Ad Widget .

ನೇಪಥ್ಯದತ್ತ ಸಾಗುತ್ತಿದೆ ರಾಜಾಶ್ರಯದ ಮೈಸೂರು ಮಲ್ಲಿಗೆ! ಬೆಳೆಯುವವರಿಲ್ಲದೆ ಕಡಿಮೆಯಾಗುತ್ತಿದೆ ಮಲ್ಲಿಗೆಯ ಘಮ

ಸಮಗ್ರ ನ್ಯೂಸ್: ಸಾಮಾನ್ಯವಾಗಿ ಮೈಸೂರಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನು ಮೈಸೂರು ಮತ್ತು ಮಂಡ್ಯದ ಮಲ್ಲಿಗೆಯ ಸುವಾಸನೆಯನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ಮೈಸೂರಿನ ಸುತ್ತಮುತ್ತ ಮತ್ತು ಮಂಡ್ಯದ ಶ್ರೀರಂಗ ಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುವ ಮಲ್ಲಿಗೆ ಹೂವು ಮೈಸೂರು ಮಲ್ಲಿಗೆ ಎಂದೇ ಪ್ರಸಿದ್ಧಿ ಪಡೆದಿದ್ದು ಸುವಾಸನೆಯಿಂದಾಗಿ.

Ad Widget . Ad Widget .

ಸಾಮಾನ್ಯವಾಗಿ ಮೈಸೂರು ಮಲ್ಲಿಗೆಯ ಘಮಲನ್ನು ಪಡೆದು ಮುಡಿದು ತೆರಳದೇ ಇರುತ್ತಿರಲಿಲ್ಲ. ಆದರೆ ಸದ್ಯ ಇದೇ ಮೈಸೂರು ಮಲ್ಲಿಗೆ ಬೆಳೆಯುವವರೇ ಇಲ್ಲದಂತಾಗಿದೆ. ತಮಿಳುನಾಡಿನ ಸತ್ಯಮಂಗಲ ಮತ್ತು ಕೊಯಮತ್ತೂರುಗಳಲ್ಲಿ ಬೆಳೆದ ಮಲ್ಲಿಗೆ ಮೈಸೂರಿಗೆ ಸದ್ಯ ಬರುತ್ತಿದೆ. ಈ ಕೇಂದ್ರದಿಂದಲೇ ಮೈಸೂರು ಮಲ್ಲಿಗೆ ಹೆಸರಿನಲ್ಲಿ ಬೆಂಗಳೂರು, ಹಾಸನ, ಭದ್ರಾವತಿ, ಶಿವಮೊಗ್ಗ, ಮಂಗಳೂರು ಮುಂತಾದ ಕಡೆ ಕಳುಹಿಸಲಾಗುತ್ತದೆ. ಮೈಸೂರು ಮಲ್ಲಿಗೆ ಎರಡು ವರ್ಷಗಳಿಗೊಮ್ಮೆ ಮಾತ್ರವೇ ಫಲ ಕೊಡುವ ಹೂವು.

Ad Widget . Ad Widget .

ರಾಜಾಶ್ರಯದಲ್ಲಿ ಹೆಚ್ಚು ಪ್ರೋತ್ಸಾಹ ಸಿಕ್ಕಿದ್ದರಿಂದ ಒಂದು ಕಾಲಕ್ಕೆ ಮಲ್ಲಿಗೆಗೆ ಅತಿ ಹೆಚ್ಚು ವೈಭವವಿತ್ತು. ಆಗಿನ ಕಾಲದಲ್ಲಿಯೇ ಅರಮನೆಯಲ್ಲಿ ಮಲ್ಲಿಗೆ ಹೂವನ್ನು ಖರೀದಿಸಿ ಬೆಳೆಗಾರರನ್ನು ಪ್ರೋತ್ಸಾಹಿಸುತ್ತಿದ್ದರು. ಕಾಲಂತರದಲ್ಲಿ ಈ ಮಲ್ಲಿಗೆಯ ವೈಭವ ಮರೆಯಾಗುತ್ತಿದೆ ಎಂಬುದು ನೋವಿನ ಸಂಗತಿ.

Leave a Comment

Your email address will not be published. Required fields are marked *