Ad Widget .

“ನಿಮ್ಮನ್ನು ಕೇವಲ ಹತ್ತೇ ಸೆಕೆಂಡಿನಲ್ಲಿ ಮುಗಿಸುತ್ತೇವೆ” – ಆರ್ ಎಸ್ಎಸ್ ಗೆ ಬೆದರಿಕೆ ಹಾಕಿದ ಎಸ್ಡಿಪಿಐ ಮುಖಂಡ

ಸಮಗ್ರ ನ್ಯೂಸ್: ಪಿಎಫ್‌ಐ ಹಾಗೂ ಎಸ್ ಡಿ ಪಿ ಐ ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ಎನ್‌ಐಎ ದಾಳಿ ನಡೆಸಿ ಹಲವರನ್ನು ಬಂಧಿಸಿರುವ ಬೆನ್ನಲ್ಲೇ ಕೇರಳದಲ್ಲಿ ಎಸ್ ಡಿ ಪಿ ಐ ಹಾಗೂ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಅಲ್ಲದೇ ಆರ್ ಎಸ್ ಎಸ್ ಮುಖಂಡರಿಗೆ ಬೆದರಿಕೆ ಹಾಕಿದ್ದಾರೆ.

Ad Widget . Ad Widget .

ಎನ್ ಐಎ ದಾಳಿ ಖಂಡಿಸಿ ಎರ್ನಾಕುಲಂನಲ್ಲಿ ಪ್ರತಿಭಟನೆ ನಡೆಸಿರುವ ಎಸ್ ಡಿ ಪಿ ಐ ಸಂಘಟನೆ, ಕೇಂದ್ರ ಸರ್ಕಾರ ಹಾಗೂ ಆರ್ ಎಸ್ ಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ವೇಳೆ ಎಸ್ ಡಿ ಪಿ ಐ ಮುಖಂಡ ಶಿಜೂ ಬಕ್ಕರ್ ಆರ್ ಎಸ್ ಎಸ್ ಪ್ರಮುಖರಿಗೆ ಧಮ್ಕಿ ಹಾಕಿದ್ದು, ಕೇವಲ 10 ಸೆಕೆಂಡ್ ಗಳಲ್ಲಿ ಆರ್ ಎಸ್ ಎಸ್ ಪ್ರಮುಖರನ್ನು ಮುಗಿಸುತ್ತೇವೆ. ಆರ್ ಎಸ್ ಎಸ್ ನಾಯಕರು ಬೀದಿನಾಯಿಗಳು ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾರೆ.

Ad Widget . Ad Widget .

ನಾವು ಗೆಲ್ಲುತ್ತೀವೋ ಸೋಲುತ್ತೀವೋ, ಏನೇ ಆದರೂ ಜೀವ ಕೊಡಲು ಸಿದ್ಧ. 100 ಅಲ್ಲ 500 ಮಂದಿಯನ್ನಾದರೂ ಬಂಧಿಸಿ. ಯಾವ ಕಾರಣಕ್ಕೂ ನಿಮ್ಮ ಮುಂದೆ ಜಗ್ಗಲ್ಲ. ಆರ್ ಎಸ್ ಎಸ್ ಪ್ರಮುಖರನ್ನು ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.

Leave a Comment

Your email address will not be published. Required fields are marked *