ಸಮಗ್ರ ನ್ಯೂಸ್: ಮೈಸೂರು ದಸರಾ ಮಹೋತ್ಸವ, ಮಹಿಳಾ ಮತ್ತು ಮಕ್ಕಳ ದಸರಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸೆ. 27 ರಿಂದ ಅ.1 ರವರೆಗೆ ಮಹಿಳೆಯರಿಗಾಗಿ ಮಹಿಳಾ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಹಿಳಾ ದಸರಾ ಅಂಗವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಸೆ. 27 ರಂದು ಬೆಳಗ್ಗೆ 7:30 ರಿಂದ 9:30 ಗಂಟೆಯವರೆಗೆ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(ಶಾಂತ-9380425522), ಸೆ. 28 ರಂದು 12 ರಿಂದ 1 ಗಂಟೆವರೆಗೆ ಜೆ.ಕೆ. ಮೈದಾನದಲ್ಲಿ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ. ದೂರವಾಣಿ ಸಂಖ್ಯೆ: (ಮಂಜುಳ ಇ.ಡಿ.-9590027794).
ಸೆ.28 ರಂದು 1 ರಿಂದ 2 ಗಂಟೆಯವರೆಗೆ ಜೆ.ಕೆ. ಮೈದಾನದಲ್ಲಿ ಒಲೆರಹಿತ ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ದೂರವಾಣಿ ಸಂಖ್ಯೆ: (ಸರೋಜ ಮೇಲ್ವಿಚಾರಕರು-9880239482). ಸೆ. 29 ರಂದು ಮಧ್ಯಾಹ್ನ 2:30 ರಿಂದ 3.30 ರವರೆಗೆ ಜೆ.ಕೆ. ಮೈದಾನದಲ್ಲಿ ಕೇಶ ವಿನ್ಯಾಸ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ದೂರವಾಣಿ ಸಂಖ್ಯೆ(ವಿದ್ಯಾ ಓಂಕಾರ ಗೌಡ ಹಿರಿಯ ಮೇಲ್ವಿಚಾರಕಿ-8073227321). ಸೆ.30 ರಂದು ಸಂಜೆ 4ರಿಂದ 5 ಗಂಟೆವರೆಗೆ ಜೆ.ಕೆ. ಮೈದಾನದಲ್ಲಿ ವೆಜಿಟೇಬಲ್ ಕಾರ್ವಿಂಗ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ದೂರವಾಣಿ ಸಂಖ್ಯೆ (ಸಹನ ಮೇಲ್ವಿಚಾರಕಿ-97415331950) ಅನ್ನು ಸಂಪರ್ಕಿಸಬಹುದಾಗಿದೆ.
ಪುನೀತ್ ರನ್ನು ದೊಡ್ಡ ಸ್ಕ್ರೀನ್ ನಲ್ಲಿ ಕಂಡು ಸಂಭ್ರಮಿಸಿದ ಮಾವುತರು,ಕಾವಾಡಿ ಮಕ್ಕಳು
ಬಹುತೇಕ ಕಾಡಿನಲ್ಲೇ ವಾಸಿಸುವ ಗಜಪಡೆಯ ಮಾವುತರ, ಕಾವಾಡಿಗಳ ಮಕ್ಕಳು ದೊಡ್ಡ ತೆರೆಯ ಮೇಲೆ ಪುನೀತ್ ರಾಜ್‌ಕುಮಾರ್ ಅವರನ್ನು ಕಂಡೊಡನೆ ಹರ್ಷೋದ್ಘಾರ ಮಾಡಿ ಸಂಭ್ರಮಿಸಿದ್ದು ವಿಶೇಷವಾಗಿತ್ತು. ಇದು ಅರಮನೆ ಆವರಣದಲ್ಲಿ ಕಂಡುಬಂದ ದೃಶ್ಯ.
ರಾಷ್ಟ್ರೀಯ ಚಲನಚಿತ್ರ ದಿನದ ಅಂಗವಾಗಿ ಗಜಪಡೆಯ ಮಾವುತರು, ಕಾವಾಡಿಗಳ ಕುಟುಂಬಸ್ಥರಿಗೆ ಮೈಸೂರು ಅರಮನೆ ಆವರಣದಲ್ಲಿ ಸಿನಿಮಾ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭ ನಟ ದಿ. ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಮಾ ಪ್ರದರ್ಶಿಸಲಾಯಿತು. ಈ ವೇಳೆ ಬಿಗ್ ಸ್ಕ್ರೀನ್‌ನಲ್ಲಿ ಅಪ್ಪು ಕಂಡು ಪುಳಕಿತರಾದ ಮಕ್ಕಳು ಸಿಳ್ಳೆ ಹೊಡೆದು, ಅಪ್ಪು ಬಾಸ್ ಎಂದು ಕೂಗತೊಡಗಿದರು. ನಮಗೆ ಅಪ್ಪು ಅಂದ್ರೆ ಇಷ್ಟ, ಅಪ್ಪು ನಮ್ ಗುರು ಎನ್ನುತ್ತಾ ಅವರ ಫೈಟ್ ನೋಡಿ ಎಂಜಾಯ್ ಮಾಡಿದರು.
ಬಳಿಕ ʻಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡುʼ ಚಿತ್ರ ಪ್ರದರ್ಶನ ನಡೆಯಿತು. ಸದಾ ಕಾಡಿನಲ್ಲಿಯೇ ಇರುವ ಮಾವುತರು ಹಾಗೂ ಕಾವಾಡಿಗಳು ದೊಡ್ಡ ತೆರೆಯಲ್ಲಿ ಸಿನಿಮಾ ನೋಡುವುದು ಅಪರೂಪವಾಗಿದ್ದರಿಂದ, ಈ ಸಿನಿಮಾ ಪ್ರದರ್ಶನ ಅವರಲ್ಲಿ ವಿಶೇಷ ಸಂಭ್ರಮ ತುಂಬಿತ್ತು.