Ad Widget .

ಸುಳ್ಯ: ಬೈಕ್-ರಿಕ್ಷಾ ನಡುವೆ ಭೀಕರ ಅಪಘಾತ| ಬೈಕ್ ಸವಾರ ಸಾವು, ಮತ್ತೊಬ್ಬ ಗಂಭೀರ

ಸಮಗ್ರ ನ್ಯೂಸ್: ಬೈಕ್ ಮತ್ತು‌ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಜಖಂಗೊಂಡ ಘಟನೆ ಮಾಣಿ- ಮೈಸೂರು‌ ರಾ.ಹೆದ್ದಾರಿಯ ಸುಳ್ಯ‌ ಸಮೀಪದ ಪರಿವಾರಕಾನ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ಕೆವಿಜಿ ಐಟಿಐ ವಿದ್ಯಾರ್ಥಿ ಪ್ರತೀಕ್ ಎಂದು ಗುರುತಿಸಲಾಗಿದೆ.

Ad Widget . Ad Widget .

ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ತೇಜೇಶ್ವರ ಎಂಬವರ ಮಗ ಪ್ರತೀಕ್ ಇಂದು ಬೆಳಿಗ್ಗೆ ಕಲ್ಲುಗುಂಡಿಯಿಂದ ರಾಘವೇಂದ್ರ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿದ್ದ ತೇಜಸ್ ಎಂಬ ಯುವಕನ ಜೊತೆ ಬೈಕ್‌ನಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಪರಿವಾರಕಾನದ ತಿರುವೊಂದರಲ್ಲಿ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆಯಿತು.

Ad Widget . Ad Widget .

ಪರಿಣಾಮವಾಗಿ ತೀವ್ರ ಜಖಂಗೊಂಡ ಬೈಕ್ ಸವಾರರಿಬ್ಬರನ್ನು ಸ್ಥಳೀಯರು ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದು, ಪ್ರತೀಕ್ ಕೊನೆಯುಸಿರೆಳೆದಿದ್ದಾರೆ. ತೀವ್ರ ಜಖಂ ಗೊಂಡಿರುವ ತೇಜಸ್‌ರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Comment

Your email address will not be published. Required fields are marked *