Ad Widget .

ನಾಡಹಬ್ಬ ದಸರಾ ಪ್ರಯುಕ್ತ | ಊಟಿ ಸೇರಿದಂತೆ ವಿವಿಧ ಕಡೆ ಸಾರಿಗೆ ಸಂಸ್ಥೆಯಿಂದ ವಿಶೇಷ ಪ್ಯಾಕೇಜ್‌

ಸಮಗ್ರ ನ್ಯೂಸ್: ನಾಡಹಬ್ಬ ದಸರಾ ಪ್ರಯುಕ್ತ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಒಂದು ದಿನದ ವಿಶೇಷ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ ಸುತ್ತಾಡಲು ಅವಕಾಶವಿದ್ದು, ವಯಸ್ಕರಿಗೆ ₹ 400, ಮಕ್ಕಳಿಗೆ 250 ರೂ ದರ ನಿಗದಿಪಡಿಸಿದೆ.

Ad Widget . Ad Widget . Ad Widget .

ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್. ( ವಯಸ್ಕರಿಗೆ 450ರೂ , ಮಕ್ಕಳಿಗೆ 250ರೂ)

ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ವಯಸ್ಕರಿಗೆ ರೂ300 ಮಕ್ಕಳಿಗೆ 175ರೂ)

ಮೈಸೂರು ನಗರ: ನಗರ ಬಸ್ ನಿಲ್ದಾಣದಿಂದ ಅರಮನೆ ರಸ್ತೆ, ಮೈಸೂರು ಕೇಂದ್ರೀಯ ಬಸ್ ನಿಲ್ದಾಣ ರಸ್ತೆ, ಎಲ್.ಐ.ಸಿ ವೃತ್ತ, ಬಂಬೂ ಬಜಾರ್ ರಸ್ತೆ, ರೈಲ್ವೆ ನಿಲ್ದಾಣ ವೃತ್ತ, ಜೆ.ಎಲ್.ಬಿ ರಸ್ತೆ ಮತ್ತು ನಗರ ಬಸ್ ನಿಲ್ದಾಣ (ವಯಸ್ಕರಿಗೆ 200ರೂ , ಮಕ್ಕಳಿಗೆ 150ರೂ).

ಮೈಸೂರು ದರ್ಶಿನಿ: ನಗರ ವೋಲ್ವೋ ವಾಹನದಲ್ಲಿ ಪ್ರಯಾಣಿಸಲು ಅವಕಾಶವಿದ್ದು, ನಂಜನಗೂಡು, ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ, ಶ್ರೀರಂಗಪಟ್ಟಣ, ಕೆ.ಆರ್.ಎಸ್‌. (ವಯಸ್ಕರಿಗೆ 400, ಮಕ್ಕಳಿಗೆ 200).

ಮಡಿಕೇರಿ ಪ್ಯಾಕೇಜ್ (ಐರಾವತ ಕ್ಲಬ್‌ ಕ್ಲಾಸ್‌): ನಿಸರ್ಗಧಾಮ-ಗೋಲ್ಡನ್ ಟೆಂಪಲ್-ಹಾರಂಗಿ ಜಲಾಶಯ-ರಾಜಾ ಸೀಟ್-ಅಬ್ಬೀಫಾಲ್ಸ್ (ವಯಸ್ಕರಿಗೆ: 1,200 ಮಕ್ಕಳಿಗೆ 1000)

ಊಟಿ ಪ್ಯಾಕೇಜ್: ಊಟಿ-ಬಟಾನಿಕಲ್ ಗಾರ್ಡನ್-ಇಟಾಲಿಯನ್ ಮತ್ತು ರೋಸ್ ಗಾರ್ಡನ್- ಬೋಟ್ ಹೌಸ್ (ವಯಸ್ಕರಿಗೆ 1,600, ಮಕ್ಕಳಿಗೆ 1200).

ಅ.1ರಿಂದ ಅ.10ರವರೆಗೆ ಬಸ್‌ಗಳ ಕಾರ್ಯಾಚರಿಸಲಿದ್ದು, ಇ-ಟಿಕೇಟ್ ಬುಕಿಂಗ್‌ ಅನ್ನು ksrtc.karnataka.gov.in ವೆಬ್‌ಸೈಟ್‌ ಮುಖಾಂತರ, ಮೊಬೈಲ್ ಬುಕಿಂಗ್ ಹಾಗೂ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *