Ad Widget .

ಅಭಿಮಾನಿಗಳತ್ತ ಕೈಬೀಸುವ ವೇಳೆ ಕಾಲು ಜಾರಿ ಕುಸಿದ ಮಾಜಿ ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಕಾರ್ಯಕ್ರಮವೊಂದರಲ್ಲಿ ಅಭಿಮಾನಿಗಳತ್ತ ಕೈಬೀಸುವ ವೇಳೆ ಮಾಜಿ ಸಿದ್ದರಾಮಯ್ಯ ಕಾಲು ಜಾರಿ ಪಕ್ಕದ ಟೀಪಾಯಿ ಮೇಲೆ ಕುಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

Ad Widget . Ad Widget .

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಅವರ 60 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ಸಮಯದಲ್ಲಿ ವೇದಿಕೆ ಏರಿ ಆಗಮಿಸಿದ ಸಿದ್ದರಾಮಯ್ಯ ಅವರತ್ತ ಅಭಿಮಾನಿಗಳು ಕೈಬೀಸಿದರು.

Ad Widget . Ad Widget .

ಕೈಬೀಸುತ್ತಲೇ ಜನರೆಡೆಗೆ ನೋಡಿಕೊಂಡು ಬಂದ ಸಿದ್ದರಾಮಯ್ಯ, ವೇದಿಕೆ ಮೇಲೆ ಬಿದ್ದಿದ್ದ ನೀರಿನ ಬಾಟಲ್‌ ಅನ್ನು ಗಮನಿಸಿಲ್ಲ. ಅದರ ಮೇಲೆ ಕಾಲಿಟ್ಟ ಕೂಡಲೆ ಜಾರಿ ಪಕ್ಕದ ಟೀಪಾಯಿ ಮೇಲೆ ಕುಸಿದರು.

ಸ್ಥಳದಲ್ಲಿದ್ದ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಹಾಗೂ ಅಂಗರಕ್ಷಕರು ಸಿದ್ದರಾಮಯ್ಯ ಅವರನ್ನು ಎತ್ತಿ ಹಿಡಿದರು. ಕುಸಿದ ವೇಳೆಯಲ್ಲಿ ಕೆಲಕಾಲ ಆತಂಕ ಮೂಡಿತ್ತಾದರೂ ತಕ್ಷಣವೇ ಎಲ್ಲರೂ ಸಹಾಯಕ್ಕೆ ಬಂದಿದ್ದರಿಂದ ಯಾವುದೇ ಅಪಾಯ ಆಗಿಲ್ಲ. ನಂತರ ಚೇತರಿಸಿಕೊಂಡ ಸಿದ್ದರಾಮಯ್ಯ ಮತ್ತೆ ಜನರತ್ತ ಕೈಬೀಸಿ ಕಾರ್ಯಕ್ರಮದಲ್ಲಿ ಭಾಗಿಯಾದರು.

Leave a Comment

Your email address will not be published. Required fields are marked *