭಾಷಣ ಮಾಡುವಾಗ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಅಂದು ಸಂಜೆ ಸಂಜೆ 5:03 ಕ್ಕೆ ಅಬೆ ನಿಧನರಾದರು ಎಂದು ಘೋಷಿಸಲಾಗಿತ್ತು.

Ad Widget . Ad Widget .

ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಗೆ ವಿದೇಶಿ ಗಣ್ಯರಿಗೆ ಆತಿಥ್ಯ ವಹಿಸಲು ಸಿದ್ಧತೆ ನಡೆಸುತ್ತಿರುವ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ವಿಧಿಸಿದ್ದು, ಹಲವಾರು ವಿದೇಶಿ ಗಣ್ಯರು ಭಾಗವಹಿಸಲಿದ್ದಾರೆ.