Ad Widget .

ಬೆಳ್ತಂಗಡಿ: ಸಂಭಾವ್ಯ ಅಪಘಾತ ತಪ್ಪಿಸಲು ಹೋಗಿ ಮನೆಗೆ ಡಿಕ್ಕಿ ಹೊಡೆದ ಲಾರಿ

ಸಮಗ್ರ ನ್ಯೂಸ್: ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಲು ಹೋದ ಲಾರಿಯೊಂದು ರಸ್ತೆ ಬದಿಯ ಮನೆಗೆ ಢಿಕ್ಕಿ ಹೊಡೆದ ಘಟನೆ ನಿಡಿಗಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

Ad Widget . Ad Widget .

ಅತಿವೇಗದಲ್ಲಿ ಬಂದ ಬಸ್ ಲಾರಿಯನ್ನು ಓವರ್ ಟೇಕ್ ಮಾಡಿದ್ದು, ಈ ಸಂದರ್ಭ ಅಪಘಾತ ತಪ್ಪಿಸಲು ಲಾರಿ ಚಾಲಕ ವಾಹನವನ್ನು ರಸ್ತೆ ಬದಿಗೆ ತಂದಿದ್ದಾನೆ.

Ad Widget . Ad Widget .

ಈ ವೇಳೆ ಲಾರಿಯಲ್ಲಿ ಮರದ ದಿಮ್ಮಿಗಳು ತುಂಬಿದ್ದರಿಂದ ನಿಯಂತ್ರಣ ಕಳೆದುಕೊಂಡ ಲಾರಿಯು ರಸ್ತೆ ಬದಿಯಲ್ಲಿದ್ದ ಹಳೆ ಮನೆಗೆ ನುಗ್ಗಿದ್ದು ,ಮನೆಯ ಮೇಲ್ಛಾವಣಿ ಕುಸಿದಿದೆ. ಈ ಮನೆಯಲ್ಲಿ ಯಾರೂ ವಾಸವಿಲ್ಲದ ಕಾರಣ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಲಾರಿ ಜಖಂಗೊಂಡಿದ್ದು, ಬಸ್ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *